ನವದೆಹಲಿ: ಎಲ್ಲರೂ ಸಸ್ಯಾಹಾರಿಯಾಗಬೇಕೆಂದು ನಾವು ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಮಾಂಸ ರಫ್ತು ನಿಷೇಧವನ್ನು ಕೋರಿ ಹೆಲ್ದಿ ವೆಲ್ದಿ ಎಥಿಕಲ್ ವರ್ಲ್ಡ್ ಮತ್ತು ಗೈಡ್ ಇಂಡಿಯಾ ಟ್ರಸ್ಟ್ ಎನ್ನುವ ಎರಡು ಎನ್ಜಿಓಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರನ್ನು ಒಳಗೊಂಡ ಏಕನ್ಯಾಯಾಧೀಶರ ಪೀಠವು "ಈ ದೇಶದಲ್ಲಿ ಪ್ರತಿಯೊಬ್ಬರೂ ಸಸ್ಯಾಹಾರಿಗಳಾಗಲು ಬಯಸುತ್ತೀರಾ? ಎಂದು ಪ್ರಶ್ನಿಸಿದರು.
Petition against export of meat. SC Judge Madan B Lokur: “Do you want everybody in this country to be vegetarian?...We can’t issue an order that everyone should be vegetarian.” Court adjourns matter to February next year. @IndianExpress
— Ananthakrishnan G (@axidentaljourno) October 12, 2018
ನ್ಯಾಯಮೂರ್ತಿ ಲೋಕೂರ್ ಅವರು ತಿಳಿಸುತ್ತಾ "ಪ್ರತಿಯೊಬ್ಬರೂ ಸಸ್ಯಾಹಾರಿಗಳಾಗಿ ಎಂದು ನಾವು ಆದೇಶ ನೀಡಲು ಸಾಧ್ಯವಿಲ್ಲ" ಎಂದು ಹೇಳಿದರು. ಮುಂದಿನ ವಿಚಾರಣೆಯನ್ನು ಫೆಬ್ರುವರಿ ತಿಂಗಳಕ್ಕೆ ಮುಂದೂಡಿದೆ.
ಕಳೆದ ವರ್ಷ,ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಾಣಿಗಳನ್ನು ಹತ್ಯೆಗಾಗಿ ಮಾರಾಟ ಮಾಡುವ ಮತ್ತು ಖರೀದಿಸುವುದನ್ನು ನಿಷೇಧಿಸಿತು. ಅಲ್ಲದೆ ಹಸುಗಳನ್ನು ಒಳಗೊಂಡಂತೆ ಹತ್ಯೆಗೋಸ್ಕರ ಜಾನುವಾರುಗಳ ಮಾರಾಟವನ್ನು ಕೇಂದ್ರ ಸರ್ಕಾರವು ನಿಷೇಧಿಸಿತು ಆದರೆ ಈ ಕೇಂದ್ರ ಸರ್ಕಾರದ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆಯೋಡ್ಡಿತ್ತು.