Abhishek Ambareesh: ಅಭಿಷೇಕ್‌ ಅಂಬರೀಷ್‌ ಎಂಗೇಜ್‌ ಆಗ್ತಿದ್ದಾರೆ ಎನ್ನಲಾದ ಬೆಡಗಿ ಇವರೇ ನೋಡಿ!

Aviva Prasad Bidapa : ಡಿಸೆಂಬರ್‌ನಲ್ಲಿ ಯಂಗ್‌ ರೆಬೆಲ್‌ ಸ್ಟಾರ್‌ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎಂಗೇಜ್‌ಮೆಂಟ್‌ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. 

Aviva Prasad Bidapa : ಡಿಸೆಂಬರ್‌ನಲ್ಲಿ ಯಂಗ್‌ ರೆಬೆಲ್‌ ಸ್ಟಾರ್‌ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಎಂಗೇಜ್‌ಮೆಂಟ್‌ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. ಆದರೆ ಇತ್ತೀಚೆಗೆ ಈ ವದಂತಿಗಳೆಲ್ಲ ಸುಳ್ಳು ಎಂದು ಸುಮಲತಾ ಅಂಬರೀಷ್‌ ಹೇಳಿದ್ದರು. ಅಲ್ಲದೇ ಅಭಿಷೇಕ್‌ ಕೂಡ ಅಲ್ಲಗಳೆದಿದ್ದರು. ಆದರೆ ಇದೀಗ ಅಂಬರೀಶ್ ಕುಟುಂಬದ ಆಪ್ತರ ಪ್ರಕಾರ, ಡಿಸೆಂಬರ್‌ನಲ್ಲಿ ಅಂಬರೀಷ್‌ ಎಂಗೇಜ್‌ ಆಗ್ತಿದ್ದಾರೆ ಎನ್ನಲಾಗಿದೆ. 
 

1 /7

ಅಂಬರೀಶ್ ಕುಟುಂಬದ ಆಪ್ತರು ಹೇಳುವ ಪ್ರಕಾರ, ಡಿಸೆಂಬರ್ 11 ರಂದು ಅಭಿಷೇಕ್ ಅವರ ನಿಶ್ಚಿತಾರ್ಥ ನಡೆಯಲಿದೆ ಅಂತೆ.   

2 /7

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿಯ ಜೊತೆ ಅಭಿಷೇಕ್‌ ಅವರ ನಿಶ್ಚಿತಾರ್ಥ ನಡೆಯಲಿದೆ ಅಂತೆ.   

3 /7

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಹಾಗೂ ಜುಡಿತ್ ಅವರ ಪುತ್ರಿ ಅವಿವ ಜತೆ ಅಭಿಷೇಕ್‌ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ.   

4 /7

ಅವಿವ ಬಹು ಬೇಡಿಕೆಯ ಫ್ಯಾಷನ್ ಡಿಸೈನರ್ ಆಗಿದ್ದಾರೆ.   

5 /7

ಮಾಡೆಲ್ ಕೂಡ ಆಗಿರುವ ಅವಿವ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 44 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.   

6 /7

ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಹುದಿನಗಳಿಂದ ಸ್ನೇಹಿತರಾಗಿದ್ದರು ಎನ್ನಲಾಗಿದೆ.  

7 /7

ಆದರೆ ಇಬ್ಬರ ನಿಶ್ಚಿತಾರ್ಥದ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.