ಟೈಲರ್ ಆಗಿದ್ದಾತ ಚಿನ್ನ ಗೆದ್ದ: ಕಾಮನ್ ವೆಲ್ತ್ ನಲ್ಲಿ ಬಂಗಾರ ಗೆದ್ದ ಅಚಿಂತಾ ಜೀವನಗಾಥೆ

  • Aug 08, 2022, 16:23 PM IST

ಹವಾಲ್ದಾರ್ ಅಚಿಂತ  ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ. ಅಚಿಂತಾ ಇಂದು ಜಬಲ್‌ಪುರ ತಲುಪಿದಾಗ ಅವರನ್ನು ಭವ್ಯ ಸ್ವಾಗತ ಮಾಡಲಾಯಿತು. ದುಮ್ನಾ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತವನ್ನು ಆಯೋಜಿಸಲಾಗಿತ್ತು.

1 /5

20 ವರ್ಷದ ಅಚಿಂತಾ ಪಶ್ಚಿಮ ಬಂಗಾಳದ ಹೌರಾ ನಗರದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ಈ ಕಾರಣಕ್ಕಾಗಿ, ಅವರ ಆರಂಭಿಕ ಜೀವನವು ಹೋರಾಟದಿಂದ ತುಂಬಿತ್ತು. ಅವರ ತಂದೆ ಕೂಲಿ ಕಾರ್ಮಿಕರಾಗಿದ್ದರು.

2 /5

ವೇಟ್‌ಲಿಫ್ಟಿಂಗ್‌ನಲ್ಲಿ ವೃತ್ತಿಜೀವನವನ್ನು ಮಾಡಲು ಅವರು ತಮ್ಮ ಸಹೋದರನಿಂದ ಸ್ಫೂರ್ತಿ ಪಡೆದರು. ಅದರ ನಂತರ ಅವರು ಸ್ಥಳೀಯ ಜಿಮ್‌ಗೆ ಹೋಗುವ ಮೂಲಕ ತಮ್ಮ ತರಬೇತಿಯನ್ನು ಪ್ರಾರಂಭಿಸಿದರು. ತಂದೆಯ ಮರಣದ ನಂತರ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಹೊಲಿಗೆ ಮತ್ತು ಕಸೂತಿ ಕೆಲಸವನ್ನೂ ಮಾಡಿದ್ದಾರೆ.

3 /5

ಪದಕ ಗೆದ್ದ ನಂತರ ನನಗೆ ಅತೀವ ಸಂತಸವಾಗಿದೆ ಎಂದರು. ಹಲವು ಹೋರಾಟಗಳನ್ನು ಮೆಟ್ಟಿ ನಿಂತು ಈ ಪದಕ ಗೆದ್ದಿದ್ದೇನೆ. ಈ ಪದಕವನ್ನು ನನ್ನ ಸಹೋದರ ಮತ್ತು ಎಲ್ಲಾ ತರಬೇತುದಾರರಿಗೆ ಅರ್ಪಿಸುತ್ತೇನೆ. ಆ ಬಳಿಕ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತೇನೆ ಎಂದರು. ಇದೇ ವೇಳೆ ಅವರ ಈ ಸಾಧನೆಗೆ ಅವರ ತಾಯಿ ಪೂರ್ಣಿಮಾ ಶೆಯುಲಿ ತುಂಬಾ ಖುಷಿಯಾಗಿದ್ದು, ಅವರ ಪ್ರದರ್ಶನ ನೋಡಿ ಎಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದರು.

4 /5

ಅವರು ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಭಾರತೀಯ ವೇಟ್‌ಲಿಫ್ಟಿಂಗ್ ತಂಡದ ಅಗ್ರ ಪದಕ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಚಿಂತಾ CWG 2022 ರಲ್ಲಿ ಮೂರನೇ ಚಿನ್ನದ ಪದಕ ವಿಜೇತರಾದರು. ಪುರುಷರ ವೇಟ್ ಲಿಫ್ಟಿಂಗ್ 73 ಕೆಜಿ ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದರು.

5 /5

ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, "ಪ್ರತಿಭಾವಂತ ಅಚಿಂತಾ ಶೆಯುಲಿ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅವರು ಶಾಂತ ಸ್ವಭಾವ ಮತ್ತು ದೃಢತೆಗೆ ಹೆಸರುವಾಸಿಯಾಗಿದ್ದಾರೆ. ಅವರು ಈ ಗಮನಾರ್ಹ ಸಾಧನೆಗೆ ಶ್ರಮಿಸಿದ್ದಾರೆ. ಅವರ ಭವಿಷ್ಯಕ್ಕಾಗಿ ನನ್ನ ಶುಭಾಶಯಗಳು” ಎಂದು ಹೇಳಿದರು.