Virendra Sehwag: ಟೆಸ್ಟ್ ಕ್ರಿಕೆಟ್ ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈಗಾಗಲೇ ಎರಡು ಸರಣಿ ನಡೆದಿದ್ದು, ಅದರಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಾರ್ಚ್ 1 ರಿಂದ ಇಂದೋರ್’ನಲ್ಲಿ ನಡೆಯುತ್ತಿದೆ. ಇವೆಲ್ಲದರ ಹೊರತಾಗಿ ಟೆಸ್ಟ್ ಕ್ರಿಕೆಟ್’ನಲ್ಲಿ ಯಾರೂ ಮಾಡಲಾಗದ ದಾಖಲೆಯೊಂದನ್ನು ಟೀಂ ಇಂಡಿಯಾದ ಅನುಭವಿ ಒಬ್ಬರು ಮಾಡಿದ್ದಾರೆ. ಅವರು ಯಾರೆಂದು ತಿಳಿದಿದೆಯೇ?
ಟೆಸ್ಟ್ ಕ್ರಿಕೆಟ್ ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈಗಾಗಲೇ ಎರಡು ಸರಣಿ ನಡೆದಿದ್ದು, ಅದರಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಾರ್ಚ್ 1 ರಿಂದ ಇಂದೋರ್’ನಲ್ಲಿ ನಡೆಯುತ್ತಿದೆ. ಇವೆಲ್ಲದರ ಹೊರತಾಗಿ ಟೆಸ್ಟ್ ಕ್ರಿಕೆಟ್’ನಲ್ಲಿ ಯಾರೂ ಮಾಡಲಾಗದ ದಾಖಲೆಯೊಂದನ್ನು ಟೀಂ ಇಂಡಿಯಾದ ಅನುಭವಿ ಒಬ್ಬರು ಮಾಡಿದ್ದಾರೆ. ಅವರು ಯಾರೆಂದು ತಿಳಿದಿದೆಯೇ?
ಟೆಸ್ಟ್ ಕ್ರಿಕೆಟ್’ನಲ್ಲಿ ವಿರೇಂದ್ರ ಸೆಹ್ವಾಗ್ , ಇದ್ದಾರೆ ಅಂದ್ರೆ ಅಲ್ಲಿ ಅಬ್ಬರ ಫಿಕ್ಸ್. ಈ ಅನುಭವಿ ಆಟಗಾರ ಒಂದಲ್ಲ ಎರಡು ಬಾರಿ ತ್ರಿಶತಕ ಬಾರಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೆಸ್ಟ್’ನಲ್ಲಿ ಟ್ರಿಪಲ್ ಶತಕವನ್ನು ಗಳಿಸಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಬಿರುದು ಅವರಿಗಿದೆ.
2004ರಲ್ಲಿ ಮುಲ್ತಾನ್ ಮೈದಾನದಲ್ಲಿ 309 ರನ್ ಗಳಿಸಿದ್ದರು. 4 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧವೂ ತ್ರಿಶತಕ ಬಾರಿಸಿದ್ದರು.
ಸ್ಫೋಟಕ ಬ್ಯಾಟಿಂಗ್ ಎಂದರೆ ಅದು ವೀರೆಂದ್ರ ಸೆಹ್ವಾಗ್. ಇವರಿಗೆ 2009 ರಲ್ಲಿ ದೊಡ್ಡ ಅವಕಾಶವೊಂದು ಸಿಕ್ಕಿತು. ಅದೇನೆಂದರೆ ಟೆಸ್ಟ್’ನಲ್ಲಿ ಅತಿ ಹೆಚ್ಚು ಟ್ರಿಪಲ್ ಶತಕಗಳನ್ನು ಗಳಿಸುವ ವಿಷಯದಲ್ಲಿ ಬ್ರಾಡ್ಮನ್ರನ್ನು ಮೀರಿಸಬಹುದಿತ್ತು.
ಡಾನ್ ಬ್ರಾಡ್ಮನ್ ಎರಡು ಬಾರಿ ತ್ರಿಶತಕಗಳನ್ನು ಗಳಿಸಿದ್ದಾರೆ. 2009ರಲ್ಲಿ ಶ್ರೀಲಂಕಾ ವಿರುದ್ಧ ಸೆಹ್ವಾಗ್ಗೆ ದೊಡ್ಡ ಅವಕಾಶ ಸಿಕ್ಕಿತ್ತು. ಅವರು ಬ್ರಬೋರ್ನ್ ಮೈದಾನದಲ್ಲಿ 293 ರನ್ ಗಳಿಸಿದರು. ಆದರೆ ಈ ಮಧ್ಯೆ ಅವರು ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ತಮ್ಮ ವಿಕೆಟ್ ಕಳೆದುಕೊಂಡರು.ಅಂದು ಸೆಹ್ವಾಗ್ ಸಂಯಮದಿಂದ ಆಡಿದ್ದರೆ ಕೇವಲ 7 ರನ್ ಗಳಿಸಿ ಮೂರನೇ ತ್ರಿಶತಕ ಪೂರೈಸಬಹುದಿತ್ತು.
ಸೆಹ್ವಾಗ್ ಅವರು ಪಾಕಿಸ್ತಾನದ ವಿರುದ್ಧ ಅತೀ ಹೆಚ್ಚು ಬಾರಿ ಅಬ್ಬರಿಸಿದ್ದಾರೆ. ಒಮ್ಮೆ ತ್ರಿಶತಕ, ಎರಡು ಬಾರಿ ದ್ವಿಶತಕ ಗಳಿಸಿದ್ದಾರೆ. 2005 ರಲ್ಲಿ ಮೊಹಾಲಿ ಮೈದಾನದಲ್ಲಿ 173 ರನ್ ಗಳಿಸಿ ಔಟಾದರು. ಇನ್ನು ಸ್ವಲ್ಪ ಉಳಿದಿದ್ದರೆ ಪಾಕಿಸ್ತಾನದ ವಿರುದ್ಧ ಮತ್ತೊಂದು ದ್ವಿಶತಕ ಸಿಡಿಸುತ್ತಿದ್ದರು.
ಸೆಹ್ವಾಗ್ ತಮ್ಮ ವೃತ್ತಿಜೀವನದಲ್ಲಿ 104 ಟೆಸ್ಟ್, 251 ODI ಮತ್ತು 19 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 23 ಶತಕಗಳು ಸೇರಿವೆ. ಸೆಹ್ವಾಗ್ 49.34 ಸರಾಸರಿಯಲ್ಲಿ ಒಟ್ಟು 8586 ರನ್ ಗಳಿಸಿದ್ದಾರೆ. ಅವರು ಏಕದಿನದಲ್ಲಿ 8273 ರನ್ ಗಳಿಸಿದ್ದಾರೆ. T20 ಅಂತರಾಷ್ಟ್ರೀಯ ವೃತ್ತಿಜೀವನದ 18 ಇನ್ನಿಂಗ್ಸ್ಗಳಲ್ಲಿ, ಅವರು 2 ಅರ್ಧಶತಕಗಳನ್ನು ಗಳಿಸುವ ಮೂಲಕ ಒಟ್ಟು 394 ರನ್ಗಳನ್ನು ಗಳಿಸಿದರು.