Bank Locker Charges: ಎಸ್ಬಿಐನಿಂದ ಹಿಡಿದು ಐಸಿಐಸಿಐ ಬ್ಯಾಂಕುಗಳವರೆಗೆ ಯಾವ ಬ್ಯಾಂಕ್ ಲಾಕರ್ ಶುಲ್ಕ ಎಷ್ಟು?

Bank Locker Charges - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯವನ್ನು ಪಡೆಯಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯ ಪಡೆದುಕೊಳ್ಳುವುದು ದುಬಾರಿ ಕೆಲಸ ಎಂದು ಹಲವರು ಭಾವಿಸುತ್ತಾರೆ. 

Bank Locker Charges - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯವನ್ನು ಪಡೆಯಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯ ಪಡೆದುಕೊಳ್ಳುವುದು ದುಬಾರಿ ಕೆಲಸ ಎಂದು ಹಲವರು ಭಾವಿಸುತ್ತಾರೆ. ಆದರೆ. ಅದು ಹಾಗಲ್ಲ. ಶುಲ್ಕ ನೀವು ಪಡೆದುಕೊಳ್ಳುವ ಲಾಕರ್ ನ ಗಾತ್ರವನ್ನು ಅವಲಂಭಿಸಿದೆ. 

 

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೊಂದು ಭಾರಿ ನೆಮ್ಮದಿಯ ಸುದ್ದಿ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Bank Locker Charges - ಹೆಚ್ಚಿನ ಜನರು ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಅಗತ್ಯ ದಾಖಲೆಗಳು ಇತ್ಯಾದಿಗಳ ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಈ ಸೇವೆಗಾಗಿ, ಲಾಕರ್‌ನ ಗಾತ್ರಕ್ಕೆ ಅನುಗುಣವಾಗಿ ಬ್ಯಾಂಕುಗಳು ಶುಲ್ಕವನ್ನು ವಿಧಿಸುತ್ತವೆ. ಕೆಲವು ಬ್ಯಾಂಕ್‌ಗಳು ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಗ್ರಾಹಕರಿಗೆ ಲಾಕರ್‌ಗಳನ್ನು ಸೌಲಭ್ಯ ಒದಗಿಸುತ್ತವೆ. ವಿವಿಧ ಬ್ಯಾಂಕ್‌ಗಳ ಲಾಕರ್‌ಗಳು ಮತ್ತು ಪ್ರದೇಶಕ್ಕೆ ಅನುಗುಣವಾಗಿ ಅವುಗಳ ಶುಲ್ಕಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

2 /5

ಗಾತ್ರ ಮತ್ತು ನಗರವನ್ನು ಆಧರಿಸಿ ಎಸ್‌ಬಿಐನಲ್ಲಿ ಲಾಕರ್‌ಗಳು ರೂ 500 ರಿಂದ ರೂ 3,000 ವರೆಗೆ ಲಭ್ಯ ಇರಲಿವೆ. ಸಣ್ಣ, ಮಧ್ಯಮ ಗಾತ್ರದ ಮತ್ತು ದೊಡ್ಡ ಗಾತ್ರದ ಲಾಕರ್‌ಗಳಿಗೆ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಕ್ರಮವಾಗಿ 2 ಸಾವಿರ, 4 ಸಾವಿರ, 8 ಸಾವಿರ ಮತ್ತು 12 ಸಾವಿರ ಶುಲ್ಕ ವಿಧಿಸಲಾಗುತ್ತದೆ. ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ, ಮಧ್ಯಮ ಗಾತ್ರದ, ದೊಡ್ಡ ಮತ್ತು ಹೆಚ್ಚುವರಿ ದೊಡ್ಡ ಲಾಕರ್‌ಗಳಿಗೆ ಬ್ಯಾಂಕ್ ಕ್ರಮವಾಗಿ ರೂ 1500, ರೂ 3000, ರೂ 6000 ಮತ್ತು ರೂ 9000 ವಿಧಿಸುತ್ತದೆ.

3 /5

ಐಸಿಐಸಿಐ ಬ್ಯಾಂಕ್ ಒಂದು ವರ್ಷದ ಲಾಕರ್ ಬಾಡಿಗೆಯನ್ನು ಮುಂಗಡವಾಗಿ ವಿಧಿಸುತ್ತದೆ. ICICI ನಲ್ಲಿ ಲಾಕರ್ ಸೌಲಭ್ಯ ಪಡೆಯಲು, ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಬ್ಯಾಂಕಿನಲ್ಲಿ ಸಣ್ಣ ಗಾತ್ರದ ಲಾಕರ್‌ಗೆ 1,200 ರಿಂದ 5,000 ರೂ. ಶುಲ್ಕ ವಿಧಿಸಲಾಗುತ್ತದೆ. ಇದೇ ವೇಳೆ ದೊಡ್ಡ ಗಾತ್ರದ ಲಾಕರ್ ಗಾಗಿ 10 ಸಾವಿರದಿಂದ 22 ಸಾವಿರ ರೂ. ಪಾವತಿಸಬೇಕು. ಈ ಶುಲ್ಕದ ಮೇಲೆ ಜಿಎಸ್‌ಟಿ ಪ್ರತ್ಯೇಕವಾಗಿ ವಿಧಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

4 /5

ನೀವು PNB ನಲ್ಲಿ ಲಾಕರ್ ವ್ಯವಸ್ಥೆಯನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ, ವರ್ಷದಲ್ಲಿ 12 ಬಾರಿ ನೀವು ನಮ್ಮ ಲಾಕರ್ ಗೆ ಉಚಿತವಾಗಿ ಭೇಟಿ ನೀಡಬಹುದು. ಹೆಚ್ಚುವರಿ ಭೇಟಿಗಳಿಗಾಗಿ ನೀವು ರೂ 100 ಪಾವತಿಸಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಲಾಕರ್‌ನ ವಾರ್ಷಿಕ ಬಾಡಿಗೆ 1250 ರೂ.ನಿಂದ 10,000 ರೂ. ಇದೆ. ನಗರ ಮತ್ತು ಮೆಟ್ರೋ ನಗರಗಳಿಗೆ ಈ ಶುಲ್ಕ 2 ಸಾವಿರದಿಂದ 10 ಸಾವಿರ ರೂ.ವರೆಗೆ ಇದೆ.

5 /5

ಆಕ್ಸಿಸ್ ಬ್ಯಾಂಕ್‌ನಲ್ಲಿ ನೀವು ಹೊಂದುವ ಲಾಕರ್ ಗೆ ನೀವು ಒಂದು ತಿಂಗಳಲ್ಲಿ ಮೂರು ಉಚಿತ ಭೇಟಿಗಳನ್ನು ನೀಡಬಹುದು. ಲಾಕರ್ ಶುಲ್ಕಗಳು ಮೆಟ್ರೋ ಅಥವಾ ನಗರ ಪ್ರದೇಶದ ಶಾಖೆಯಲ್ಲಿ ರೂ 2,700 ರಿಂದ ಪ್ರಾರಂಭವಾಗುತ್ತವೆ. ಮಧ್ಯಮ ಗಾತ್ರದ ಲಾಕರ್‌ಗೆ, ಈ ಶುಲ್ಕವು 6,000 ರೂ ಆಗಿದ್ದರೆ, ದೊಡ್ಡ ಗಾತ್ರವು 10,800 ರಿಂದ 12,960 ರೂ.ಗಳವರೆಗೆ ಇದೆ.