Astrology: ಕೆಲವೊಮ್ಮೆ ಯಾವುದಾದರೊಂದು ಕಾರಣಕ್ಕೆ ಹೇಳುವ ಸಣ್ಣ-ಪುಟ್ಟ ಸುಳ್ಳುಗಳ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರನ್ನು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೇಳಲಾಗುತ್ತದೆ.
Astrology: ಪ್ರತಿಯೊಬ್ಬರೂ ಸಹ ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸುಳ್ಳು ಹೇಳಿಯೇ ಇರುತ್ತಾರೆ. ಅದರಲ್ಲೂ, ಈ ಮೊಬೈಲ್ ಜಮಾನದಲ್ಲಿ ಸುಳ್ಳು ಹೇಳದ ವ್ಯಕ್ತಿಯೇ ಇಲ್ಲ ಎಂದು ಸಹ ಹೇಳಬಹುದು. ಕೆಲವೊಮ್ಮೆ ಯಾವುದಾದರೊಂದು ಕಾರಣಕ್ಕೆ ಹೇಳುವ ಸಣ್ಣ-ಪುಟ್ಟ ಸುಳ್ಳುಗಳ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರನ್ನು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯದ ಪ್ರಕಾರ, ನಾಲ್ಕು ರಾಶಿಯವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ ಎನ್ನಲಾಗುತ್ತದೆ. ವಿಶೇಷವೆಂದರೆ, ಬೇರೆಯವರು ಇವರ ಮಾತಿನ ಮೋಡಿಗೆ ಬೇಗನೆ ಇವರ ಬಲೆಗೆ ಬೀಳುತ್ತಾರಂತೆ... ಅಂತಹ ರಾಶಿಚಕ್ರಗಳು ಯಾವುವು ತಿಳಿಯೋಣ...
ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯವರು ವಿನಾಕಾರಣ ಸುಳ್ಳು ಹೇಳುವ ಅಭ್ಯಾಸ ಹೊಂದಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಸುಳ್ಳು ಹೇಳುತ್ತಾರೆಂದರೆ, ಯಾರಿಗೂ ಅಷ್ಟು ಸುಲಭವಾಗಿ ಇವರ ಸುಳ್ಳು ಅರ್ಥವಾಗುವುದೇ ಇಲ್ಲ. ಇವರು ತಮ್ಮ ಮಾತಿನ ಮೋಡಿಯಲ್ಲಿ ಎಂತಹವರನ್ನೇ ಆದರೂ ಬಹಳ ಸುಲಭವಾಗಿ ಬಲೆಗೆ ಬೀಲಿಸುತ್ತಾರೆ.
ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಅವರಿರುವುದಕ್ಕಿಂತ ಭಿನ್ನ ಎಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಎಂತಹ ದೊಡ್ಡ ಸುಳ್ಳನ್ನು ಕೂಡ ಹೇಳಲು ಹಿಂಜರಿಯುವುದಿಲ್ಲ ಎನ್ನಲಾಗುತ್ತದೆ. ಆದಾಗ್ಯೂ, ಇವರು ಸುಳ್ಳು ಹೇಳುವುದರಲ್ಲಿ ಅಷ್ಟು ಪರಿಣಿತರಲ್ಲದ ಕಾರಣ ಕೆಲವೊಮ್ಮೆ ಸಿಕ್ಕಿ ಬೀಳುತ್ತಾರೆ.
ತುಲಾ ರಾಶಿ: ಬಹಳ ಉದಾರ ಮನೋಭಾವದವರಾದ ತುಲಾ ರಾಶಿಯವರು ತಮ್ಮ ಮಾತುಗಳಿಂದ ಇತರರಿಗೆ ನೋವಾಗುತ್ತದೆ ಎಂದು ತಿಳಿದರೆ ಅಂತಹ ಸಂದರ್ಭದಲ್ಲಿ ಸುಳ್ಳು ಹೇಳುತ್ತಾರೆ. ಇವರು ತಮಗಾಗಿ ಸುಳ್ಳು ಹೇಳುವುದಕ್ಕಿಂತ ಇತರರಿಗಾಗಿ ಸುಳ್ಳು ಹೇಳುತ್ತಾರೆ.
ವೃಶ್ಚಿಕ ರಾಶಿ: ಈ ರಾಶಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದರಲ್ಲಿ ನಿಪುಣರಾಗಿರುವ ಇವರು ಸುಳ್ಳನ್ನು ಸತ್ಯವೆಂದು ಬಿಂಬಿಸುವುದರಲ್ಲೂ ಪರಿಣತಿಯನ್ನು ಹೊಂದಿರುತ್ತಾರೆ. ಆದರೆ, ಇವರು ಯಾವುದಾದರೂ ಬಲವಾದ ಕಾರಣವಿದ್ದಾಗಲಷ್ಟೇ ಸುಳ್ಳು ಹೇಳುತ್ತಾರೆ. ಸೂಚನೆ: ಈ ಫೋಟೋ ಗ್ಯಾಲರಿಯಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.