Astrology: ಈ 4 ರಾಶಿಚಕ್ರದ ಜನರು ಹಣ ಉಳಿಸುವಲ್ಲಿ ಅತ್ಯುತ್ತಮರು, ನೀವು ಕೂಡ ಈ ಪಟ್ಟಿಯಲ್ಲಿದ್ದೀರಾ

                              

Astrology: ಪ್ರತಿ ರಾಶಿಯ ಜನರಲ್ಲಿ ಏನಾದರೂ ಒಂದು ವಿಶೇಷತೆ ಇರುತ್ತದೆ. ಹಣವನ್ನು ಖರ್ಚು ಮಾಡುವ ವಿಷಯಕ್ಕೆ ಬಂದಾಗ ಕೆಲವು ಜನರು ನಾಳೆಯ ಬಗ್ಗೆ ಚಿಂತಿಸದೆ ಹಣ ಕೈಯಲ್ಲಿದ್ದರೆ ಅದನ್ನು ನೀರಿನಂತೆ ಖರ್ಚು ಮಾಡಿದರೆ, ಕೆಲವರು ತುಂಬಾ ಜಿಪುಣರಾಗಿರುತ್ತಾರೆ. ಅಂತೆಯೇ, ಆದಾಯ ಮತ್ತು ವೆಚ್ಚವನ್ನು ಹೇಗೆ ಸಮತೋಲನಗೊಳಿಸಬೇಕು ಎಂದು ತಿಳಿದಿರುವ ಕೆಲವು ಜನರೂ ಇದ್ದಾರೆ. ಈ ಜನರು ತಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿಸಬೇಕು ಎಂಬ ತತ್ವವನ್ನು ನಂಬುತ್ತಾರೆ. ಇಂದು, ಜ್ಯೋತಿಷ್ಯದ ಮೂಲಕ, ಅಂತಹ ರಾಶಿಚಕ್ರ ಚಿಹ್ನೆಗಳ ಬಗ್ಗೆ ತಿಳಿಯೋಣ. ಅವರು, ಹಣ ಉಳಿಸುವಲ್ಲಿ ಅತ್ಯುತ್ತಮರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೆಲವು ರಾಶಿ ಚಕ್ರದ ಜನರು ಹಣವನ್ನು ಉಳಿಸಲು ಕೆಲಸದಲ್ಲಿ ಅಥವಾ ವ್ಯಾಪಾರದಲ್ಲಿ ಚೆನ್ನಾಗಿ ನೆಲೆಗೊಳ್ಳಲು ಕಾಯುವುದಿಲ್ಲ. ಬದಲಿಗೆ ಚಿಕ್ಕ ವಯಸ್ಸಿನಿಂದಲೇ ಅವರು ಹಣವನ್ನು ಉಳಿಸಲು ಪ್ರಾರಂಭಿಸುತ್ತಾರೆ. ಅದು ಅವರ ಪಾಕೆಟ್ ಮನಿ ಯಿಂದ ಹಣವನ್ನು ಉಳಿಸುವ ವಿಷಯವಾಗಲಿ ಅಥವಾ ಮೊದಲ ಸಂಬಳದಿಂದ ಭವಿಷ್ಯದ ರಕ್ಷಣೆಗಾಗಿ ಪಾಲಿಸಿಯನ್ನು ತೆಗೆದುಕೊಳ್ಳುವುದಾಗಲಿ ಯಾವುದಾದರೂ ಆಗಿರಬಹುದು.

2 /5

ವೃಷಭ ರಾಶಿಯ ಜನರು ದುಂದುಗಾರಿಕೆಯನ್ನು ನಂಬುವುದಿಲ್ಲ. ಅಲ್ಲದೆ, ಅವರು ಹಣದ ವಿಷಯದಲ್ಲಿ ತುಂಬಾ ಸ್ವಾಭಿಮಾನಿ ಆಗಿರುತ್ತಾರೆ. ಯಾರಾದರೂ ಅವರಿಗಾಗಿ ಹಣವನ್ನು ಖರ್ಚು ಮಾಡಿದರೆ, ಅವರಿಗೆ ಇನ್ನೂ ಸ್ವಲ್ಪ ಹಣವನ್ನು (Money) ಸೇರಿಸಿ, ಯಾವುದಾದರೂ ನೆಪದಲ್ಲಿ ಅದನ್ನು ಹಿಂದಿರುಗಿಸುತ್ತಾರೆ. ಭವಿಷ್ಯದಲ್ಲಿ, ನಾವು ಯಾರ ಮುಂದೆಯೂ ಕೈ ಚಾಚುವಂತಾಗಬಾರದು ಎಂದು ಅವರು ಯೋಚಿಸುತ್ತಾರೆ. ಆದ್ದರಿಂದ ನಾವು ಚಿಕ್ಕ ವಯಸ್ಸಿನಿಂದಲೇ ಉಳಿತಾಯದ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಅಕೌಂಟಿಂಗ್‌ನಿಂದ ಹೂಡಿಕೆಯವರೆಗೆ, ಅವರು ದೃಢವಾಗಿರುತ್ತಾರೆ. 

3 /5

ಮಿಥುನ ರಾಶಿಯ  (Zodiac sign)  ಜನರಲ್ಲಿ ಚುರುಕಾಗಿ ಹೂಡಿಕೆ ಮಾಡುವ ಸಾಮರ್ಥ್ಯ ಅದ್ಭುತವಾಗಿದೆ. ಹೂಡಿಕೆಯಿಂದ (Investment) ಗರಿಷ್ಠ ಲಾಭ ಪಡೆಯಬಹುದು ಎಂದು ಇವರು ಹೆಚ್ಚು ಬರುತ್ತಾರೆ. ಆದ್ದರಿಂದ ಈ ಜನರು ಬಹಳಷ್ಟು ಹಣವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಇದನ್ನೂ ಓದಿ- ಗ್ರಹದೋಷ ಅಥವಾ ಅಸಾಧ್ಯ ರೋಗಗಳೆ ಆಗಿರಲಿ, ಈ ಉಪಾಯ ಅನುಸರಿಸಿದರೆ ಸಂಕಷ್ಟ ಪರಿಹಾರ

4 /5

ಸಿಂಹ ರಾಶಿಯ ಜನರು ಇತರರ ಮುಂದೆ ತಮ್ಮನ್ನು ಹೆಮ್ಮೆಪಡಿಸಿಕೊಳ್ಳಲು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು, ಆದರೆ ಅವರು ತಮ್ಮ ವಿಷಯದಲ್ಲಿ ಸ್ವಲ್ಪ ಜಿಪುಣರಾಗಿರುತ್ತಾರೆ. ತಮ್ಮ ಮೇಲೆ ಹೆಚ್ಚುವರಿ ಹಣವನ್ನು ಖರ್ಚು ಮಾಡುವ ಬದಲು, ಅವರು ತಮ್ಮ ಭವಿಷ್ಯಕ್ಕಾಗಿ ಉಳಿಸಲು (Investment For Future) ಪ್ರಯತ್ನಿಸುತ್ತಾರೆ.  ಇದನ್ನೂ ಓದಿ- Planetary Transits: ಶುಕ್ರ, ಮಂಗಳನ ರಾಶಿ ಪರಿವರ್ತನೆ; ಈ 3 ರಾಶಿಯವರಿಗೆ ಅದೃಷ್ಟ

5 /5

ಮಕರ ರಾಶಿಯ ಜನರು ಆರ್ಥಿಕ ಯೋಜನೆ ಮಾಡುವ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಸರಿಯಾದ ಸ್ಥಳದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ. ಸುಖಾ-ಸುಮ್ಮನೆ ಇವರು ಎಂದಿಗೂ ಹಣವನ್ನು ವೆಚ್ಚ ಮಾಡುವುದಿಲ್ಲ. ಹಣದ ವಿಷಯದಲ್ಲಿ ಯಾರೂ ಕೂಡ ಇವರನ್ನು ಮೋಸಗೊಳಿಸಲು ಸಾಧ್ಯವಿಲ್ಲ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)