Unlucky Zodiac Sign: ಯುಗಾದಿ ನಂತರ ಈ 3 ರಾಶಿಯವರ ಲೈಫಲ್ಲಿ ಬರೀ ಕಹಿ! ಒಂದು ವರ್ಷ ನರಕದ ಅನುಭವ ಖಂಡಿತ!

Unlucky Zodiac Sign: ಹಿಂದೂ ಧರ್ಮದ ಹೊಸ ವರ್ಷ ಇಂದಿನಿಂದ ಪ್ರಾರಂಭವಾಗಿದೆ. ಶೋಭಕೃತ್ ಸಂವತ್ಸರ ಯುಗಾದಿ ಹಬ್ಬವನ್ನು ಇಂದು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಆದರೆ ಈ ಸಂವತ್ಸರದಲ್ಲಿ ಕೆಲ ರಾಶಿಗಳಿಗೆ ಭಾರೀ ಸಮಸ್ಯೆ ಎದುರಾಗಲಿದೆ. ಬರೀ ಕಹಿಯೇ ಈ ಮೂರು ರಾಶಿಯವರ ಜೀವನದಲ್ಲಿ ತುಂಬಲಿದೆ ಎಂದು ಜೋತಿಷ್ಯ ಹೇಳುತ್ತಿದೆ.

1 /8

ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತು ಗ್ರಹಗಳನ್ನು ಅತ್ಯಂತ ಕೆಟ್ಟ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಈ ರಾಹು ಕೇತು ಗ್ರಹಗಳು ಯಾವ ರಾಶಿಯನ್ನ ಪ್ರವೇಶಿಸಿದರೂ ಆ ಜಾತಕದಲ್ಲಿ ಕೆಟ್ಟ ಪ್ರಭಾವ ಖಂಡಿತ ಎಂದು ಹೇಳಲಾಗುತ್ತದೆ.  

2 /8

ಪ್ರತಿಯೊಂದು ಗ್ರಹವು ತನ್ನ ಪಥವನ್ನು ಬದಲಾಯಿಸುತ್ತದೆ. ಆಗ ಕೆಲವು ರಾಶಿಗಳಿಗೆ ಒಳಿತಾದರೆ, ಇನ್ನೂ ಕೆಲ ರಾಶಿಗಳಿಗೆ ಕೆಡುಕಾಗುತ್ತದೆ.

3 /8

ಹಿಂದೂ ಪಂಚಾಂಗದಲ್ಲಿ ರಾಹು ಮತ್ತು ಕೇತು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದರ ಪರಿಣಾಮವು ಆಯಾ ರಾಶಿಗಳ ಮೇಲೆ ಬಹಳ ನಕಾರಾತ್ಮಕವಾಗಿ ಬೀರುತ್ತದೆ. ಇದೀಗ ಈ ಗ್ರಹಗಳ ಸಂಚಾರದಿಂದ ಹಲವು ರಾಶಿಯವರ ಜೀವನವು ನರಕವಾಗಬಹುದು. ಅಂತಹ ಮೂರು ರಾಶಿಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.

4 /8

ಮೇಷ ರಾಶಿ: ರಾಹು-ಕೇತುವಿನ ಸಂಚಾರದಿಂದ ಮೇಷ ರಾಶಿಯವರ ಜೀವನ ಅಲ್ಲೋಲ ಕಲ್ಲೋಲ ಆಗಬಹುದು. ಆರ್ಥಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು, ವ್ಯವಹಾರದಲ್ಲಿ ನಷ್ಟ ಆಗುವ ಸಾಧ್ಯತೆಗಳಿವೆ. ಹೂಡಿಕೆ ಮಾಡಲು ಸಹ ಇದು ಸರಿಯಾದ ಸಮಯವಲ್ಲ. ಈ ಒಂದು ವರ್ಷ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.  

5 /8

ವೃಷಭ ರಾಶಿ: ಈ ರಾಶಿಯವರ ಮೇಲೂ ರಾಹು ಕೇತು ಪ್ರಭಾವ ಬೀರಲಿದೆ. ಮನೆಯಲ್ಲಿ ಸಹ ಅಶಾಂತಿ, ಸಂಗಾತಿಯ ಜೊತೆ ಮೈಮನಸ್ಸು, ಆರ್ಥಿಕ ನಷ್ಟ ಹೀಗೆ ಅನೇಕ ಸಮಸ್ಯೆಗಳು ಬರಬಹುದು.

6 /8

ಕನ್ಯಾ ರಾಶಿಯವರಿಗೆ ನರಕಯಾತನೆ ತಪ್ಪಿದ್ದಲ್ಲ. ಉದ್ಯೋಗ, ವ್ಯವಹಾರಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹಣದ ನಷ್ಟ, ಕುಟುಂದಲ್ಲಿ ಜಗಳ, ಸಾಲ ತೀರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗುವುದು. ಬಹಳ ಎಚ್ಚರದಿಂದ ಹೆಜ್ಜೆಯಿಡಿ.

7 /8

ಈ ಮೂರು ರಾಶಿಗಳಲ್ಲದೆ, ಬಹುತೇಕ ಎಲ್ಲಾ ರಾಶಿಗಳಿಗೂ ಸಮಸ್ಯೆಯಾಗಲಿದೆ. ಹಾಗಾಗಿ ಬಹಳ ಎಚ್ಚರವಹಿಸುವುದು ಸೂಕ್ತ.

8 /8

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)