ಬೆಂಗಳೂರು: ಇತ್ತ ಬ್ರಿಟನ್ ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ನೇಮಕವಾಗುತ್ತಿದ್ದಂತೆ ಒಂದೆಡೆ ಅವರಿಗೆ ಭಾರತೀಯರಿಂದ ಪ್ರಶಂಸೆಯ ಸುರುಮಳೆ ಹರಿದು ಬರಿತ್ತಿದ್ದರೆ ಇನ್ನೊಂದೆಡೆಗೆ ಈಗ ಅವರ ಮೂಲದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಈಗ ವಾಟ್ಸಪ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ರಿಷಿ ಸುನಕ್ ಮೂಲದ ಕುರಿತಾದ ಸ್ವಾರಸ್ಯಕರ ಮೆಸೇಜ್ ವೊಂದನ್ನು ಹರಿದಾಡುತ್ತಿದೆ. ಹಾಗಿದ್ದಲ್ಲಿ ಈ ಮೆಸೇಜ್ ನಲ್ಲ್ಲಿ ಏನಿದೆ ಎನ್ನುವುದನ್ನು ಈ ಕೆಳಗೆ ಓದಿ...
ರಿಷಿ ಸುನಕ್ ಯಾವೂರು?
ಇವರ ಅಜ್ಜ ಪಂಜಾಬಿ, ಹಿಂಗಾಗಿ ಪಂಜಾಬ ನವರು ಖುಷ್.
ಆ ಅಜ್ಜ ಹುಟ್ಟಿದ ಊರು ಗುಜ್ರನವಾಲಾ ಈಗಿನ ಪಾಕಿಸ್ತಾನ ದಲ್ಲಿದೆ ಹಿಂಗಾಗಿ ಪಾಕಿಸ್ತಾನಿಗಳು ಖುಷ್.
ಇವರ ಅಜ್ಜಿ ದೆಹಲಿಯವರು, ಹಿಂಗಾಗಿ ದಿಲ್ಲಿ ಮಂದಿ ಖುಷ್.
ಇವರ ಅಪ್ಪ ಹುಟ್ಟಿದ್ದು ಕಿನ್ಯಾದಲ್ಲಿ, ಹಿಂಗಾಗಿ ಕೀನ್ಯಾ ಮಂದಿ ಖುಷ್.
ಇವರ ಅವ್ವ ಹುಟ್ಟಿದ್ದು ತಾಂಜಾನಿಯ ದಲ್ಲಿ, ಹಿಂಗಾಗಿ ಅಲ್ಲಿ ಮಂದಿ ಖುಷ್.
ಇವರ ಹೆಂಡತಿ ಹುಟ್ಟಿದ್ದು ಹುಬ್ಬಳ್ಳಿ. ಹಿಂಗಾಗಿ ಹುಬ್ಬಳ್ಳಿ ಧಾರವಾಡ ಮಂದಿ ಖುಷ್.
ಇವರ ಮಾವನ ಹುಟ್ಟೂರು ಶಿಡ್ಲಘಟ್ಟ, ಹಿಂಗಾಗಿ ಚಿಕ್ಕಬಳ್ಳಾಪುರ ಮಂದಿ ಖುಷ್. ಅದು ಮೊದಲು ಕೋಲಾರದಾಗ ಇತ್ತು ಅಂತ ಕೋಲಾರ ಮಂದಿ ಖುಷ್.
ಇವರ ಅತ್ತೆ ಹುಟ್ಟಿದ್ದು ಶಿಗ್ಗಾವಿ, ಹಿಂಗಾಗಿ ಹಾವೇರಿ ಮಂದಿ ಖುಷ್. ಆ ಅತ್ತೆ ತವರಮನಿ ಸಾವಳಗಿ ಹಿಂಗಾಗಿ ಜಮಖಂಡಿ ವಿಜಾಪುರ ಮಂದಿ ಖುಷ್.
ಮತ್ತೆಲ್ಲೆಲ್ಲಿ ನಂಟಸ್ತಿಕೆ ಅದ ಗೊತ್ತಿಲ್ಲ.
ಫಿರ್ ಭಿ ದಿಲ್ ಹೈ ಹಿಂದೂಸ್ಥಾನಿ
ಅಂಧ್ಹಂಗ
ಇವರು ಹುಟ್ಟಿದ್ದು ಸೌಥ್ಯಾಂಪ್ಟನ್.
ಅಲ್ಲಿನ್ ಸುದ್ದಿ ಗೊತ್ತಿಲ್ಲ
👇👇👇
ಅದಕ್ಕೇನಾ ರಿಶಿ ಮೂಲ ಹುಡುಕಕೂಡದು ಅನ್ನೋದು ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.