Free Amazon Prime, Sony Liv, Zee 5, Netflix Broadband Plans: HD ಗುಣಮಟ್ಟದಲ್ಲಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಈ ಮೊಬೈಲ್ ಯೋಜನೆಗಳಿಗಿಂತ ಬ್ರಾಡ್ಬ್ಯಾಂಡ್ ಯೋಜನೆಗಳು ಹೆಚ್ಚು ಪ್ರಯೋಜನಕಾರಿ ಆಗಿವೆ.
Free Amazon Prime, Sony Liv, Zee 5, Netflix Broadband Plans: ಟೆಲಿಕಾಂ ಜಗತ್ತಿನಲ್ಲಿ ಸಂಚಲವನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಮತ್ತು ಹೆಸರಾಂತ ಟೆಲಿಕಾಂ ಕಂಪನಿಯಾದ ಏರ್ಟೆಲ್ ಅನೇಕ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳನ್ನು ಹೊಂದಿದ್ದು, ಇದರಲ್ಲಿ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ಎಸ್ಎಂಎಸ್ ಸೌಲಭ್ಯಗಳು ಲಭ್ಯವಿದೆ. ಆದರೆ HD ಗುಣಮಟ್ಟದಲ್ಲಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಈ ಮೊಬೈಲ್ ಯೋಜನೆಗಳಿಗಿಂತ ಬ್ರಾಡ್ಬ್ಯಾಂಡ್ ಯೋಜನೆಗಳು ಹೆಚ್ಚು ಪ್ರಯೋಜನಕಾರಿ ಆಗಿವೆ. ಈ ಯೋಜನೆಗಳಲ್ಲಿ, Amazon Prime, Sony Liv, Zee5 ಮತ್ತು Netflix ನಂತಹ OTT ಪ್ಲಾಟ್ಫಾರ್ಮ್ಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
JioFiber 999ರೂ.ಗಳ ಯೋಜನೆ: JioFiberನ 999ರೂ.ಗಳ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು 150Mbps ಇಂಟರ್ನೆಟ್ ವೇಗವನ್ನು ನೀಡುತ್ತದೆ. ಈ ಯೋಜನೆಯಲ್ಲಿ Disney + Hotstar, Amazon Prime, Sony Liv, Zee5, Voot Select ಮತ್ತು 100 ಅಂತಹ OTT ಅಪ್ಲಿಕೇಶನ್ಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಇದರಲ್ಲಿ ಫ್ರೀ ಕಾಲಿಂಗ್ ಸೌಲಭ್ಯವೂ ಇದೆ.
JioFiber 1499ರೂ.ಗಳ ಯೋಜನೆ: 300Mbps ವೇಗದೊಂದಿಗೆ ಲಭ್ಯವಿರುವ JioFiber ನ 1499 ರೂ.ಗಳ ಯೋಜನೆ ಕೂಡ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಡಿಸ್ನಿ + ಹಾಟ್ಸ್ಟಾರ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜೊತೆಗೆ 14 OTT ಚಾನಲ್ಗಳ ಉಚಿತ ಚಂದಾದಾರಿಕೆ ಪ್ರಯೋಜನಗಳು ಲಭ್ಯವಿವೆ.
JioFiber 2499ರೂ.ಗಳ ಯೋಜನೆ: ಜಿಯೋ ಫೈಬರ್ನ 2499ರೂ.ಗಳ ಯೋಜನೆಯು ಅನಿಯಮಿತ ಡಾಟಾ ಪ್ರಯೋಜನದೊಂದಿಗೆ ಲಭ್ಯವಿದೆ. ಈ ಯೋಜನೆಯ ಮಾನ್ಯತೆಯು 30 ದಿನಗಳವರೆಗೆ ಇರುತ್ತದೆ. 500Mbps ವೇಗದೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ 1499ರೂ.ಗಳ ಯೋಜನೆಯಲ್ಲಿ ಲಭ್ಯವಿರುವ ಅದೇ OTT ಚಾನಲ್ಗಳ ಉಚಿತ ಚಂದಾದಾರಿಕೆ ಲಭ್ಯವಿರುತ್ತದೆ.
ಏರ್ಟೆಲ್ 999ರೂ.ಗಳ ಯೋಜನೆ: ಏರ್ಟೆಲ್ನ 999ರೂ.ಗಳ ಬ್ರಾಡ್ಬ್ಯಾಂಡ್ ಯೋಜನೆಯಲ್ಲಿ 200Mbps ವೇಗದ ಅನಿಯಮಿತ ಡೇಟಾ ಸೌಲಭ್ಯ ಲಭ್ಯವಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಕೂಡ ಲಭ್ಯವಿದೆ. ಇದಲ್ಲದೆ, ಡಿಸ್ನಿ + ಹಾಟ್ಸ್ಟಾರ್, ಅಮೆಜಾನ್ ಪ್ರೈಮ್, ಎಕ್ಸ್ಸ್ಟ್ರೀಮ್ ಪ್ರೀಮಿಯಂ ಯೋಜನೆಯಲ್ಲಿ ಲಭ್ಯವಿದೆ.
ಏರ್ಟೆಲ್ 1,498ರೂ.ಗಳ ಯೋಜನೆ: ಏರ್ಟೆಲ್ನ 1,498ರೂ.ಗಳ ಬ್ರಾಡ್ಬ್ಯಾಂಡ್ ಯೋಜನೆಯಲ್ಲಿ 300Mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಪ್ರಯೋಜನ ಲಭ್ಯವಾಗಲಿದೆ. ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಇದಲ್ಲದೆ, ಇದರಲ್ಲಿ Netflix Basic, Amazon Prime, Disney + Hotstar ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿದೆ.
ಏರ್ಟೆಲ್ 3,999 ರೂ.ಗಳ ಯೋಜನೆ: ಏರ್ಟೆಲ್ನ 3,999 ರೂ.ಗಳ ಯೋಜನೆಯಲ್ಲಿ ಅನಿಯಮಿತ ಡೇಟಾ ಲಭ್ಯವಿದೆ. ಅದೇ ಸಮಯದಲ್ಲಿ, ಇಂಟರ್ನೆಟ್ ವೇಗವು 1GB ವರೆಗೆ ಲಭ್ಯವಿದೆ. ಕರೆ ಸೌಲಭ್ಯ ಸಂಪೂರ್ಣ ಉಚಿತವಾಗಿದೆ. ಈ ಯೋಜನೆಯಲ್ಲಿ ನೆಟ್ಫ್ಲಿಕ್ಸ್ ಬೇಸಿಕ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ಸ್ಟಾರ್ನ ಉಚಿತ ಚಂದಾದಾರಿಕೆಯೂ ಲಭ್ಯವಿದೆ. ಯೋಜನೆಯು ಫಾಸ್ಟ್ಯಾಗ್ ಮತ್ತು ವಿಂಕ್ ಪ್ರೀಮಿಯಂನ ಕ್ಯಾಶ್ಬ್ಯಾಕ್ ಅನ್ನು ಒಳಗೊಂಡಿದೆ.