Benefits Of Betel Leaves: ವೀಳ್ಯದೆಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Amazing Benefits Of Betel Leaves: ಬಾಯಿಗೆ ಸಂಬಂಧಿಸಿದ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ವೀಳ್ಯದೆಲೆ ತಿನ್ನುವುದರಿಂದ ಪರಿಹಾರ ದೊರೆಯುತ್ತದೆ. ಜೀರ್ಣಕ್ರಿಯೆ ಮತ್ತು ತೂಕ ಇಳಿಕೆಗೆ ವೀಳ್ಯದೆಲೆ ಸಹಕಾರಿಯಾಗಿದೆ.

Amazing Benefits Of Betel Leaves: ವೀಳ್ಯದೆಲೆ ಪ್ರತಿಯೊಬ್ಬರಿಗೂ ಗೊತ್ತು. ಎಲ್ಲ ಧರ್ಮಗಳಲ್ಲಿ ಪ್ರತಿಯೊಂದು ಶುಭ ಕಾರ್ಯಗಳಿಗೆ ವೀಳ್ಯದೆಲೆಯನ್ನು ಬಳಸುತ್ತಾರೆ. ಔತಣ ಕೂಟಗಳಲ್ಲಿ ಊಟದ ನಂತರ ಪಾನ್-ಬೀಡ ನೀಡಲಾಗುತ್ತದೆ. ಆಯುರ್ವೇದದಲ್ಲಿ ಸಹ ಈ ತಾಂಬೂಲದ ವರ್ಣನೆ ಇದೆ. ಜಗತ್ತಿನಲ್ಲಿ 90 ಬಗೆಯ ವೀಳ್ಯದೆಲೆ ಪ್ರಭೇದಗಳು ಇವೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ 45 ಪ್ರಭೇದಗಳಿದ್ದು 30 ಬಗೆಯ ವೀಳ್ಯದೆಲೆ ಪಶ್ಚಿಮ ಬಂಗಾಳದಲ್ಲಿವೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಮೈಸೂರು ಚಿಗುರೆಲೆ, ಕರಿಎಲೆ, ಅಂಬಾಡಿ ಎಲೆ ಮುಂತಾದ ವೀಳ್ಯದೆಲೆಗಳು ಸಿಗುತ್ತವೆ. ರಸಭರಿತ ವೀಳ್ಯದೆಲೆ ಅಡಿಕೆ ಹಾಗೂ ಸುಣ್ಣದ ಜೊತೆಗೆ ಸೇವಿಸಿದರೆ ತಾಂಬೂಲವೆಂದು ಕರೆಯಲ್ಪಡುತ್ತದೆ. ನಿಯಮಿತವಾಗಿ ವೀಳ್ಯದೆಲೆ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ವೀಳ್ಯದೆಲೆ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ವೀಳ್ಯದೆಲೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಚಿಕ್ಕಮಕ್ಕಳಿಗೆ ಉಸಿರಾಟದ ತೊಂದರೆಯಾದಾಗ ವೀಳ್ಯದೆಲೆಗೆ ಹರಳೆಣ್ಣೆ ಹಚ್ಚಿ ಬೆಚ್ಚಗೆ ಮಾಡಿ ಎದೆಯ ಮೇಲೆ ಇಡಬೇಕು. ಇದರಿಂದ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

2 /5

ಹೃದಯ ದೌರ್ಬಲ್ಯವಿದ್ದರೆ ವೀಳ್ಯದೆಲೆ ಶರಬತ್ತು ಸೇವನೆ ಮಾಡುವುದು ಒಳ್ಳೆಯದು. ವೀಳ್ಯದೆಲೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳಿವೆ. ಇದರಿಂದ ಅನೇಕ ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ.

3 /5

ವೀಳ್ಯದೆಲೆ ರಸದಲ್ಲಿ ಜೇನು ಬೆರೆಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. ವೀಳ್ಯದೆಲೆಯ ಕಾಂಡ ಅಥವಾ ಬೇರನ್ನು ತೇಯ್ದು ಜೇನುತುಪ್ಪ ಸೇರಿಸಿ ನೆಕ್ಕಿಸಿದರೆ ಚಿಕ್ಕ ಮಕ್ಕಳ ಕಫ-ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.  

4 /5

ಇರುಳುಗಣ್ಣು ನಿವಾರಣೆಗೆ ನಾಲ್ಕೈದು ಹನಿ ವೀಳ್ಯದೆಲೆ ರಸವನ್ನು ಹಾಕಬೇಕು. ನಿಯಮಿತವಾಗಿ ತಾಂಬೂಲ ಸೇವನೆಯಿಂದ ಧ್ವನಿ ಮಧುರವಾಗುತ್ತದೆ. 

5 /5

ಬಾವು ನೋವುಗಳಿಗೆ ವೀಳ್ಯದೆಲೆಯನ್ನು ಬಿಸಿ ಮಾಡಿ ಕಟ್ಟಬೇಕು. ವೀಳ್ಯದೆಲೆ ಸೇವನೆಯು ನೀರಿನ ದಾಹವನ್ನು ಕಡಿಮೆ ಮಾಡುತ್ತದೆ.