ಸೂರ್ಯಾಸ್ತದ ವೇಳೆ ಮಾಡುವ ಈ ತಪ್ಪುಗಳು ಸೌಭಾಗ್ಯವನ್ನು ದೌರ್ಭಾಗ್ಯವಾಗಿ ಬದಲಿಸಿಬಿಡುತ್ತದೆ

 ಅದೃಷ್ಟವನ್ನು ದುರದೃಷ್ಟಕರವಾಗಿ ಪರಿವರ್ತಿಸುತ್ತವೆ. ಆದ್ದರಿಂದ, ಧರ್ಮಗ್ರಂಥಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಲು ಮತ್ತು ಜೀವನದಲ್ಲಿ ಕೆಲವು ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ.
 

ಬೆಂಗಳೂರು : ಒಳ್ಳೆಯ ಕಾರ್ಯಗಳು ವ್ಯಕ್ತಿಯ ಅದೃಷ್ಟವನ್ನು ಹೇಗೆ ಬೆಳಗುತ್ತದೆಯೋ, ಜಾಗೃತಗೊಳಿಸುತ್ತವೆಯೋ, ಅದೇ ರೀತಿ ಕೆಟ್ಟ ಕಾರ್ಯಗಳು ಅಥವಾ ಅಭ್ಯಾಸಗಳು ವ್ಯಕ್ತಿಯ ಅದೃಷ್ಟವನ್ನು ದುರದೃಷ್ಟಕರವಾಗಿ ಪರಿವರ್ತಿಸುತ್ತವೆ. ಆದ್ದರಿಂದ, ಧರ್ಮಗ್ರಂಥಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಲು ಮತ್ತು ಜೀವನದಲ್ಲಿ ಕೆಲವು ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ. ಇದರಲ್ಲಿ  ಬೆಳಿಗ್ಗೆ ಅಥವಾ ಸಂಜೆ ಕೆಲವು ತಪ್ಪುಗಳನ್ನೂ ಮಾಡದಂತೆ ಸೂಚಿಸಲಾಗಿದೆ.   ಸಂಜೆಯ ವೇಳೆ ಮಾಡುವ ಈ ಕೆಲಸಗಳನ್ನು ಅಶುಭ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸೂರ್ಯಾಸ್ತದ ಸಮಯದಲ್ಲಿ ಮಲಗಬೇಡಿ: ಸಾಮಾನ್ಯವಾಗಿ ಸಂಜೆಯ ಹೊತ್ತು  ಮಲಗಬಾರದು ಎಂದು ಹಿರಿಯರೂ ಹೇಳುತ್ತಿರುತ್ತಾರೆ. ಲಕ್ಷ್ಮೀ ದೇವಿಯು ಸಂಜೆ ಮನೆಗೆ ಪ್ರವೇಶಿಸುತ್ತಾಳೆ ಎನ್ನುವುದು ನಂಬಿಕೆ. ಆದ್ದರಿಂದ, ಈ ಸಮಯದಲ್ಲಿ ಮಲಗುವ ತಪ್ಪನ್ನು ಎಂದಿಗೂ ಮಾಡಬೇಡಿ.   

2 /5

ಮರಗಳು ಮತ್ತು ಸಸ್ಯಗಳನ್ನು ಮುಟ್ಟಬೇಡಿ: ಸೂರ್ಯಾಸ್ತದ ನಂತರ ಮರಗಳು ಮತ್ತು ಸಸ್ಯಗಳನ್ನು ಮುಟ್ಟಬಾರದು ಅಥವಾ ಹಣ್ಣುಗಳು ಮತ್ತು ಎಲೆಗಳನ್ನು ಕೀಳಬಾರದು. ಸೂರ್ಯಾಸ್ತದ ನಂತರ, ಮರಗಳು ಮತ್ತು ಸಸ್ಯಗಳು ನಿದ್ರೆಗೆ ಜಾರುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಅವುಗಳನ್ನು ಸ್ಪರ್ಶಿಸುವುದು ಅಪರಾಧ ಎನ್ನಲಾಗಿದೆ.  

3 /5

ಸೂರ್ಯಾಸ್ತದ ನಂತರ ಗುಡಿಸಿ ಮತ್ತು ಒರೆಸಬೇಡಿ: ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸಬೇಡಿ. ಸೂರ್ಯಾಸ್ತದ ನಂತರ ಗುಡಿಸುವುದು, ಬಲೆ ತೆಗೆಯುವುದು ಇತ್ಯಾದಿ ಕೆಲಸಗಳನ್ನು ಮಾಡುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.   

4 /5

ಮೊಸರು ದಾನ ಮಾಡಬೇಡಿ: ದಾನ ಮಾಡುವುದು ಒಳ್ಳೆಯದು ಆದರೆ ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ತಪ್ಪಾಗಿಯೂ ಮೊಸರು, ಉಪ್ಪಿನಕಾಯಿ ಮತ್ತು ಉಪ್ಪಿನಂತಹ ಪದಾರ್ಥಗಳನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮೀ ಬೇರೆಯವರ ಪಾಲಾಗುತ್ತದೆ. 

5 /5

ಉಗುರುಗಳು ಮತ್ತು ಕೂದಲನ್ನು ಕತ್ತರಿಸಬೇಡಿ: ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ಉಗುರುಗಳು ಮತ್ತು ಕೂದಲನ್ನು ಎಂದಿಗೂ ಕತ್ತರಿಸಬೇಡಿ. ಶೇವಿಂಗ್ ಮಾಡುವುಡು ಕೂಡಾ ಸರಿಯಲ್ಲ. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಅದರೊಂದಿಗೆ ಬಡತನವೂ ಬರುತ್ತದೆ.