ನೀವೂ ಮೊಮೊಸ್ ಪ್ರಿಯರಾ? ಹಾಗಿದ್ದರೆ ತಿನ್ನುವುದಕ್ಕೂ ಮುನ್ನ ಈ ವಿಚಾರ ತಿಳಿದಿರಲಿ

ಮೊಮೊಸ್ ಇಂದು ಎಲ್ಲರ ನೆಚ್ಚಿನ ಜಂಕ್ ಫುಡ್ ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಮೊಮೋಸ್ ಎಲ್ಲರ ಫೇವರಿಟ್. ಕೆಲವರಂತೂ ಒಂದು ಸಲಕ್ಕೆ 10ರಿಂದ 20 ಮೊಮೊಸ್ ಗಳನ್ನೂ ತಿನ್ನುತ್ತಾರೆ.

ನವದೆಹಲಿ : ಮೊಮೊಸ್ (Momos) ಇಂದು ಎಲ್ಲರ ನೆಚ್ಚಿನ ಜಂಕ್ ಫುಡ್ (Junk food) ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಮೊಮೋಸ್ ಎಲ್ಲರ ಫೇವರಿಟ್. ಕೆಲವರಂತೂ ಒಂದು ಸಲಕ್ಕೆ 10ರಿಂದ 20 ಮೊಮೊಸ್ ಗಳನ್ನೂ ತಿನ್ನುತ್ತಾರೆ. ಖಾರ ಮಸಾಲೆಯುಕ್ತ ಕೆಂಪು ಚಟ್ನಿಯೊಂದಿಗೆ ಬಿಸಿ ಬಿಸಿ ಮೊಮೋಸ್ ತಿನ್ನಲು ಕೂತರೆ ಎಷ್ಟು ತಿಂದರೂ ಕಡಿಮೆ ಎನ್ನುವಂತಾಗುತ್ತದೆ. ಮೊಮೋಸ್ ನಲ್ಲಿ ವೆಜ್ ಮತ್ತು ನಾನ್ ವೆಜ್ ಮೊಮೋಸ್ (Nonveg Momos) ಇರುತ್ತದೆ.  ನಾನ್ ವಿಜ್ ಮೊಮೋಸ್ ನಲ್ಲಿ ಚಿಕನ್ ಸ್ಟಫಿಗ್ ಇದ್ದರೆ ವೆಜ್ ಮೊಮೊಸ್ ನಲ್ಲಿ (Veg momos) ಕ್ಯಾಬೆಜ್, ಸೇರಿದಂತೆ ಕೆಲವು ತರಕಾರಿಗಳ ಸ್ಟಫಿಂಗ್ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅಧಿಕ ಮೊಮೋಸ್ ತಿನ್ನುವುದು ಕೂಡಾ  ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೊಮೊಸ್ ತಯಾರಿಸಲು ಮೈದಾ ಉಪಯೋಗಿಸಲಾಗುತ್ತದೆ. ಮೊಮೋಸ್ ಸ್ಟಫಿಂಗ್ ನಲ್ಲಿ ಆರೋಗ್ಯಕರ ಪದಾರ್ಥಗಳಿವೆಯಾದರೂ, ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಧಿಕ ಪ್ರಮಾಣದಲ್ಲಿ ಮೈದಾ ಸೇವನೆ ಮಲಬದ್ಧತೆಗೆ ಕಾರಣವಾಗುತ್ತದೆ. ಜೀರ್ಣಾಂಗ ಪ್ರಕ್ರಿಯೆಯ ಮೇಲೆಯೂ ಪರಿಣಾಮ ಬೀರುತ್ತದೆ.  ಮೈದಾ ಬೇಗನೆ  ಜೀರ್ಣವಾಗದ ಕಾರಣ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. 

2 /5

ರಸ್ತೆ ಬದಿಯ ಬಂಡಿಗಳಲ್ಲಿ ಕಂಡುಬರುವ ಮೊಮೊಗಳ ಸೇವನೆಯು ನೈರ್ಮಲ್ಯದ ದೃಷ್ಟಿಯಿಂದಲೂ ಆರೋಗ್ಯಕರವಲ್ಲ. ಪ್ರತಿದಿನ ಮೊಮೊಸ್  ಸೇವಿಸುವುದರಿಂದ  ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳ್ಳುತ್ತದೆ. ಇದರಿಂದ ಕೆಲವು ದೈಹಿಕ ತೊಂದರೆಗಳು ಎದುರಾಗುತ್ತವೆ. 

3 /5

ಮೊಮೊಸ್ ತಯಾರಿಸಲು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಮೈದಾದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದುದರಿಂದ ಪ್ರತಿದಿನ ಮೊಮೋಸ್ ತಿಂದರೆ ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚಾಗುವ ಅಪಾಯವಿರುತ್ತದೆ. 

4 /5

ಮೊದಲೇ ಹೇಳಿದಂತೆ ಮೊಮೊಸ್ ತಯಾರಿಸಲು ಬೇಕಾಗಿರುವ ಪ್ರಮುಖ ವಸ್ತು ಅಂದರೆ ಮೈದಾ. ಮೈದಾದಲ್ಲಿ ಸ್ಟ್ರಾರ್ಚ್ ಇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸ್ಟ್ರಾರ್ಚ್ ಸೇವಿಸುವುದರಿಂದ  ತೂಕ ಹೆಚ್ಚಾಗುತ್ತದೆ. ಇದಲ್ಲದೆ, ಮೈದಾ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ಹೆಚ್ಚಿಸುತ್ತದೆ.   

5 /5

ಖಾರ ಕೆಂಪು ಚಟ್ನಿ ಜೊತೆಗಿದ್ದರೆ ಮಾತ್ರ ಮೊಮೊಸ್ ತಿನ್ನಲು ರುಚಿ. ಈ ಕೆಂಪು ಚಟ್ನಿ ಆರೋಗ್ಯಕ್ಕೆ ಹಾನಿಕಾರಕ.  ಈ ಚಟ್ನಿ ಸೇವನೆಯಿಂದ ಹೊಟ್ಟೆ ನೋವು, ಗ್ಯಾಸ್ , ಮಲಬದ್ಧತೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಮಸಾಲೆಯುಕ್ತ ಚಟ್ನಿಯನ್ನು ಪ್ರತಿದಿನ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.