ಮೊದಲ ಬಾರಿಗೆ 5G ನೆಟ್‌ವರ್ಕ್‌ನ ನ್ಯೂನತೆಗಳು ಕೂಡಾ ಬಹಿರಂಗವಾಗಿದೆ. ಅಮೆರಿಕದಲ್ಲಿ 5 G ನೆಟ್‌ವರ್ಕ್ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ, ಅನೇಕ ಬಳಕೆದಾರರು ಮೊಬೈಲ್‌ನ ಬ್ಯಾಟರಿ ಬಹಳ ಬೇಗನೆ ಖಾಲಿಯಾಗುತ್ತಿರುವ ಬಗ್ಗೆ ದೂರಿದ್ದಾರೆ.
ನವದೆಹಲಿ : 5G ನೆಟ್‌ವರ್ಕ್ ಗಾಗಿ ಭಾರತದಲ್ಲಿ ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಹೊಸ ಸೆಲ್ಯುಲಾರ್ ನೆಟ್‌ವರ್ಕ್‌ನ ಪ್ರಯೋಜನಗಳನ್ನು ಎಲ್ಲಾ ದಿಕ್ಕಿನಲ್ಲಿಯೂ ಸಾರಿ ಹೇಳಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿಗೆ 5G ನೆಟ್‌ವರ್ಕ್‌ನ ನ್ಯೂನತೆಗಳು ಕೂಡಾ ಬಹಿರಂಗವಾಗಿದೆ. 5G ನೆಟ್‌ವರ್ಕ್‌ಗೆ ಸಂಬಂಧಿಸಿದ ಕೆಲವು ಮಾರ್ಗಸೂಚಿಗಳನ್ನು ವಿದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. (Photo: Freepik)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಐಎಎನ್‌ಎಸ್‌ನ ಸುದ್ದಿಯ ಪ್ರಕಾರ, ಮೊಬೈಲ್ ಬ್ಯಾಟರಿಗೆ 5 ಜಿ ನೆಟ್‌ವರ್ಕ್ ಒಳ್ಳೆಯದಲ್ಲ. 5 ಜಿ ನೆಟ್‌ವರ್ಕ್ ಕಾರಣ, ಮೊಬೈಲ್ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಇತ್ತೀಚೆಗೆ ಯುಎಸ್ ಸೆಲ್ಯುಲಾರ್ ಕಂಪನಿ Verizon ತಮ್ಮ ಮೊಬೈಲ್‌ನಲ್ಲಿ 5 ಜಿ ನೆಟ್‌ವರ್ಕ್ ಅನ್ನು ಆಫ್ ಮಾಡುವಂತೆ ಗ್ರಾಹಕರಲ್ಲಿ ಕೇಳಿಕೊಂಡಿದೆ. ಮೊಬೈಲ್ ಬ್ಯಾಟರಿಯನ್ನು ಉಳಿಸುವ ಏಕೈಕ ಮಾರ್ಗವೆಂದರೆ, ಫೋನ್ ಅನ್ನು LTE ಅಥವಾ 4G ನೆಟ್ ವರ್ಕ್ ನಲ್ಲಿ ಇಡುವುದು ಎಂದು ಕಂಪನಿ ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ತಿಳಿಸಿದೆ.
ಅಮೆರಿಕದಲ್ಲಿ 5 G ನೆಟ್‌ವರ್ಕ್ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ, ಅನೇಕ ಬಳಕೆದಾರರು ಮೊಬೈಲ್‌ನ ಬ್ಯಾಟರಿ ಬಹಳ ಬೇಗನೆ ಖಾಲಿಯಾಗುತ್ತಿರುವ ಬಗ್ಗೆ ದೂರಿದ್ದಾರೆ. 5 G ನೆಟ್‌ವರ್ಕ್‌ಗಳನ್ನು ಬಳಸುತ್ತಿರುವುದರಿಂದ ಮೊಬೈಲ್‌ಗಳನ್ನು ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ ಎನ್ನುವುದು ಗ್ರಾಹಕರ ದೂರು.
ಭಾರತದಲ್ಲಿ 5G ನೆಟ್‌ವರ್ಕ್ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿದೆ. ಆದರೆ, 5G ನೆಟ್‌ವರ್ಕ್ ಮೊದಲು ಕೆಲವು ನಗರಗಳಲ್ಲಿ ಪ್ರಾರಂಭವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನಂತರ ಕ್ರಮೇಣ ದೇಶಾದ್ಯಂತ ವಿಸ್ತರಿಸಲಾಗುವುದು.
5G ನೆಟ್‌ವರ್ಕ್ ಪ್ರಸ್ತುತ 4G ನೆಟ್‌ವರ್ಕ್‌ಗಿಂತ ಹಲವು ಪಟ್ಟು ವೇಗವಾಗಿರುತ್ತದೆ. ಡೇಟಾ ವರ್ಗಾವಣೆ 10 ಪಟ್ಟುವಿನಿಂದ 100 ಪಟ್ಟು ವೇಗವಾಗಿರುತ್ತದೆ.
5G ನೆಟ್‌ವರ್ಕ್ ಬಂದ ಮೇಲೆ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವೀಡಿಯೊವನ್ನು ಯೂಟ್ಯೂಬ್ ಅಥವಾ ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡಬಹುದಾಗಿದೆ. ಈ ಪ್ಲ್ಯಾಟ್‌ಫಾರ್ಮ್‌ಗಳಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಇದೀಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.