ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯ

ಈ ಮಾರುಕಟ್ಟೆಯಲ್ಲಿ ಏನಿಲ್ಲ ಏನಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ.ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಲಭ್ಯವಿದೆ. 

Electronics market :ಈ ಮಾರುಕಟ್ಟೆಯಲ್ಲಿ ಬೇರೆಲ್ಲೂ ಸಿಗದ ಎಲೆಕ್ಟ್ರಾನಿಕ್ ವಸ್ತುಗಳು  ಸಿಗುತ್ತವೆ.ಎಲೆಕ್ಟ್ರಾನಿಕ್ ವಸ್ತುಗಳು ಮಾತ್ರವಲ್ಲದೆ ಅವುಗಳ ಬಿಡಿಭಾಗಗಳೂ ಸುಲಭವಾಗಿ ದೊರೆಯುತ್ತವೆ.ಇಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಲ್ಯಾಪ್‌ಟಾಪ್‌ಗಳವರೆಗೆ ಎಲ್ಲವನ್ನೂ ಸಗಟು ಬೆಲೆಯಲ್ಲಿ ಖರೀದಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇನ್ನಾವುದೇ ಸಾಧನವನ್ನು ರಿಪೇರಿ ಮಾಡಬೇಕಾದರೆ ಕೂಡಾ ಸುಲಭವಾಗಿ ಮಾಡಲಾಗುತ್ತದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಈ ಮಾರುಕಟ್ಟೆಯಲ್ಲಿ ಜಗತ್ತಿನ ಎಲ್ಲಾ ಕಂಪನಿಯ ಉತ್ಪನ್ನಗಳನ್ನು ಕಾಣಬಹುದು.ಸ್ಮಾರ್ಟ್‌ಫೋನ್ ಖರೀದಿಸಲು, ಸ್ಮಾರ್ಟ್‌ಫೋನ್ ಬಿಡಿಭಾಗ, ಪ್ರಿಂಟರ್,  ಲ್ಯಾಪ್‌ಟಾಪ್  ಹೀಗೆ ಇನ್ನು ಬೇಕಾದರೂ ಇಲ್ಲಿ ಸುಲಭವಾಗಿ ಸಿಗುತ್ತದೆ. ಅದು ಕೂಡಾ ಕೈಗೆಟಕುವ ಬೆಲೆಯಲ್ಲಿ. 

2 /5

ಈ ಮಾರುಕಟ್ಟೆ ಉತ್ಪನ್ನಗಳಿಗೆ ಮಾತ್ರ ಪ್ರಸಿದ್ಧವಾಗಿಲ್ಲ.ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಇಲ್ಲಿ ವಸ್ತುಗಳನ್ನು ಖರೀದಿಸಬಹುದು ಎನ್ನುವುದೇ ಈ ಮಾರುಕಟ್ಟೆಯ ವಿಶೇಷ. 

3 /5

ವಿವಿಧ ರೀತಿಯ ಎಲೆಕ್ಟ್ರಾನಿಕ್ ಉತ್ಪನ್ನಗಳು ಇಲ್ಲಿ ಲಭ್ಯವಿರುವುದು ಮಾತ್ರವಲ್ಲ, ಯಾವುದೇ ಗ್ಯಾಜೆಟ್‌ಗಳು ಹಾನಿಗೊಳಗಾದರೂ ಅವುಗಳನ್ನು ಇಲ್ಲಿ ಸರಿಪಡಿಸಬಹುದು.ಇಲ್ಲಿ ಅನೇಕ ರಿಪೇರಿ ಅಂಗಡಿಗಳೂ ಇವೆ. 

4 /5

ಇಲ್ಲಿ ಅನೇಕ ಅಂಗಡಿಗಳಿವೆ.ಹಾಗಾಗಿ ನೀವು ಫಿಕ್ಸ್ ಮಾಡಿದ ಬೆಲೆಗೆ ಚೌಕಾಶಿ ಮಾಡುವ ಮೂಲಕ ಹಣವನ್ನು ಉಳಿಸಬಹುದು.ಹೊಸ ಫೋನ್,ಲ್ಯಾಪ್‌ಟಾಪ್,ಪ್ರಿಂಟರ್,ಪ್ಲೇ ಸ್ಟೇಷನ್,ಹೋಮ್ ಥಿಯೇಟರ್ ಸಿಸ್ಟಮ್,ಸ್ಪೀಕರ್,ಎಲ್‌ಇಡಿ ಟಿವಿ,ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಂದ ಹಿಡಿದು ಸಣ್ಣ ಕಾಂಪ್ಯಾಕ್ಟ್ ಗಾತ್ರದ ಕ್ಯಾಮೆರಾಗಳವರೆಗೆ ಎಲ್ಲವೂ ಇಲ್ಲಿ  ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ.  

5 /5

ನಾವು ಮಾತನಾಡುತ್ತಿರುವ ಮಾರುಕಟ್ಟೆಯ ಹೆಸರು ಗಫಾರ್ ಮಾರುಕಟ್ಟೆ.ಇದು ದೇಶದ ರಾಜಧಾನಿ ದೆಹಲಿಯಲ್ಲಿದೆ.ಇದು ದೆಹಲಿಯ ಮಧ್ಯಭಾಗದಲ್ಲಿದ್ದು, ಇಲ್ಲಿಗೆ ಪ್ರಯಾಣ ಬೆಳೆಸುವುದು ಕೂಡಾ ಸುಲಭ.ಇಲ್ಲಿಗೆ ತಲುಪಲು ಹತ್ತಿರದ ಮೆಟ್ರೋ ನಿಲ್ದಾಣವೆಂದರೆ ಕರೋಲ್ ಬಾಗ್.