30 ವರ್ಷಗಳ ಬಳಿಕ ಈ ರಾಶಿಯವರನ್ನು ಅತಿಯಾಗಿ ಹರಸಲಿದ್ದಾನೆ ಶನಿ, ಸಿಗುವುದು ಎಲ್ಲಾ ಕಷ್ಟಗಳಿಂದ ಮುಕ್ತಿ

ಶನಿಯು ರೂಪಿಸುತ್ತಿರುವ ಈ ಯೋಗದ ಶುಭ ಫಲ ಕೆಲವೊಂದು ರಾಶಿಯವರ ಮೇಲೆ ಗೋಚರಿಸಲಿದೆ. ಅದರಲ್ಲೂ ನಾಲ್ಕು ರಾಶಿಗಳ ಮೇಲೆ ಅದ್ಭುತ ಪ್ರಯೋಜನಗಳಾಗಲಿವೆ.
 

ಬೆಂಗಳೂರು : ಜ್ಯೋತಿಷ್ಯದಲ್ಲಿ ಪ್ರತಿಯೊಂದು ರಾಶಿಯನ್ನು ಆಳುವ ಗ್ರಹವಿದೆ. ಆ ಪ್ರಕಾರ ಕುಂಭ ರಾಶಿಯ ಅಧಿಪತಿ ಶನಿ. ಜನವರಿ 17,  2023 ರಂದು, ರಾಶಿ ಬದಲಾಯಿಸುವ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿ ಕುಂಭ ರಾಶಿಯನ್ನು ಪ್ರವೇಶಿಸುತ್ತಿರುವುದು 30 ವರ್ಷಗಳ ಬಳಿಕ ಎನ್ನುವುದು ಇಲ್ಲಿ ವಿಶೇಷ. 30 ವರ್ಷಗಳ ನಬಳಿಕ ಕುಂಭ ರಾಶಿ ಪ್ರವೇಶಿಸುತ್ತಿರುವ ಶನಿ ಶಶ ಪಂಚ ಮಹಾಪುರುಷ ರಾಜಯೋಗವನ್ನು ರೂಪಿಸುತ್ತಾನೆ. ಜ್ಯೋತಿಷ್ಯದಲ್ಲಿ  ಈ ಯೋಗವನ್ನು ಅತ್ಯಂತ ಮಂಗಳಕರ ಯೋಗ ಎಂದು ಕರೆಯಲಾಗುತ್ತದೆ.  ಶನಿಯು ರೂಪಿಸುತ್ತಿರುವ ಈ ಯೋಗದ ಶುಭ ಫಲ ಕೆಲವೊಂದು ರಾಶಿಯವರ ಮೇಲೆ ಗೋಚರಿಸಲಿದೆ. ಅದರಲ್ಲೂ ನಾಲ್ಕು ರಾಶಿಗಳ ಮೇಲೆ ಅದ್ಭುತ ಪ್ರಯೋಜನಗಳಾಗಲಿವೆ. ಈ ರಾಶಿಯವರಿಗೆ ತಾವು ಮಾಡುವ ಕೆಲಸ ಕಾರ್ಯಗಳಲ್ಲಿ ಹಿಂದೆದೂ ಕಾಣದ ಯಶಸ್ಸು ಸಿಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ವೃಷಭ ರಾಶಿ :ಶಶ ಪಂಚ ಮಹಾಪುರುಷ ರಾಜಯೋಗ  ವೃಷಭ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಹೊಸ ಉದ್ಯೋಗಾವಕಾಶಗಳು ಅರಸಿಕೊಂಡು ಬರಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಾದರೆ ಜನವರಿ 17 ರ ನಂತರ ಪ್ರಾರಂಭಿಸಿದರೆ ವ್ಯಾಪಾರ ಕೈ ಹಿಡಿಯಲಿದೆ. ದೊಡ್ಡ ಮಟ್ಟದ ಲಾಭವೂ ಆಗಲಿದೆ.    

2 /4

ಮಿಥುನ ರಾಶಿ : ಶನಿ ರಾಶಿ ಬದಲಾವಣೆಯಿಂದ ಉಂಟಾಗುವ ಶಶ ಪಂಚ ಮಹಾಪುರುಷ ರಾಜಯೋಗದಿಂದ ಮಿಥುನ ರಾಶಿಯವರ ಅದೃಷ್ಟ ಬೆಳಗಲಿದೆ. ಇವರ ಜೀವನದಲ್ಲಿ ಇದುವರೆಗೆ ಇದ್ದ ಎಲಾ ರೀತಿಯ ಕಷ್ಟಗಳು ಕೊನೆಯಾಗಲಿವೆ.  ದುಃಖ  ಅಂತ್ಯವಾಗಲಿದೆ.  ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಕನಸು ನನಸಾಗುವುದು. 

3 /4

ತುಲಾ ರಾಶಿ : ಶನಿಯ ಸಂಚಾರವು ತುಲಾ ರಾಶಿಯವರಿಗೆ ಕೂಡಾ ಉತ್ತಮ ಫಲಿತಾಂಶಗಳನ್ನುನೀಡಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ  ಮನೆ ಮಾಡಲಿದೆ. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ. ಮಕ್ಕಳ ಮೂಲಕ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.      

4 /4

ಧನು ರಾಶಿ : ನಿಮ್ಮ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳಾಗಲಿವೆ. ಉದ್ಯೋಗ ಬದಲಾಯಿಸುವವರಿಗೆ ಇದು ಸರಿಯಾದ ಸಮಯ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಗೆಲುವು ನಿಮ್ಮದೇ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದು. ಇಲ್ಲಿಯವರೆಗೆ ಶನಿ ಸಾಡೇಸಾತಿಯ ಪರಿಣಾಮ ಎದುರಿಸುತ್ತಿದ್ದ ಎಲ್ಲಾ ಕಷ್ಟಗಳು ಪರಿಹಾರವಾಗುವುದು.  ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವುದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)