Pawan Kalyan wife Anna Lezhneva : ತೆಲುಗು ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರು ತಮ್ಮ ಪತ್ನಿ ಅನ್ನಾ ಲೆಜಿನೋವಾ ಅವರೊಂದಿಗಿನ ಸಂಬಂಧದ ಸುತ್ತಲು ಎದ್ದಿದ್ದ ವಿಚ್ಛೇದನದ ಊಹಾಪೋಹಗಳಿಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಟ್ಟಿಗೆ ಇರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕೊನೆಗೊಳಿಸಿದ್ದಾರೆ.
2013 ರಲ್ಲಿ ವಿವಾಹವಾದ ದಂಪತಿಗಳು ಹೈದರಾಬಾದ್ನಲ್ಲಿರುವ ತಮ್ಮ ನಿವಾಸದಲ್ಲಿ ಪೂಜೆ ಸಮಾರಂಭವನ್ನು ನೆರವೇರಿಸಿ, ವರಾಹಿ ವಿಜಯ ಯಾತ್ರೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಟ್ವಿಟರ್ನಲ್ಲಿ ತೆಲುಗಿನಲ್ಲಿ ಶೀರ್ಷಿಕೆಯೊಂದನ್ನು ನೀಡಿ, ಪತ್ನಿ ಜೊಗೆತಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಪವನ್ ಕಲ್ಯಾಣ್ ಪತ್ನಿ ಅನ್ನಾ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಡೈವೋರ್ಸ್ ನೀಡಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.
ವರುಣ್ ತೇಜ್ ನಿಶ್ಚಿತಾರ್ಥದಲ್ಲಿ ಅನ್ನಾ ಅನುಪಸ್ಥಿತಿ ಊಹಾಪೋಹಗಳಿಗೆ ತುಪ್ಪ ಸುರಿದಿತ್ತು. ಇದೀಗ ಪವನ್ ತಮ್ಮ ಪತ್ನಿಯೊಂದಿಗಿನ ಫೋಟೋ ಹಂಚಿಕೊಂಡು ವದಂತಿಗೆ ತೆರೆ ಎಳೆದಿದ್ದಾರೆ.
ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜೆನೆವಾ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಪವನ್ ಅನ್ನಾ ಫೋಟೋ ಹಂಚಿಕೊಂಡು ವಿಚ್ಛೇದನದ ಊಹಾಪೋಹಗಳಿಗೆ ಅಂತ್ಯ ಹಾಡುವ ಮೂಲಕ ತಮ್ಮ ಕೌಟುಂಬಿಕ ಜೀವನದ ಮೇಲೆ ವದಂತಿ ಹಬ್ಬಿಸಿದ್ದರಿಗೆ ತಿರುಗೇಟು ನೀಡಿದ್ದಾರೆ.