Auspicious Drushti Sambandh: ಎರಡು ಶತಮಾನಗಳ ಬಳಿಕ ರೂಪುಗೊಂಡ ಗುರು, ಶುಕ್ರ ಹಾಗೂ ಶನಿಯ ಶುಭ ದೃಷ್ಠಿ ಸಂಬಂಧ, 4 ರಾಶಿಗಳ ಜನರಿಗೆ ಭಾರಿ ಧನಲಾಭ-ಭಾಗ್ಯೋದಯ ಯೋಗ!

Auspicious Drushti Sambandh: ಜೋತಿಷ್ಯ ಶಾಸ್ತ್ರದ ಪ್ರಕಾರ 200 ವರ್ಷಗಳ ಬಳಿಕ ಗುರು, ಶುಕ್ರ ಹಾಗೂ ಶನಿ ದೇವನ ಶುಭ ದೃಷ್ಠಿ ಸಂಬಂಧ ನಿರ್ಮಾಣಗೊಳ್ಳುತ್ತಿದ್ದು, ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 4 ರಾಶಿಗಳ ಜನರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಭಾರಿ ಧನಲಾಭ ಹಾಗೂ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಬನ್ನಿ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

Auspicious Drushti Sambandh: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಪರಿವರ್ತಿಸುವ ಮೂಲಕ ಅಥವಾ ಗೋಚರಿಸುವ ಮೂಲಕ ಪರಸ್ಪರ ಮೇಲೆ ಶುಭ ದೃಷ್ಠಿಯನ್ನು ಬೀರುತ್ತವೆ. ಗ್ರಹಗಳ ಈ ಶುಭ ದೃಷ್ಠಿ ಮಾನವನ ಜೀವನದ ಮೇಲೆ ಹಾಗೂ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಪ್ರಸ್ತುತ ಏಪ್ರಿಲ್ 6 ರಂದು ಶುಕ್ರ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಮೇ 2, 2023ರವರೆಗೆ ಆತ ಅಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಇನ್ನೊಂದೆಡೆ ಗುರು ಹಾಗೂ ಶುಕ್ರ ಪರಸ್ಪರ ತೃತೀಯ ಹಾಗೂ ಏಕಾದಶ ರಾಶಿಯಲ್ಲಿರಲಿವೆ. ಜೊತೆಗೆ ಶನಿ ಹಾಗೂ ಶುಕ್ರ ಪರಸ್ಪರ ಚತುರ್ಥ ಹಾಗೂ ದಶಮ ರಾಶಿಯಲ್ಲಿರಲಿವೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ನೋಡಲು ಸಿಗಲಿದೆ. ಆದರೆ 4 ರಾಶಿಗಳ ಜನರಿಗೆ ಇದರಿಂದ ವಿಶೇಷ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Buddha Purnima 2023: 130 ವರ್ಷಗಳ ಬಳಿಕ ರೂಪುಗೊಳ್ಳಲಿದೆ ಈ ಮಹಾಯೋಗ, ರಾತ್ರೋರಾತ್ರಿ ನಿಮ್ಮ ಮನೆ ಕದ ತಟ್ಟಲಿದ್ದಾಳೆ ತಾಯಿ ಲಕ್ಷ್ಮಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜಾತಕದವರ ಪಾಲಿಗೆ ಶುಕ್ರ, ಗುರು ಹಾಗೂ ಶನಿದೇವನ ಶುಭ ದೃಷ್ಠಿ ಸಂಬಂಧ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಬೆಂಬಲ ಸಿಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಈ ಸಮಯ ಉತ್ತಮವಾಗಿದೆ. ದಾಂಪತ್ಯ ಜೀವನದಲ್ಲಿ ಸುಖ ಹೆಚ್ಚಾಗಲಿದೆ. ಕೆಲಸ ಕಾರ್ಯಗಳಲ್ಲಿ ಬರುತ್ತಿದ್ದ ಅಡೆತಡೆಗಳು ದೂರಾಗಲಿವೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುವ ಯೋಗವಿದೆ. ಇನ್ನೊಂದೆಡೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ.   

2 /4

ಕುಂಭ ರಾಶಿ: ಗುರು, ಶುಕ್ರ ಹಾಗೂ ಶನಿದೇವನ ಈ ಶುಭ ದೃಷ್ಠಿ ಸಂಬಂಧ ಕುಂಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಬೆಂಬಲ ಸಿಗಲಿದೆ. ಹೊಸ ವಾಹನ, ಆಸ್ತಿಯನು ಖರೀದಿಸಲು ಮನಸ್ಸು ಮಾಡುವಿರಿ. ಇನ್ನೊಂದೆಡೆ ಶುಕ್ರನ ದೆಸೆಯಿಂದ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಆಸ್ತಿ ಪಾಸ್ತಿ ವ್ಯವಹಾರಕ್ಕೆ ಈ ಸಮಯ ಅನುಕೂಲಕರವಾಗಿದೆ.  

3 /4

ಮೇಷ ರಾಶಿ: ಶನಿ, ಗುರು ಹಾಗೂ ಶುಕ್ರರ ಶುಭ ದೃಷ್ಠಿ ಸಂಬಂಧ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಅಪಾರ ಧನಲಾಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಯಾವುದಾದರೊಂದು ಆಸ್ತಿ-ವಾಹನ ಖರೀದಿಸುವ ಸಾಧ್ಯತೆ ಇದೆ. ನಿಮಗೆ ಸುಖ ಶಾಂತಿ ಪ್ರಾಪ್ತಿಯಾಗಲಿದೆ. ನಿಮ್ಮ ಎಲ್ಲಾ ಬಯಕೆಗಳು ಈಡೇರಲಿವೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಬಾಳಸಂಗಾತಿಯ ಉನ್ನತಿ ಈ ಅವಧಿಯಲ್ಲಿ ಸಾಧ್ಯವಾಗಲಿದೆ.  

4 /4

ಸಿಂಹ ರಾಶಿ: ಮೂರು ದೊಡ್ಡ ಗ್ರಹಗಳ ಈ ಶುಭ ದೃಷ್ಠಿ ಸಂಬಂಧ ಸಿಂಹ ರಾಶಿಯ ಜನರ ಪಾಲಿಗೆ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನೌಕರಿಯಲ್ಲಿ ಯಶಸ್ಸು ಲಭಿಸುವ ಯೋಗವಿದೆ. ವ್ಯಾಪಾರದಲ್ಲಿ ನಿರತರಾದವರಿಗೆ ಬಿಸ್ನೆಸ್ ನಲ್ಲಿ ಅಪಾರ ಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ವೃತ್ತಿ ಜೀವನದಲ್ಲಿ ಉನ್ನತಿಯಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಸಿಗುವ ನಿರೀಕ್ಷೆ ಇದೆ. ಹಣಕಾಸಿಗೆ ಸಂಬಂಧಿಸಿದ ಚಿಂತೆ ದೂರಾಗಲಿದೆ ಮತ್ತು ಪ್ರೇಮ ಸಂಬಂಧಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)