Randeep Hooda Wedding Pics: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಣದೀಪ್ ಹೂಡಾ..!

Randeep Hooda and Lin Laishram Wedding: ರಣದೀಪ್ ಮತ್ತು ಲಿನ್​ಗೆ ಬಾಲಿವುಡ್​ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಕುಟುಂಬಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶುಭ ಕೋರಿದ್ದಾರೆ.

Randeep Hooda Wedding: ಬಾಲಿವುಡ್‍ನ ಖ್ಯಾತ ನಟ ರಣದೀಪ್ ಹೂಡಾ ಮತ್ತು ನಟಿ ಲಿನ್ ಲೈಶ್ರಾಮ್ ಅವರು ಇಂಫಾಲ್‌ನಲ್ಲಿ ಬುಧವಾರ ನಡೆದ ಸಾಂಪ್ರದಾಯಿಕ ಮೈತಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಣಿಪುರದ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿದೆ. ರಣದೀಪ್ ಹೂಡಾ ವೈಟ್​ ಡ್ರೆಸ್​ನಲ್ಲಿ ಕಾಣಿಸಿಕೊಂಡ್ರೆ, ಲಿನ್ ಲೈಶ್ರಾಮ್ ಅವರು ಟ್ರೆಡಿಷನ್​ ಲುಕ್​ನಲ್ಲಿ ಮಿಂಚಿದರು. ತಮ್ಮ ಮದುವೆ ಫೋಟೋಗಳನ್ನು ನಟ ರಣದೀಪ್ ಹೂಡಾ ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಬಾಲಿವುಡ್ ನಟ ರಣದೀಪ್ ಹೂಡಾ ಮತ್ತು ನಟಿ ಲಿನ್ ಲೈಶ್ರಾಮ್ ಅವರ ಮದುವೆ ಅದ್ಧೂರಿಯಾಗಿ ನಡೆದಿದೆ. ಮಣಿಪುರದ ಸಂಪ್ರದಾಯದಂತೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

2 /5

ಬಿಳಿ ಬಟ್ಟೆ ತೊಟ್ಟಿದ್ದ ರಣದೀಪ್ ಮಣಿಪುರದ ಸುಂದರ ವರನಂತೆ ಕಾಣುತ್ತಿದ್ದರು. ಅದರಂತೆ ಲಿನ್ ಸಾಂಪ್ರದಾಯಿಕ ಮಣಿಪುರಿ ವಧುವಿನಂತೆ ಸಂಪ್ರದಾಯಿಕ ಉಡುಗೆ ತೊಟ್ಟು ಮೈತುಂಬಾ ಒಡವೆ ಹಾಕಿಕೊಂಡು ಮಿಂಚಿದರು.

3 /5

ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರಷ್ಟೇ ಈ ಜೋಡಿಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಗೂ ಮುನ್ನ ಬುಧವಾರ ರಂದೀಪ್ ಮತ್ತು ಲಿನ್ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಜೋಡಿ ಖುಷಿ ಖುಷಿಯಿಂದಲೇ ಫೋಟೋಗಳಿಗೆ ಪೋಸು ನೀಡಿದೆ.  

4 /5

ಇಂಫಾಲ್‌ನ ಚುಮ್ತಾಂಗ್ ಶಾನಪುಂಗ್ ರೆಸಾರ್ಟ್‌ನಲ್ಲಿ ರಣದೀಪ್ ಮತ್ತು ಲಿನ್ ಸಾಂಪ್ರದಾಯಿಕ ಮೈತೈ ವಿವಾಹ ಸಮಾರಂಭದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಸತಿಪತಿಗಳಾದರು. ಕೆಲವು ದಿನಗಳ ಹಿಂದಷ್ಟೇ ರಣದೀಪ್ ಅವರು ಲಿನ್ ಜೊತೆ ನವೆಂಬರ್ 29ರಂದು ಇಂಫಾಲ್‌ನಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದರು.

5 /5

ರಣದೀಪ್ ಮತ್ತು ಲಿನ್​ಗೆ ಬಾಲಿವುಡ್​ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಕುಟುಂಬಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶುಭ ಕೋರಿದ್ದಾರೆ. ಈ ಜೋಡಿಯ ಅದ್ದೂರಿ ಮದುವೆ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.