Fixed Depositನಲ್ಲಿ ಉತ್ತಮ ರಿಟರ್ನ್ ಜೊತೆ ಸಿಗುತ್ತದೆ 6 ಅದ್ಬುತ ಪ್ರಯೋಜನಗಳು

FDಯ ದೊಡ್ಡ ವೈಶಿಷ್ಟ್ಯವೆಂದರೆ ಅದು ಸುರಕ್ಷಿತ ಹೂಡಿಕೆಯೊಂದಿಗೆ ಖಚಿತವಾದ ಆದಾಯವನ್ನು ನೀಡುತ್ತದೆ. 

ಬೆಂಗಳೂರು : ಆದಾಯ ತೆರಿಗೆ ಉಳಿಸಲು ವಿವಿಧ ಆಯ್ಕೆಗಳನ್ನು ಹುಡುಕಲಾಗುತ್ತದೆ. ಆದರೆ, ಹೆಚ್ಚಿನ ಜನರು ಸುರಕ್ಷಿತ ಮತ್ತು ಉತ್ತಮ ಆದಾಯದ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.  ಅದರಲ್ಲಿ ಉತ್ತಮ ಅಥವಾ ಸುರಕ್ಷಿತ ಆಯ್ಕೆಯೆಂದರೆ ಫಿಕ್ಸೆಡ್ ಡೆಪಾಸಿಟ್. ತೆರಿಗೆ ಉಳಿತಾಯಕ್ಕಾಗಿ ಅದರಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. FDಯ ದೊಡ್ಡ ವೈಶಿಷ್ಟ್ಯವೆಂದರೆ ಅದು ಸುರಕ್ಷಿತ ಹೂಡಿಕೆಯೊಂದಿಗೆ ಖಚಿತವಾದ ಆದಾಯವನ್ನು ನೀಡುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಎಫ್‌ಡಿಯಲ್ಲಿ ಗ್ಯಾರಂಟಿ ರಿಟರ್ನ್ಸ್ ಲಭ್ಯವಿದೆ. ಹೂಡಿಕೆಯ ಪ್ರಾರಂಭದಲ್ಲಿಯೇ, ಮೆಚ್ಯೂರಿಟಿ ಅವಧಿಯಲ್ಲಿ ಎಷ್ಟು ಲಾಭ ಬರುತ್ತದೆ ಎಂದು ತಿಳಿದಿದೆ.   

2 /6

ಸ್ಥಿರ ಠೇವಣಿಗಳಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳು ಲಭ್ಯವಿದೆ. ಆದರೆ  ಈ ಪ್ರಯೋಜನವು ಎಲ್ಲಾ ಸ್ಥಿರ ಠೇವಣಿಗಳ ಮೇಲೆ ಲಭ್ಯವಿರುವುದಿಲ್ಲ. FD ಯಲ್ಲಿ 5 ವರ್ಷಗಳವರೆಗೆ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ. ಠೇವಣಿ ಮೊತ್ತದ ಜೊತೆಗೆ ಬಡ್ಡಿಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.  

3 /6

FD ಮೇಲೆ ಸಾಲದ ಸೌಲಭ್ಯವೂ ಇದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡಬಹುದು. FD ಯ ಒಟ್ಟು ಮೌಲ್ಯದ 90% ವರೆಗೆ ಸಾಲವನ್ನು ಪಡೆಯಬಹುದು. FD ಬಡ್ಡಿದರದ ಮೇಲಿನ ಸಾಲವು ನಿಮ್ಮ ಹೂಡಿಕೆಯ ಮೇಲೆ ನೀವು ಪಡೆಯುವ ಬಡ್ಡಿಗಿಂತ 1-2% ಹೆಚ್ಚಾಗಿದೆ.ರುತ್ತ ಇದರರ್ಥ ನೀವು ಎಫ್‌ಡಿಯಲ್ಲಿ 4% ಬಡ್ಡಿಯನ್ನು ಪಡೆಯುತ್ತಿದ್ದರೆ, 6% ಬಡ್ಡಿಯಲ್ಲಿ ಸಾಲವನ್ನು ಪಡೆಯಬಹುದು.    

4 /6

FDಗಳೊಂದಿಗೆ ಲಿಕ್ವಿಡಿಟಿ ಕೂಡ ಬರುತ್ತದೆ. ಅಗತ್ಯವಿದ್ದರೆ, ನೀವು ಮೆಚ್ಯುರಿಟಿಗೂ ಮೊದಲು ಹಣವನ್ನು ಹಿಂಪಡೆಯಬಹುದು. ಆದರೆ ಹಾಗೆ ಮಾಡುವಾಗ ಬ್ಯಾಂಕ್ ನಿಮಗೆ ಕೆಲವು ಶುಲ್ಕಗಳನ್ನು ವಿಧಿಸಬಹುದು

5 /6

HDFC ಬ್ಯಾಂಕ್, ICICI ಬ್ಯಾಂಕ್ ಮತ್ತು DCB ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಯೊಂದಿಗೆ ವಿಮೆಯನ್ನು ನೀಡುತ್ತಿವೆ. ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮಾಡುವಾಗ ಆರೋಗ್ಯ ವಿಮೆಯೂ ಉಚಿತವಾಗಿ ಲಭ್ಯವಿರುತ್ತದೆ.    

6 /6

ಹೆಚ್ಚಿನ ಬ್ಯಾಂಕುಗಳು ಸ್ಥಿರ ಠೇವಣಿಗಳ ಬದಲಾಗಿ  ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. FD ಮೊತ್ತದ 80-85% ರಷ್ಟು ಕ್ರೆಡಿಟ್ ಮಿತಿಯೊಂದಿಗೆ ಕ್ರೆಡಿಟ್ ಕಾರ್ಡ್‌ಗಳು ಲಭ್ಯವಿವೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ಅಥವಾ ಕ್ರೆಡಿಟ್ ಹಿಸ್ಟರಿ ಇಲ್ಲದ ಜನರು ಈ ಕೊಡುಗೆಯ ಲಾಭವನ್ನು ಪಡೆಯಬಹುದು. FD ಅನ್ನು ಕ್ರೆಡಿಟ್ ಕಾರ್ಡ್ ವೆಚ್ಚಗಳ ಭದ್ರತೆಗಾಗಿ ಬಳಸಲಾಗುತ್ತದೆ.