ಸಿನಿಮಾ ಗೆಲ್ಲಿಸಿದ ಕರುನಾಡ ಸೆಲೆಬ್ರಿಟಿಗಳಿಗೆ ಧನ್ಯವಾದ ಅರ್ಪಿಸಿದ ʼಕಾಟೇರʼ ಡಿಬಾಸ್‌..!

Darshan Kaatera : ಕಾಟೇರ ಸಿನಿಮಾ ಗೆಲುವಿಗೆ ಕಾರಣವಾದ ಸೆಲೆಬ್ರಿಟಿಗಳಿಗೆ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ತಮ್ಮ ಸೊಷಿಯಲ್‌ ಮೀಡಿಯಾದ ಖಾತೆಯಲ್ಲಿ, ʼʼಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ❤️ಈ ಪ್ರೀತಿಯ ಚಪ್ಪಾಳೆ ನಮ್ಮ Kaatera ಚಿತ್ರತಂಡದ ಮನತುಂಬಿದೆ. Speechlessʼʼ ಅಂತ ಬರೆದುಕೊಂಡಿದ್ದಾರೆ.

1 /9

ಕರುನಾಡಿನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳ ನಡುವೆ ಕಾಟೇರ ಘರ್ಜಿಸಿದ್ದಾನೆ. ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.  

2 /9

ನಟ ದರ್ಶನ್‌ ಅಭಿನಯದ ಕಾಟೇರ ನಿಗೆ ಕರುನಾಡ ಪ್ರೇಕ್ಷಕರು ಫಿದಾ ಆಗಿದ್ದು, ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ.   

3 /9

ಕಾಟೇರನಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದ್ದು, ಈ ಮಟ್ಟಕ್ಕೆ ಸಿನಿಮಾ ಹಿಟ್ ಆಗೋಕೆ ಪ್ರಮುಖ ಕಾರಣ ಅಂದ್ರೆ ಚಾಲೆಂಜಿಗ್ ಸ್ಟಾರ್‌ ದರ್ಶನ ಅವರ ನಟನೆ ಅಂದ್ರೆ ತಪ್ಪಾಗಲ್ಲ  

4 /9

ಕಾಟೇರ ಸಿನಿಮಾದಲ್ಲಿ ದರ್ಶನ್‌ ಒನ್‌ಮ್ಯಾನ್‌ ಶೋನಂತೆ ಮಿಂಚುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಒಂಟಿ ಸಲಗದಂತೆ ಅಬ್ಬರಿಸುತ್ತಿದ್ದಾರೆ.  

5 /9

ನಮ್ಮ ಮಣ್ಣಿನ ರೈತರ ಕಥಾ ಹಂದರ ಹೊಂದಿರುವ ಸಿನಿಮಾ ನಿರ್ದೇಶನ ಮಾಡಿದ ತರುಣ್ ಸುಧೀರ್‌ ಅವರಿಗೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

6 /9

ಆಕ್ಷನ್‌, ಸೆಂಟಿಮೆಂಟ್‌, ಲವ್‌ ದೃಶ್ಯಗಳು ಅದ್ಭುತವಾಗಿದ್ದು, ದರ್ಶನ್‌ ಅವರು ಕಥೆಗೆ ತಕ್ಕಂತೆ ಪರಿಪೂರ್ಣವಾಗಿ ನಟಿಸಿದ್ದಾರೆ.   

7 /9

ಇದುವರೆಗೂ ದಚ್ಚು ಹಲವು ಸಿನಿಮಾಗಳಲ್ಲಿ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ, ಕಾಟೇರ ಸಿನಿಮಾದಲ್ಲಿ ದಚ್ಚು ದ್ವಿಪಾತ್ರ ವಿಭಿನ್ನ ಅನುಭವ ನೀಡುತ್ತದೆ.   

8 /9

ಆರಾಧಾನ, ಶೃತಿ, ಜಗಪತಿಬಾಬು, ಅವಿನಾಶ್‌, ಕುಮಾರ್‌ ಗೋವಿಂದ,0 ಸೇರಿದಂತೆ ಸಿನಿಮಾದಲ್ಲಿ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ. 

9 /9

ಸಧ್ಯ ಚಿತ್ರದ ಗೆಲುವಿಗೆ ಕಾರಣರಾದ ಕನ್ನಡ ಸಿನಿ ಅಭಿಮಾನಿಗಳಿಗೆ ದರ್ಶನ್‌ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.