ಅನೇಕ ವರ್ಷಗಳಿಂದ ಟಿವಿ ಜಗತ್ತನ್ನು ರಿಯಾಲಿಟಿ ಶೋಗಳು ಆಳುತ್ತಿವೆ. ಈ ಹಿಂದೆ ಇಂತಹ ಕಾರ್ಯಕ್ರಮಗಳಲ್ಲಿ ತಜ್ಞರನ್ನು ತೀರ್ಪುಗಾರರನ್ನಾಗಿ ಮಾಡಲಾಗಿತ್ತು.
ಆದರೆ ಕಾಲಾನಂತರದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತೀರ್ಪುಗಾರರಾಗಿ ಆಗಮಿಸಿದ್ದಾರೆ. ಇನ್ನು ಈ ಜಡ್ಜ್ಗಳು ಪಡೆಯುವ ಸಂಭಾವನೆ ನೋಡಿದರೆ ಎಂಥವರಿಗೂ ಶಾಕ್ ಆಗುತ್ತದೆ.
ಶಿಲ್ಪಾ ಶೆಟ್ಟಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅನೇಕ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ವರದಿಗಳ ಪ್ರಕಾರ, 'ಸೂಪರ್ ಡ್ಯಾನ್ಸರ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದ ಶಿಲ್ಪಾ ಶೆಟ್ಟಿ 14 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ರೋಹಿತ್ ಶೆಟ್ಟಿ: ಬಾಲಿವುಡ್ನ ಫೇಮಸ್ ಆಂಡ್ ಟ್ಯಾಲೆಂಟೆಡ್ ನಿರ್ದೇಶಕ ರೋಹಿತ್ ಶೆಟ್ಟಿ 5 ವರ್ಷಗಳಿಂದ 'ಖತ್ರೋನ್ ಕೆ ಕಿಲಾಡಿ' ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಒಂದು ಸಂಚಿಕೆಗೆ ಅವರು 9 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ಹಿಮೇಶ್ ರೇಶ್ಮಿಯಾ: ಗಾಯಕ ಮತ್ತು ಸಂಗೀತ ಸಂಯೋಜಕ ಹಿಮೇಶ್ ರೇಶ್ಮಿಯಾ ಅವರು ಸಿಂಗಿಂಗ್ ರಿಯಾಲಿಟಿ ಶೋ 'ಇಂಡಿಯನ್ ಐಡಲ್' ನ ತೀರ್ಪುಗಾರರಲ್ಲಿ ಒಬ್ಬರು. ಇವರು ಒಂದು ಸಂಚಿಕೆಗೆ ಸುಮಾರು 4 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ಮಲೈಕಾ ಅರೋರಾ: ಮಲೈಕಾ ಅರೋರಾ ಅನೇಕ ಟಿವಿ ಯಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಇಂಡಿಯಾಸ್ ಗಾಟ್ ಟ್ಯಾಲೆಂಟ್'ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಸೀಸನ್ಗೆ ಆಕೆ 1 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.
ನೇಹಾ ಧೂಪಿಯಾ: ಬಾಲಿವುಡ್ ನಟಿ ನೇಹಾ ಧೂಪಿಯಾ ಚಿತ್ರರಂಗದಲ್ಲಿ ಹೆಚ್ಚು ಹೆಸರು ಗಳಿಸದೇ ಇರಬಹುದು. ಆದರೆ 'ರೋಡೀಸ್'ನಲ್ಲಿ ತೀರ್ಪುಗಾರರಾಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇವರು ಒಂದಿ ಸಂಚಿಕೆಗೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ನೇಹಾ ಕಕ್ಕರ್: ನೇಹಾ ಕಕ್ಕರ್ ಭಾರತೀಯ ಚಿತ್ರರಂಗದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. 'ಇಂಡಿಯನ್ ಐಡಲ್' ಕಾರ್ಯಕ್ರಮದ ತೀರ್ಪುಗಾರರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದು,ಈಕೆ ಸಂಚಿಕೆಯೊಂದಕ್ಕೆ 5 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.
ರೆಮೊ ಡಿಸೋಜಾ: ಬಾಲಿವುಡ್ನ ಖ್ಯಾತ ನೃತ್ಯ ನಿರ್ದೇಶಕ ರೆಮೊ ಡಿಸೋಜಾ ನೃತ್ಯ ಲೋಕಕ್ಕೆ ಹೊಸ ಆಯಾಮ ನೀಡಿದವರು. ರೆಮೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ತೀರ್ಪುಗಾರರಾಗಿ ಕೆಲಸ ಮಾಡಿದ್ದಕ್ಕೆ ಒಂದು ಸಂಚಿಕೆಗೆ 2.5 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ.