Home Remedy for Dry Face: ಚಳಿಗಾಲದ ಸಮಯದಲ್ಲಿ ಚರ್ಮದ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ಮುಖದ ಶುಷ್ಕತೆ ಮತ್ತು ನಸುಕಂದು (ಪಿಗ್ಮೆಂಟೇಶನ್) ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇಂತಹ ಸಮಸ್ಯೆಗಳಿಗೆ 5 ಮನೆಮದ್ದುಗಳನ್ನು ನಾವು ತಿಳಿಸಲಿದ್ದೇವೆ. ಇದರಿಂದ ಸುಲಭವಾಗಿ ಚರ್ಮದ ಸಮಸ್ಯೆಗಳನ್ನು ದೂರ ಮಾಡಬಹುದು.
ಕೆಲವು ಮನೆ ಮದ್ದುಗಳನ್ನು ಪ್ರತೀ ದಿನ ಬಳಕೆ ಮಾಡುವುದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ. ಇಂತಹ ಅಭ್ಯಾಸ ನಿಮ್ಮ ಮುಖದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ಎಲ್ಲಾ ವಸ್ತುಗಳು ಮನೆಯಲ್ಲಿಯೇ ಲಭ್ಯವಿರುತ್ತದೆ.
ಮುಖದ ಮೇಲಿನ ನಸುಕಂದು ಮಚ್ಚೆಗಳನ್ನು ತೆಗೆದುಹಾಕಲು, ಒಂದು ಬೌಲ್‌ನಲ್ಲಿ ಬಾದಾಮಿ ಎಣ್ಣೆ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ ಮಲಗಿ. ಬೆಳಿಗ್ಗೆ ನಿಮ್ಮ ಮುಖವನ್ನು ತೊಳೆಯಿರಿ. ಇದನ್ನು ವಾರದಲ್ಲಿ 2 ರಿಂದ 3 ದಿನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ನಸುಕಂದು ಮಚ್ಚೆಗಳ ಸಮಸ್ಯೆಯ ವಿರುದ್ಧ ಹೋರಾಡಲು ಸೌತೆಕಾಯಿಯನ್ನು ಸಹ ಬಳಸಬಹುದು. ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಬೇಕು. ಇದರ ಪರಿಣಾಮವನ್ನು ನೀವು ಕೆಲವೇ ದಿನಗಳಲ್ಲಿ ನೋಡುತ್ತೀರಿ.
ಆಲೂಗಡ್ಡೆ ಕೂಡ ಚರ್ಮದ ಸಮಸ್ಯೆಗೆ ತುಂಬಾ ಪರಿಣಾಮಕಾರಿ. ಮೊದಲು ಆಲೂಗಡ್ಡೆಯನ್ನು ತುರಿದು ಹಿಸುಕಿ ನಸುಕಂದು ಮಚ್ಚೆಗಳ ಮೇಲೆ ಹಚ್ಚಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಇರಿಸಿದ ನಂತರ ಮುಖವನ್ನು ಸ್ವಚ್ಛಗೊಳಿಸಿ. ಪರಿಣಾಮವು ಒಂದು ವಾರದಲ್ಲಿ ಗೋಚರಿಸುತ್ತದೆ.
ಪಪ್ಪಾಯಿಯು ನಸುಕಂದು ಮಚ್ಚೆಗಳು ಮತ್ತು ಒಣ ಚರ್ಮದ ವಿರುದ್ಧವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಮಾಡಬೇಕಾಗಿರುವುದು ಪಪ್ಪಾಯಿಯ ತಿರುಳನ್ನು ತೆಗೆದುಕೊಂಡು ಅದನ್ನು ನಿಮ್ಮ ಮುಖಕ್ಕೆ ಹಚ್ಚಿ, ಲಘುವಾಗಿ ಮಸಾಜ್ ಮಾಡಬೇಕು.
ದೇಹದಲ್ಲಿ ನೀರಿನಂಶ ಕಡಿಮೆ ಆದಂತೆ, ಚರ್ಮ ಸುಕ್ಕು ಕಟ್ಟಿದಂತೆ ಕಾಣುತ್ತದೆ. ಹೀಗಿರುವಾಗ ಹೆಚ್ಚು ಹೆಚ್ಚು ನೀರು ಕುಡಿಯುತ್ತಿರಿ. ಇದರಿಂದ ತ್ವಚೆಯು ಸಾಕಷ್ಟು ತೇವಾಂಶದಿಂದ ಕೂಡಿರುತ್ತದೆ. ಮುಖದ ಜೊತೆಗೆ ಹೊಟ್ಟೆಯ ಸಮಸ್ಯೆಗಳು ದೂರವಾಗುತ್ತವೆ.
ಸೂಚನೆ: - ಈ ಸುದ್ದಿಯನ್ನು ಸಾಮಾನ್ಯ ಮಾಹಿತಿಯ ಪ್ರಕಾರ ಬರೆಯಲಾಗಿದೆ. ಯಾವುದೇ ಸಮಸ್ಯೆಯ ಎದುರಾದರೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee News Kannada ಈ ಸಲಹೆಗಳು ಮತ್ತು ಪರಿಹಾರಗಳಿಗೆ ಯಾವುದೇ ನೈತಿಕ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ.