ಈ ರಾಶಿಯಲ್ಲಿ ಧನರಾಜ ಯೋಗ ! ಹಣದ ಹೊಳೆ ಹರಿಸುವಳು ಧನಲಕ್ಷ್ಮೀ

Dhana rajayoga effect :ಜ್ಯೋತಿಷ್ಯದಲ್ಲಿ ಧನ ರಾಜಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗುತ್ತದೆ. ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣದಿಂದ 2 ರಾಜಯೋಗ ನಿರ್ಮಾಣವಾಗುತ್ತಿದೆ. ಅವುಗಳೆಂದರೆ ಧನ ರಾಜಯೋಗ ಮತ್ತು ಭದ್ರ ರಾಜಯೋಗ.  

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್‌ನಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಲಿವೆ. ಅಕ್ಟೋಬರ್ 1 ರಂದು, ವ್ಯಾಪಾರ ಮತ್ತು ಬುದ್ಧಿವಂತಿಕೆಯ  ಅಂಶವಾದ ಬುಧ ಗ್ರಹ ಕನ್ಯಾರಾಶಿಗೆ ಪ್ರವೇಶಿಸಲಿದೆ. ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣದಿಂದಾಗಿ ಸೂರ್ಯನೊಂದಿಗೆ ಬುಧ ಸಂಯೋಗ ಏರ್ಪಟ್ಟು ಧನ ರಾಜ ಯೋಗ ರೂಪುಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಗ್ರಹಗಳ ರಾಶಿ ಬದಲಾವಣೆಯಿಂದ ಅಥವಾ ಸಂಯೋಗದಿಂದ ಕೆಲವು ಈ ರಾಜಯೋಗಗಳು ನಿರ್ಮಾಣವಾಗುತ್ತವೆ. ಇವು ಕೆಲವು ರಾಶಿಯವರ  ಅದೃಷ್ಟವನ್ನು ಸುಧಾರಿಸುತ್ತದೆ. ಅಕ್ಟೋಬರ್ ಒಂದರಂದು  ರೂಪುಗೊಳ್ಳುವ ಎರಡು ರಾಜಯೋಗದಿಂದ ಯಾರಿಗೆ ಲಾಭ ನೋಡೋಣ. 

2 /5

ವೃಷಭ ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಎರಡೂ ರಾಜಯೋಗಗಳು ವೃಷಭ ರಾಶಿಯವರಿಗೆ ಮಂಗಳಕರವಾಗಿರಲಿದೆ. ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸಂಪತ್ತಿನ ಯೋಗವೂ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭ ಉಂಟಾಗುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ವೃಷಭ ರಾಶಿಯ ಜನರು ಈ ಅವಧಿಯಲ್ಲಿ ಸಾಕಷ್ಟು ಹಣ ಮತ್ತು ಸಂಪತ್ತನ್ನು ಪಡೆಯುತ್ತಾರೆ. 

3 /5

ಸಿಂಹ ರಾಶಿ :ಲಕ್ಷ್ಮಿ ದೇವಿಯ ಕೃಪೆಯಿಂದ ಸಂಪತ್ತನ್ನು ಪಡೆಯುವಿರಿ. ಧನ ರಾಜಯೋಗವು ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದೇ ಸಮಯದಲ್ಲಿ, ತಮ್ಮ ಸ್ವಂತ ವ್ಯವಹಾರವನ್ನು ನಡೆಸುವವರು ಈ ಅವಧಿಯಲ್ಲಿ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಪಡೆಯುತ್ತಾರೆ.  ಲಾಟರಿ ಗೆಲ್ಲುವ ಸಾಧ್ಯತೆ ಇದೆ. 

4 /5

ತುಲಾ ರಾಶಿ :ಅಕ್ಟೋಬರ್ ತಿಂಗಳು ತುಲಾ ರಾಶಿಯವರಿಗೆ ಬಹಳಷ್ಟು ಶುಭ ಫಲಗಳನ್ನು ತರುತ್ತಿದೆ. ಈ ಅವಧಿಯಲ್ಲಿ, ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವಾಗುವುದು. ಆರ್ಥಿಕ ಲಾಭವಾಗುವುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸರ್ಕಾರಿ ಉದ್ಯೋಗದ ಆಫರ್ ಬರಬಹುದು. 

5 /5

ಧನು ರಾಶಿ :ಈ ಎರಡು ರಾಜಯೋಗ ಧನು ರಾಶಿಯವರ ಅದೃಷ್ಟವನ್ನು ಉಜ್ವಲಗೊಳಿಸಲಿದೆ. ಉದ್ಯೋಗದಲ್ಲಿ ಬಡ್ತಿಯ ಜೊತೆಗೆ ಸಂಬಳವೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ಧನು ರಾಶಿಯವರಿಗೆ ಎರಡು ದೊಡ್ಡ ರಾಜಯೋಗಗಳು ಮಂಗಳಕರವೆಂದು  ಸಾಬೀತಾಗಲಿದೆ.