Interesting Facts: ಕಾಡಿನ ರಾಜ ‘ಸಿಂಹ’ದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳಿರಿ

ಸಿಂಹಗಳು ಕಣ್ಣಿಗೆ ಬಿದ್ದ ಪ್ರಾಣಿಗಳನ್ನು ಸುಮ್ಮನೆ ಬೇಟೆಯಾಡುವುದಿಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತವಂತೆ.

ಸಿಂಹವನ್ನು ಕಾಡಿನ ರಾಜ ಎಂದು ಮಾತ್ರ ಕರೆಯಲಾಗುವುದಿಲ್ಲ. ಸಿಂಹ ಭೂಮಿಯ ಮೇಲಿರುವ ಅತ್ಯಂತ ಧೈರ್ಯಶಾಲಿ ಪ್ರಾಣಿಯಾಗಿದೆ. ಸಿಂಹದ ಘರ್ಜನೆ ಕೇಳಿದರೆ ಸಾವು ಎಂಥವರ ಮೈಯಲ್ಲೂ ನಡುಕು ಉಂಟಾಗುತ್ತದೆ. ಅತ್ಯಂತ ಶಕ್ತಿಶಾಲಿ ಪ್ರಾಣಿಗಳಲ್ಲಿ ಒಂದಾಗಿರುವ ಸಿಂಹದ ಬಗ್ಗೆ ಮತ್ತಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕಾಡಿನ ರಾಜ ಸಿಂಹದ ಘರ್ಜಿಸಿದರೆ ಸಾಕು ಮೈಯಲ್ಲಿ ನಡುಕ ಹುಟ್ಟುತ್ತದೆ. ಸಿಂಹದ ಸಿಂಹದ ಉಗುರುಗಳು ಮತ್ತು ಹಲ್ಲುಗಳಲ್ಲಿ ತುಂಬಾ ಶಕ್ತಿಯಿದೆ. ಬೇಟೆಯಾಡಲು ಸಿಂಹ ತನ್ನ ಉಗುರುಗಳನ್ನು ಬಳಕೆ ಮಾಡುತ್ತದೆ. 2020ರ ಜನಗಣತಿಯ ಪ್ರಕಾರ ಸಿಂಹಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಭಾರತದಲ್ಲಿ ಸುಮಾರು 670ಕ್ಕೂ ಹೆಚ್ಚು ಸಿಂಹಗಳಿವೆ. ಸಿಂಹ ಭೂಮಿ ಮೇಲಿನ ಅತ್ಯಂತ ಧೈರ್ಯಶಾಲಿ ಪ್ರಾಣಿ ಎಂದು ಹೆಸರುವಾಸಿಯಾಗಿದೆ.

2 /5

ಕಾಡಿನ ರಾಜ ಎಂದು ಕರೆಸಿಕೊಳ್ಳುವ ಸಿಂಹಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ  ಜೀವಿಸುತ್ತವೆ. ಸಾಮಾಜಿಕ ಜೀವನದ ಕಾರಣದಿಂದ ಹೆಚ್ಚಾಗಿ ಜೊತೆಯಾಗಿ ಬದುಕಲು ಇಷ್ಟಪಡುತ್ತವೆ. ಸಿಂಹಗಳ ಗುಂಪನ್ನು ಪ್ರೈಡ್ ಎಂದು ಕರೆಯಲಾಗುತ್ತದೆ. ಒಂದು ಪ್ರೈಡ್​ನಲ್ಲಿ ಸುಮಾರು 15 ಸಿಂಹಗಳಿರುತ್ತವಂತೆ. ನಮ್ಮಲ್ಲಿ ಹೇಗೆ ಕುಟುಂಬ ವ್ಯವಸ್ಥೆ ಇದೆಯೇ ಹಾಗೆಯೇ ಸಿಂಹಗಳಲ್ಲಿಯೂ ಕುಟುಂಬ ವ್ಯವಸ್ಥೆ ಇದೆ.  

3 /5

ಒಂದು ಕಾಲದಲ್ಲಿ ಆಫ್ರಿಕಾ, ಏಷ್ಯಾ ಹಾಗೂ ಯುರೋಪ್​ನ ಬಹುತೇಕ ಭಾಗಗಳಲ್ಲಿ ಸಿಂಹಗಳು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವು. ಆದರೆ ಅರಣ್ಯ ನಾಶ, ಬೇಟೆ ಕಾರಣಗಳಿಂದ ಸಿಂಹಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಏಷ್ಯಾಟಿಕ್‌ ಸಿಂಹಗಳು ನಿರ್ಬಂಧಿತ ಗಿರ್‌ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಿಂಹಗಳು ನೋಡಲು ತುಂಬಾ ಮುದ್ದು ಮುದ್ದಾಗಿ ಕಾಣುತ್ತವೆ. ಆದರೆ ಒಂದೇ ಒಂದು ಘರ್ಜನೆ ಹಾಕಿದರೆ ನೀವೂ ಸಿಂಹದ ಬಳಿ ಸುಳಿಯುವುದೇ ಇಲ್ಲ.

4 /5

ಸಿಂಹಗಳ ಪ್ರತಿ ಗುಂಪಿನಲ್ಲಿಯೂ ಗಂಡು ಹಾಗೂ ಹೆಣ್ಣು ಸಿಂಹಗಳಿರುತ್ತವೆ. ಗಂಡು ಸಿಂಹವು ಗುಂಪನ್ನು ಮುನ್ನಡೆಸಿದರೆ, ಹೆಣ್ಣು ಸಿಂಹಗಳು ತಮ್ಮ ಬಳಗಕ್ಕಾಗಿ ಬೇಟೆಯಾಡುತ್ತವಂತೆ. ಸಿಂಹ ಘರ್ಜನೆಯು ಸುಮಾರು 8 ಕಿ.ಮೀವರೆಗೂ ಕೇಳುತ್ತದಂತೆ. ಸಿಂಹವು ಗಂಟೆಗೆ 50 ಮೈಲಿ ವೇಗದಲ್ಲಿ ಓಡಬಲ್ಲವು ಹಾಗೂ 36 ಅಡಿಗಳಷ್ಟು ಹಾರಬಲ್ಲವು.

5 /5

ಒಂದು ಸಿಂಹಕ್ಕೆ ಎಷ್ಟು ವಯಸ್ಸಾಗಿದೆ ಎಂದು ಅದರ ಗಡ್ಡ ನೋಡಿಯೇ ಹೇಳಬಹುದಂತೆ. ಸಿಂಹದ ಗಡ್ಡ ಎಷ್ಟು ಗಾಢ ಬಣ್ಣ ಹೊಂದಿರುತ್ತದೋ ಅದಕ್ಕೆ ಅಷ್ಟು ವಯಸ್ಸಾಗಿದೆ ಎಂದು ಅಂದಾಜಿಸಲಾಗುತ್ತದೆ. ಸಿಂಹಗಳು ನಡೆಯುವಾಗ ಅವುಗಳ ಹಿಮ್ಮಡಿ ನೆಲಕ್ಕೆ ತಾಗುವುದಿಲ್ಲವಂತೆ. ಸಿಂಹಗಳು ದಿನದಲ್ಲಿ 20 ಗಂಟೆಗಳ ಕಾಲವೂ ನಿದ್ರಿಸಬಲ್ಲವು. ಹೀಗಾಗಿ ಸಿಂಹವನ್ನು ಆಲಸಿ ಪ್ರಾಣಿ ಎಂತಲೂ ಕರೆಯುತ್ತಾರೆ.