Omicron BF.7 detected: ಚೀನಾದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳ ಉಲ್ಬಣದ ನಡುವೆ ಭಾರತದಲ್ಲಿಯೂ ಸಹ Omicron ಸಬ್ವೇರಿಯಂಟ್ BF.7 ನ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಗುಜರಾತ್ನಲ್ಲಿ ಇಬ್ಬರಲ್ಲಿ ಕೊರೊನಾ ವೇರಿಯಂಟ್ ಪತ್ತೆಯಾಗಿದ್ದರೆ, ಒಡಿಶಾದಲ್ಲಿ ಒಂದು ಪ್ರಕರಣ ದಾಖಲಾಗಿದೆ. Omicron BF.7 ನ ಎರಡು ಹೊಸ ಪ್ರಕರಣಗಳು ಗುಜರಾತ್ನ ವಡೋದರಾ ಮತ್ತು ಅಹಮದಾಬಾದ್ನಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ: 'ಕೊರೊನಾ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಬೂಸ್ಟರ್ ಡೋಸ್ ಪಡೆಯಿರಿ'
ವಡೋದರದ ಸಭಾನ್ಪುರ ಪ್ರದೇಶದಲ್ಲಿ ವಾಸಿಸುತ್ತಿರುವ 61 ವರ್ಷದ ಎನ್ಆರ್ಐ ಮಹಿಳೆಯೊಬ್ಬರಲ್ಲಿ ಕೋವಿಡ್-19 ರ BF.7 ರೂಪಾಂತರ ಕಾಣಿಸಿಕೊಂಡಿದೆ.
ವಡೋದರಾ ಮುನ್ಸಿಪಲ್ ಕಮಿಷನರ್ ಬಾಂಚನಿಧಿ ಪಾನಿ ಪ್ರಕಾರ, ಎನ್ಆರ್ಐ ಮಹಿಳೆ ನವೆಂಬರ್ನಲ್ಲಿ ಯುನೈಟೆಡ್ ಸ್ಟೇಟ್ಸ್ನಿಂದ ವಡೋದರಾಕ್ಕೆ ಆಗಮಿಸಿದ್ದು, ಒಂದು ವಾರದ ನಂತರ ಕೋವಿಡ್ -19 ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಸಿಟಿವ್ ವರದಿ ಬಂದಿದೆ.
ಈ ವೇಳೆ ಮಹಿಳೆಯ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿದ್ದು, BF.7 ರೂಪಾಂತರ ಎಂದು ದೃಢಪಟ್ಟಿದೆ.
"Omicron BF.7 ಮತ್ತು BF 12 ವೇರಿಯಂಟ್ಗಳ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ" ಎಂದು ಗುಜರಾತ್ನ ಆರೋಗ್ಯ ಇಲಾಖೆ ತಿಳಿಸಿದೆ.
ಭಾರತದಲ್ಲಿ BF.7 ನ ಮೊದಲ ಪ್ರಕರಣ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಅಕ್ಟೋಬರ್ನಲ್ಲಿ ಪತ್ತೆಯಾಗಿದೆ. ಇಲ್ಲಿಯವರೆಗೆ, ಗುಜರಾತ್ನಲ್ಲಿ ಎರಡು ಮತ್ತು ಒಡಿಶಾದಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಅವರು ಹೇಳಿದರು.
BF.7 ಓಮಿಕ್ರಾನ್ ರೂಪಾಂತರದ BA.5 ನ ಉಪ-ವಂಶವಾಗಿದೆ. ಇದು ಪ್ರಬಲವಾದ ಸೋಂಕಿನ ಸಾಮರ್ಥ್ಯವನ್ನು ಹೊಂದಿದೆ ಶೀಘ್ರವಾಗಿ ಹೆಚ್ಚು ಹರಡುತ್ತದೆ. ಲಸಿಕೆ ಹಾಕಿದವರಿಗೂ ಮರುಸೋಂಕನ್ನು ಉಂಟುಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ತಡೆಯಲು ಬಿಜೆಪಿ ಕೋವಿಡ್ ಕಾರಣ ಹೇಳುತ್ತಿದೆ: ಡಿ ಕೆ ಶಿವಕುಮಾರ್
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ತಜ್ಞರು ಮಾತನಾಡಿ, “ಸದ್ಯಕ್ಕೆ ಕೋವಿಡ್ ಕೇಸ್ಲೋಡ್ನಲ್ಲಿ ಒಟ್ಟಾರೆ ಯಾವುದೇ ಹೆಚ್ಚಳವಿಲ್ಲವಾದರೂ, ಅಸ್ತಿತ್ವದಲ್ಲಿರುವ ಮತ್ತು ಕಂಡುಬರುತ್ತಿರುವ ರೂಪಾಂತರಗಳ ಜಾಡನ್ನು ನಿಯಂತ್ರಿಸಲು ನಿರಂತರ ಮುನ್ನೆಚ್ಚರಿಕೆ ಅಗತ್ಯವಿದೆ” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.