New Year Celebration Guidelines : 2025 ವರ್ಷಚಾರಣೆಗೆ ಸಿಲಿಕಾನ್ ಸಿಟಿ ಫುಲ್ ರೆಡಿಯಾಗಿ ನಿಂತಿದೆ. ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು ಬೀಳಲಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂದಾಗಿರುವ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಬಿಬಿಎಂಪಿ ಗೈಡ್ ಲೈನ್ ಸಿದ್ಧಪಡಿಸಿದೆ. ಈ ಎಲ್ಲಾ ನಿಯಮಗಳು ಡಿಸೆಂಬರ್ 31ರ ರಾತ್ರಿಯಿಂದಲೇ ಅನ್ವಯವಾಗಲಿದೆ.
ಏನಿದೆ ಹೊಸ ವರ್ಷ ಸಂಭ್ರಮಾಚರಣೆ ಮಾರ್ಗ ಸೂಚಿಯಲ್ಲಿ :
೧. ರಾತ್ರಿ 2 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು
೨.ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಹಲವು ಕಡೆ ಆಚರಣೆಗೆ ಅನುಮತಿ
೩. ರಾತ್ರಿ 9 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್ ಗಳು ಬಂದ್
೪.ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು ಸಿಸಿ ಕ್ಯಾಮರ ಅಳವಡಿಕೆ
೫.ರಾತ್ರಿ 7 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್
೬.ಸೆಲೆಬ್ರೇಷನ್ ಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ
೭.ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಮಹಿಳಾ ಪೊಲೀಸರ ನಿಯೋಜನೆ
೮.ಬಾರ್, ಪಬ್ ಗಳಿಗೂ ರಾತ್ರಿ 2 ಗಂಟೆ ಬಳಿಕ ಬಂದ್ ಗೆ ಸೂಚನೆ
೯.ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ
೧೦.ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಅವರಿಗೆ ಜನವರಿ 2ರವರೆಗೆ ರಜೆ ಬೇಕಂತೆ; ಏಕೆ ಗೊತ್ತಾ?
ಸಂಚಾರ ವ್ಯವಸ್ಥೆ ವಿಸ್ತರಣೆ :
ಬಿಎಂಟಿಸಿಯಿಂದ ರಾತ್ರಿ 2 ಗಂಟೆವರೆಗೆ ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 2 ಗಂಟೆ ತನಕ ನಮ್ಮ ಮೆಟ್ರೋ ಸಂಚಾರ ಕೂಡಾ ಇರಲಿದೆ. ಈ ಬಾರಿ ನ್ಯೂ ಇಯರ್ ಗೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹೆಜ್ಜೆಹೆಜ್ಜೆಗೂ ಸಿಸಿಟಿವಿ ನಿಗಾ :
ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ನ್ಯೂ ಇಯರ್ ಸೆಲಬ್ರೇಷನ್ ಹಿನ್ನೆಲೆಯಲ್ಲಿ ಗಲ್ಲಿಗಲ್ಲಿಯಲ್ಲೂ ನಿಗಾವಹಿಸಲು ಸಹಾಯವಾಗುವ ಹಾಗೆ ಹೈಟೆಕ್ ಸಿಸಿ ಕ್ಯಾಮೆರಾ ಹಾಕಲಾಗಿದೆ. ಆರು ಹೈಟೆಕ್ ಡ್ರೋಣ್ ಗಳು ಹಾರಾಟ ನಡೆಸಲಿವೆ. ಈಗಾಗಲೇ 800 ಹೈಟೆಕ್ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಪಾಲಿಕೆ ಸಿದ್ದತೆ ನಡೆಸಿದೆ. ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಹೆಚ್ಚು ಸಿಸಿಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಎರಡು ವರ್ಷದಿಂದ 250 ರಿಂದ 300 ಸಿಸಿಟಿವಿ ಅಳವಡಿಸುತ್ತಿದ್ದ ಪೊಲೀಸರು ಈ ಬಾರಿ ಎಂಟುನೂರು ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ : ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ: ಖಾಸಗಿ ರೆಸಾರ್ಟ್ಗಳಿಗೆ ಹಲವು ನಿಯಮ ಜಾರಿ
ರಾತ್ರಿ 9 ಗಂಟೆಯಿಂದ ನೈಸ್ ರೋಡ್ ನಲ್ಲಿ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಡಿ.ಜೆ, ಧ್ವನಿ ವರ್ಧಕಗಳಿಗೆ ಅನುಮತಿ ಪಡೆದಿದ್ದರೆ ಮಾತ್ರ ಅವಕಾಶ ನೀಡಲಾಗುವುದು.ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಜೊತೆ ಬಿಬಿಎಂಪಿ ಅಯುಕ್ತರು ಸಭೆ ನಡೆಸಿದ್ದಾರೆ. ನಾಳೆ ರಾತ್ರಿ 9 ಗಂಟೆಯಿಂದ ನಗರದ ಎಲ್ಲಾ ಪ್ಲೈಓವರ್ ಗಳು ಬಂದ್ ಮಾಡಲಾಗುವುದು. ನಗರದ 32 ಪ್ಲೈಓವರ್ ಗಳ ಮೇಲೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗೃತವಾಗಿ ಮೇಲ್ಸೇತ್ತುವೆಗಳನ್ನು ಬಂದ್ ಮಾಡಲಾಗಿದೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ಲೈಓವರ್ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.