How to get rid of wrinkles: ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಅದಕ್ಕೆ ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಮಿಶ್ರಣವನ್ನು ಹಚ್ಚಿಕೊಳ್ಳಿ. ಒಂದು ಚಮಚ ಎಣ್ಣೆಗೆ ಎರಡರಿಂದ ನಾಲ್ಕು ಹನಿ ಜೇನುತುಪ್ಪ ಹಾಕಿ. ಇದನ್ನು ಹಚ್ಚಿ, ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಿರಿ. ಇದರಿಂದ ನಿಮ್ಮ ಮುಖ ಫಳಫಳ ಹೊಳೆಯುತ್ತದೆ.
How to get rid of wrinkles: ವಯಸ್ಸಾದಂತೆ ಮುಖ, ಕಣ್ಣಿನ ಸುತ್ತ ಮತ್ತು ಕತ್ತಿನ ಸುತ್ತ ಸುಕ್ಕುಗಳು ಕಾಣಿಸಿಕೊಳ್ಳುವುದು ಸಹಜ. ಆದರೆ ನಿಮ್ಮ ಆಹಾರಕ್ರಮ ಬದಲಾಯಿಸುವ ಮೂಲಕ ಮತ್ತು ನಿಮ್ಮ ಚರ್ಮದ ಆರೈಕೆಯಲ್ಲಿ ಸ್ವಲ್ಪ ಕಾಳಜಿ ವಹಿಸುವ ಮೂಲಕ ನೀವು ಸುಕ್ಕುಗಳನ್ನು ಕಡಿಮೆ ಮಾಡಬಹುದು. ನೀವು ಪ್ರತಿದಿನ ಈ ಕ್ರಮಗಳನ್ನು ಅನುಸರಿಸುವುದನ್ನು ಮುಂದುವರಿಸಿದರೆ, ನೀವು ಸುಕ್ಕುಗಳಿಂದ ಸಂಪೂರ್ಣ ಪರಿಹಾರವನ್ನು ಪಡೆಯುತ್ತೀರಿ. ಕೆಲವು ಮನೆಮದ್ದುಗಳ ಮೂಲಕ ನೀವು ಸುಕ್ಕುಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿರುವ ತೆಂಗಿನೆಣ್ಣೆಯಲ್ಲಿ ವಿಶೇಷ ವಸ್ತುವನ್ನು ಬೆರೆಸಿ, ನಿಮ್ಮ ಚರ್ಮವನ್ನು ಮೃದುವಾಗಿ ಮತ್ತು ಸುಕ್ಕುಗಳಿಂದ ಮುಕ್ತಗೊಳಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸುಕ್ಕುಗಳನ್ನು ತೊಡೆದುಹಾಕಲು ನೀವು ಮಾರುಕಟ್ಟೆಯಿಂದ ದುಬಾರಿ ಕ್ರೀಮ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಚರ್ಮವನ್ನು ಯುವ ಮತ್ತು ಸುಂದರವಾಗಿ ಮಾಡಬಹುದು. ತೆಂಗಿನೆಣ್ಣೆಯಿಂದ ನಿಮ್ಮ ಸುಕ್ಕುಗಳನ್ನು ಹೇಗೆ ಹೋಗಲಾಡಿಸಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ತೆಂಗಿನ ಎಣ್ಣೆಯಲ್ಲಿರುವ ವಿಟಮಿನ್ ʼಇʼ ಮತ್ತು ಕೊಬ್ಬಿನಾಮ್ಲಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ಇದನ್ನು ತ್ವಚೆಗೆ ಹಚ್ಚುವುದರಿಂದ ಮೊಡವೆ ಮತ್ತು ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ.
ತೆಂಗಿನ ಎಣ್ಣೆಯಲ್ಲಿ ವಿಟಮಿನ್ ʼಇʼ ಇರುತ್ತದೆ. ಆದರೆ ಇದಕ್ಕೆ ಕೆಲವು ಹನಿ ವಿಟಮಿನ್ ʼಇʼ ಸೇರಿಸುವುದರಿಂದ ಅದರ ಪರಿಣಾಮ ಮತ್ತಷ್ಟು ಹೆಚ್ಚುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ, ನಂತರ ಒಂದು ಚಮಚ ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ವಿಟಮಿನ್ ʼಇʼಯನ್ನು ಮಿಶ್ರಣ ಮಾಡಿ. ಇದರಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ಬೆಳಗ್ಗೆ ಎದ್ದ ತಕ್ಷಣ ಇದನ್ನು ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡಿದರೆ ಮುಖದ ಸುಕ್ಕುಗಳು ಮಾಯವಾಗುತ್ತವೆ.
ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಅದಕ್ಕೆ ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಮಿಶ್ರಣವನ್ನು ಹಚ್ಚಿಕೊಳ್ಳಿ. ಒಂದು ಚಮಚ ಎಣ್ಣೆಗೆ ಎರಡರಿಂದ ನಾಲ್ಕು ಹನಿ ಜೇನುತುಪ್ಪ ಹಾಕಿ. ಇದನ್ನು ಹಚ್ಚಿ, ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಿರಿ. ಇದರಿಂದ ನಿಮ್ಮ ಮುಖ ಫಳಫಳ ಹೊಳೆಯುತ್ತದೆ.