Trisha son died : ಬಹುಭಾಷಾ ನಟಿ ತ್ರಿಶಾ ಮಗ ನಿಧನ.. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ಅವರ ಅಭಿಮಾನಿಗಳೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಹಿರೋಯಿನ್‌ಗೆ ತನ್ನ ಮುದ್ದಿನ ಕಂದನ ಸಾವು ದುಃಖ ತಂದಿದೆ..
ಹೌದು.. ತ್ರಿಶಾಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ಕಾಳಜಿ ಮತ್ತು ರಕ್ಷಣೆಯ ಬಗ್ಗೆ ನಿಯಮಿತವಾಗಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಅಲ್ಲದೆ, ನಟಿ ಜೋರೋ ಎಂಬ ನಾಯಿಯನ್ನು ಮಗನಂತೆ ಸಾಕುತ್ತಿದ್ದರು.
ನಟಿ ತ್ರಿಶಾ ತಮಿಳು ಮಾತ್ರವಲ್ಲದೆ ಮಲಯಾಳಂ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸತತ 22 ವರ್ಷಗಳಿಂದ ಯುವ ನಾಯಕಿಯರ ಅಬ್ಬರ ನಡುವೆಯೂ ಈ ಚೆಲುವೆಯ ಖ್ಯಾತಿ ಎಲ್ಲಿಯೂ ಕುಗ್ಗಿಲ್ಲ ತಗ್ಗಿಲ್ಲ..
ಇತ್ತೀಚಿಗೆ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ನಟ ವಿಜಯ್ ಅಭಿನಯದ ಲಿಯೋ ಚಿತ್ರದಲ್ಲಿ ವಿಜಯ್ ಜೊತೆ ತ್ರಿಷಾ ನಟಿಸಿದ್ದರು. ಸಾಕಷ್ಟು ಗ್ಯಾಪ್ ನಂತರ ಈ ಜೋಡಿಯನ್ನು ಪರದೆಯ ಮೇಲೆ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದರು.
ತ್ರಿಶಾ ಸದ್ಯ ತಮಿಳು, ತೆಲುಗು ಮತ್ತು ಮಲಯಾಳಂನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಟಿ ಅಜಿತ್ ಜೊತೆಗಿನ ʼವಿಡಮುಯರ್ಜಿʼ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇದರ ನಂತರ ಅಜಿತ್ ಮುಂಬರುವ ಬಹುನಿರೀಕ್ಷ ಸಿನಿಮಾ ʼಗುಡ್ ಬ್ಯಾಡ್ʼ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.. ಈ ಎರಡೂ ಚಿತ್ರಗಳು ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾಗಲಿವೆ.
ಕೆಲವು ದಿನಗಳ ಹಿಂದೆ ತಮ್ಮ ರಜೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದ ತ್ರಿಶಾ ಇಂದು ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ ತನ್ನ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದೆ. ಪೋಸ್ಟ್‌ನಲ್ಲಿ, "ನನ್ನ ಮಗ ಜೋರೋ (ತ್ರಿಷಾ ಅವರ ಸಾಕು ನಾಯಿ) ಇಂದು ಬೆಳಿಗ್ಗೆ ನಿಧನವಾಯಿತು.. ನನ್ನ ಬದುಕು ಈಗ ಶೂನ್ಯ ಎಂಬುದು ನನ್ನನ್ನು ಚೆನ್ನಾಗಿ ಬಲ್ಲವರಿಗೆ ಗೊತ್ತು. ನನ್ನ ಕುಟುಂಬ ಮತ್ತು ನಾನು ನೋವಲ್ಲಿದ್ದೇವೆ.. ಸದ್ಯಕ್ಕೆ ನಟನೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ.. ಎಂದು ಅವರು ಆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.