ಐಷಾರಾಮಿ ಬೆಡ್ ಕಂಪನಿ ಕ್ರಾಫ್ಟೆಡ್ ಬೆಡ್ಸ್ ಹಾಸಿಗೆಯ ಮೇಲೆ ಮಲಗುವುದಕ್ಕಾಗಿಯೇ ವೇತನ ನೀಡುತ್ತದೆ. ಅದು ಕೂಡಾ ಕಡಿಮೆ ವೇತನ ಅಲ್ಲ ಬರೋಬ್ಬರಿ 25 ಲಕ್ಷ ರೂಪಾಯಿಗಳವರೆಗೆ ವೇತನ ನೀಡುತ್ತದೆ.
ನವದೆಹಲಿ : ಪ್ರತಿಯೊಬ್ಬರೂ ಆರಾಮದಾಯಕವಾದ ಉದ್ಯೋಗವನ್ನು ಹೊಂದಲು ಬಯಸುತ್ತಾರೆ. ಕೆಲಸ ಆರಾಮವಾಗಿರಬೇಕು ಪ್ರತಿ ತಿಂಗಳು ಖಾತೆಗೆ 6 ಅಂಕಿಯ ಬೃಹತ್ ಮೊತ್ತ ಕ್ರೆಡಿಟ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಬರೀ ಆರಾಮ ಮಾಡುವುದಕ್ಕೂ ಕೈ ತುಂಬಾ ವೇತನ ನೀಡುವ ಕಂಪನಿಗಳು ನಿಜಕ್ಕೂ ಇವೆ. ಹೌದು, ಯುಕೆ ನ ಐಷಾರಾಮಿ ಬೆಡ್ ಕಂಪನಿ ಕ್ರಾಫ್ಟೆಡ್ ಬೆಡ್ಸ್ (Crafted Beds) ಹಾಸಿಗೆಯ ಮೇಲೆ ಮಲಗುವುದಕ್ಕಾಗಿಯೇ ವೇತನ ನೀಡುತ್ತದೆ. ಅದು ಕೂಡಾ ಕಡಿಮೆ ವೇತನ ಅಲ್ಲ ಬರೋಬ್ಬರಿ 25 ಲಕ್ಷ ರೂಪಾಯಿಗಳವರೆಗೆ ವೇತನ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಈ ಕೆಲಸವನ್ನು ಮಾಡುವ ವ್ಯಕ್ತಿಯು ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ಹಾಸಿಗೆಯಲ್ಲಿ ಕಳೆಯಬೇಕಾಗುತ್ತದೆ. ಮ್ಯಾಟ್ರೆಸ್ ಟೆಸ್ಟರ್ ಅನ್ನು ಕ್ರಾಫ್ಟೆಡ್ ಬೆಡ್ಸ್ ನೇಮಕ ಮಾಡುತ್ತಿದೆ. ಇಲ್ಲಿ ಕೆಲಸಕ್ಕೆ ನೇಮಕವಾದವರು ಹಾಸಿಗೆಯ ಮೇಲೆ ಮಲಗಿ ಪರಿಶೀಲನೆ ಮಾಡಬೇಕಾಗುತ್ತದೆ.
ಪ್ರಪಂಚದಾದ್ಯಂತ ಅನೇಕ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಕ್ಲಿನಿಕಲ್ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಲು ಉದ್ಯೋಗಗಳನ್ನು ನೀಡುತ್ತವೆ. ಭಾಗವಹಿಸುವವರಿಗೆ ಹಾಸಿಗೆಯ ಮೇಲೆ ಮಲಗಲು ಸಂಬಳ ನೀಡಲಾಗುತ್ತದೆ. ಕೆರಿಯರ್ ಅಡಿಕ್ಟ್ ವರದಿಯ ಪ್ರಕಾರ, ಕಂಪನಿಗಳು ಈ ಕೆಲಸಕ್ಕಾಗಿ 100 ಡಾಲರ್ ನಿಂದ 3000 ಡಾಲರ್ ವರೆಗೆ ಅಂದರೆ 7500 ರಿಂದ 2.5 ಲಕ್ಷ ದವರೆಗೆ ವೇತನ ನೀಡುತ್ತವೆ.
ಇಂಟಿರಿಯರ್ ಸ್ಪೆಷಲಿಸ್ಟ್ ಕಂಪನಿ ನಿಯಮಿತವಾಗಿ ಸ್ಲೀಪ್ ಎಕ್ಸಿಕ್ಯುಟಿವ್ ಹುದ್ದೆಗಳಿಗಾಗಿ ನೇಮಕ ಮಾಡುತ್ತಿರುತ್ತವೆ. ಈ ಕೆಲಸಕ್ಕಾಗಿ, ಅಭ್ಯರ್ಥಿಯು ದಿನಕ್ಕೆ 10500 ರೂ.ಗಳ ವೇತನವನ್ನು ಪಡೆಯಬಹುದು.
ಬೇರೆ ಬೇರೆ ಉದ್ಯೋಗಗಳು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶಕ್ಕಾಗಿ ಅಧ್ಯಯನ ಆರಂಭಿಸಲಾಗಿದೆ. ಈ ಅಧ್ಯಯನದಲ್ಲಿ ಪಾಲ್ಗೊಳ್ಳಲು ತಿಂಗಳಿಗೆ ಸರಾಸರಿ ವೇತನವನ್ನು 1.5 ಲಕ್ಷದವರೆಗೆ ನೀಡಲಾಗುತ್ತದೆ.
ಇದನ್ನು ವಿಶ್ವದ ಅತ್ಯಂತ ಆರಾಮದಾಯಕ ಕೆಲಸ ಎಂದೂ ಕರೆಯಬಹುದು. ಕೆರಿಯರ್ ಅಡಿಕ್ಟ್ ವರದಿಯ ಪ್ರಕಾರ, ಚೀನೀ ಸಂಸ್ಥೆಯು ನಾವೋ ಬೈಜಿನ್ ವೃತ್ತಿಪರ ಸ್ಲೀಪರ್ಸ್ ಆಗಲು ಅರ್ಜಿದಾರರಿಗೆ ವಾರ್ಷಿಕವಾಗಿ 15 ಲಕ್ಷ ರೂ. ಪಾವತಿಸುತ್ತದೆ.