ಸರ್ಕಾರಿ ನೌಕರರ ಮೂಲ ವೇತನದಲ್ಲಿ 44% ಹೆಚ್ಚಳ!ಭತ್ಯೆಗಳಲ್ಲಿಯೂ ಏರಿಕೆ !ಕೊನೆಗೂ ಹೊರ ಬಿತ್ತು ಸಂಪೂರ್ಣ ಮಾಹಿತಿ !

8th Pay Commission : 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಪ್ರಮುಖ ಅಪ್‌ಡೇಟ್‌ ಹೊರ ಬಿದ್ದಿದೆ. 
 

8th Pay Commission :ಸಾಮಾನ್ಯವಾಗಿ ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚಿಸುತ್ತದೆ. ಸರ್ಕಾರ ಇದುವರೆಗೆ 7 ವೇತನ ಆಯೋಗಗಳನ್ನು ರಚಿಸಿದೆ.ಕೇಂದ್ರ ಸರ್ಕಾರ 2014ರಲ್ಲಿ 7ನೇ ವೇತನ ಆಯೋಗವನ್ನು ರಚಿಸಿತ್ತು.ಎರಡು ವರ್ಷಗಳ ನಂತರ,ಅಂದರೆ 2016 ರಲ್ಲಿ,ಅದನ್ನು ಜಾರಿಗೆ ತರಲಾಯಿತು. ಹಾಗಾಗಿ ಸರ್ಕಾರ ಈಗ 8 ನೇ ವೇತನ ಆಯೋಗಕ್ಕೆ ಅಧಿಸೂಚನೆಯನ್ನು ಹೊರಡಿಸಿ ಅದನ್ನು ರಚಿಸಿದರೆ ಅದು 2026 ರಲ್ಲಿ ಜಾರಿಯಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

8ನೇ ವೇತನ ಆಯೋಗ ಜಾರಿಗಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗಬಹುದೆಂಬ ನಿರೀಕ್ಷೆ ಇದ್ದರೂ ನಿರಾಸೆ ಮೂಡಿಸಿದೆ.ಆದರೆ, ನೌಕರರ ನಿರೀಕ್ಷೆ ಇನ್ನೂ ಮುಂದುವರಿದಿದೆ.  

2 /9

ನೌಕರರ ಸಂಘಗಳು ಮತ್ತು ಸರ್ಕಾರಿ ಸಂಸ್ಥೆಗಳು 8ನೇ ವೇತನ ಆಯೋಗ ರಚನೆಗೆ ಒತ್ತಾಯಿಸಿ ಹಣಕಾಸು ಸಚಿವಾಲಯಕ್ಕೆ ಹಲವು ಪತ್ರಗಳನ್ನು ಬರೆದು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿವೆ. ಮುಂದಿನ ವೇತನ ಆಯೋಗ ರಚನೆಯಾದರೆ ಆರ್ಥಿಕವಾಗಿ ತುಂಬಾ ಅನುಕೂಲವಾಗಲಿದೆ ಎನ್ನುವುದು ನೌಕರರ ಒತ್ತಾಯ.

3 /9

ಈ ಮಧ್ಯೆ, 8 ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಪ್ರಮುಖ ಅಪ್ಡೇಟ್ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಕೆಲ ದಿನಗಳ ಹಿಂದೆ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಕೂಡಾ ಮಹತ್ವದ ಹೇಳಿಕೆ ನೀಡಿದ್ದಾರೆ.    

4 /9

8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ,ಹೊಸ ವೇತನ ಸಮಿತಿಯನ್ನು ರಚಿಸುವ ಬಗ್ಗೆ ನೌಕರರ ಸಂಘಗಳಿಂದ ಪತ್ರಗಳು ಮತ್ತು ಮನವಿಗಳನ್ನು ಸ್ವೀಕರಿಸಿದೆ ಎಂದು ಹೇಳಿದರು.

5 /9

ಇದಕ್ಕೂ ಮುನ್ನ ಬಜೆಟ್ ನಂತರ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 8ನೇ ವೇತನ ಆಯೋಗ ಜಾರಿಗೆ ಬರಲು ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ  ಸ್ವಲ್ಪ ಸಮಯದ ನಂತರ ಈ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಬಹುದು ಎನ್ನಲಾಗಿದೆ. 

6 /9

ಹೀಗಾಗಿ ಸರ್ಕಾರ ಈಗ 8ನೇ ವೇತನ ಆಯೋಗಕ್ಕೆ ಅಧಿಸೂಚನೆಯನ್ನು ಹೊರಡಿಸಿ ಅದನ್ನು ರಚಿಸಿದರೆ 2026 ರಲ್ಲಿ ಜಾರಿಗೆ ಬರಬಹುದು.ಈ ನಡುವೆ ಫಿಟ್ಮೆಂಟ್ ಅಂಶವನ್ನು ಹೆಚ್ಚಿಸುವ ಬೇಡಿಕೆಗಳು ಜೋರಾಗುತ್ತಿವೆ. ಸದ್ಯ ಕೇಂದ್ರ ಸರ್ಕಾರಿ ನೌಕರರು 2.57 ಪಟ್ಟು ಫಿಟ್‌ಮೆಂಟ್ ಅಂಶವನ್ನು ಪಡೆಯುತ್ತಿದ್ದಾರೆ.ಇದನ್ನು 3.68 ಪಟ್ಟು ಹೆಚ್ಚಿಸಬೇಕೆಂಬ ಬೇಡಿಕೆ ಇದೆ. 

7 /9

7 ನೇ ವೇತನ ಬ್ಯಾಂಡ್‌ನಲ್ಲಿ ಫಿಟ್‌ಮೆಂಟ್ ಅಂಶವನ್ನು 2.57 ಪಟ್ಟು ನಿಗದಿಪಡಿಸಲಾಗಿದೆ.  ಎಂಟನೇ ವೇತನ ಶ್ರೇಣಿಯಲ್ಲಿ ಫಿಟ್‌ಮೆಂಟ್ ಅಂಶವನ್ನು ಕನಿಷ್ಠ 3.68 ಕ್ಕೆ ಹೆಚ್ಚಿಸಲಾಗುವುದು ಎಂದು ನೌಕರರು ಭರವಸೆ ಹೊಂದಿದ್ದಾರೆ.ಇದರ ಪ್ರಭಾವವು ನೇರವಾಗಿ ಮೂಲ ವೇತನದ ಮೇಲೆ ಆಗುತ್ತದೆ.

8 /9

8ನೇ ವೇತನ ಆಯೋಗ ರಚನೆಯಾದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಬದಲಾವಣೆಯಾಗಲಿದೆ. ಇದಲ್ಲದೆ, ತುಟ್ಟಿಭತ್ಯೆ (ಡಿಎ), ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ), ಸಾರಿಗೆ ಭತ್ಯೆ (ಟಿಎ) ನಂತಹ ವಿವಿಧ ಸವಲತ್ತುಗಳು ಮತ್ತು ಭತ್ಯೆಗಳು ಸಹ ಹೆಚ್ಚಾಗುವುದರಿಂದ ನೌಕರರಿಗೆ ಬಂಪರ್ ವೇತನ ಏರಿಕೆಯಾಗುವ ನಿರೀಕ್ಷೆಯಿದೆ.

9 /9

ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.