ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

                               

Mental Health: ಮಾನಸಿಕ ಆರೋಗ್ಯವನ್ನು ನೋಡುವ ವಿಧಾನ ವಿಭಿನ್ನವಾಗಿರುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಹಲವು ಸಂಶೋಧನೆಗಳು ಕೂಡ ನಡೆದಿವೆ. ಮಾನಸಿಕ ಆರೋಗ್ಯವನ್ನು ಸುಧಾರಿಸಲು ಔಷಧಿಗಳೊಂದಿಗೆ ಕೆಲವು ನೈಸರ್ಗಿಕ ವಿಧಾನಗಳು ಬಹಳ ಪರಿಣಾಮಕಾರಿ ಮಾರ್ಗಗಳಾಗಿವೆ. ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಬಹುದು ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆರೋಗ್ಯ ತಜ್ಞರ ಪ್ರಕಾರ, ಯಾವುದೇ ವ್ಯಕ್ತಿಗೆ ಉತ್ತಮ ಆರೋಗ್ಯಕ್ಕಾಗಿ ನೀರು, ಆಹಾರ ಎಷ್ಟು ಮುಖ್ಯವೋ ಪ್ರತಿನಿತ್ಯ 7 ಋಣ 9 ಗಂಟೆಗಳವರೆಗೆ ನಿದ್ದೆ ಮಾಡುವುದು ಕೂಡ ತುಂಬಾ ಅಗತ್ಯ. ಸರಿಯಾಗಿ ನಿದ್ದೆ ಮಾಡದಿದ್ದರೆ ಅದು ನಮ್ಮ ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. 

2 /5

ನಿತ್ಯ ಯೋಗ-ವ್ಯಾಯಾಮ ಮಾಡುವುದರಿಂದ ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲ, ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೂ ಕೂಡ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. 

3 /5

ಈ ವೇಗದ ಜೀವನ ಶೈಲಿಯಲ್ಲಿ ಪ್ರತಿಯೊಂದು ಕೆಲಸವೂ ಬೇಗ ಮುಗಿಯಬೇಕು ಎಂಬ ಆತುರ ಜನರಲ್ಲಿ ಇರುತ್ತದೆ. ಹಾಗಾಗಿಯೇ, ಬಹಳಷ್ಟು ಜನರು ಸಂಸ್ಕರಿಸಿದ ಆಹಾರಗಳ ಮೊರೆ ಹೋಗಿರುವುದು ಸಹ ಸುಳ್ಳಲ್ಲ. ಆದರೆ, ಇದು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಯಾವುದೇ ವ್ಯಕ್ತಿಗೆ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಎಂದರೆ ಅವರ ದೈನಂದಿನ ಆಹಾರದಲ್ಲಿ ಧಾನ್ಯಗಳು, ಪ್ರೊಟೀನ್, ಆರೋಗ್ಯಕರ ಕೊಬ್ಬಿಣ ಆಹಾರಗಳು, ತಾಜಾ ಹಣ್ಣು-ತರಕಾರಿಗಳ ಸೇವನೆ ಬಹಳ ಅಗತ್ಯ.

4 /5

ನಿತ್ಯ ಕೆಲವರಿಗೆ ಬೆಡ್ ಕಾಫಿ ಕುಡಿಯದಿದ್ದರೆ ದಿನವೇ ಆರಂಭವಾಗುವುದಿಲ್ಲ. ಆದರೆ, ಹಲವು ಸಂಶೋಧನೆಗಳ ಪ್ರಕಾರ, ನಿತ್ಯ ಕೆಫಿನ್ ಸೇವನೆಯು ನಮ್ಮ ಮಾನಸಿಕ ಆರೋಗ್ಯದ ಮೇಲೂ ಕೂಡ ನಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂದು ತಿಳಿದು ಬಂದಿದೆ. ಇದನ್ನು ತಪ್ಪಿಸಲು ಕೆಫಿನ್ ಸೇವನೆಯನ್ನು ನಿಯಂತ್ರಿಸಿ. 

5 /5

ಸೂರ್ಯನ ಕಿರಣಗಳು ಡಿ ವಿಟಮಿನ್ ನ ಉತ್ತಮ ಮೂಲ ಎಂಬುದು ನಿಮಗೆ ತಿಳಿದೇ ಇದೆ. ಪ್ರತಿನಿತ್ಯ 10 ರಿಂದ 15 ನಿಮಿಷಗಳವರೆಗೆ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳು ಲಭ್ಯವಿದೆ. ಅದರಲ್ಲೂ ಎಳೆ ಬಿಸಿಲಿಗೆ ನಮ್ಮನ್ನು ನಾವು ಒಡ್ಡಿ ಕೊಳ್ಳುವುದರಿಂದ ಅದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.