ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಮೀಟೂ ಅಭಿಯಾನದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಉದಿತ್ ರಾಜ್ ಸುಳ್ಳು ದೂರಿನಿಂದ ಹರಾಜಾದ ಮಾನವನ್ನು ವಾಪಸ್ ತರಲಿಕ್ಕಾಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಂಸದ ಉದಿತ್ ರಾಜ್ "ಮಹಿಳೆಯ ಲಿಖಿತ ಅಥವಾ ಮೌಖಿಕ ಆಧಾರದ ಮೇಲೆ ಲೈಂಗಿಕ ದೌರ್ಜನ್ಯದ ವಿಚಾರವಾಗಿ ನಿರ್ಧಾರ ತಗೆದುಕೊಂಡಿದ್ದೆ ಆದಲ್ಲಿ ಅಥವಾ ರಾಜೀನಾಮೆ ಕೇಳಿದ್ದೆ ಆದಲ್ಲಿ ಪೋಲಿಸ್ ಅಥವಾ ನ್ಯಾಯಾಂಗ ವ್ಯವಸ್ಥೆ ಅವಶ್ಯಕತೆಯೇ ಇಲ್ಲ .ಒಂದು ವೇಳೆ ಈ ಆರೋಪಗಳು ಸುಳ್ಳು ಎಂದು ಸಾಬೀತು ಆದಲ್ಲಿ ಹರಾಜಾದ ಮಾನವನ್ನು ಮತ್ತೆ ವಾಸ್ಪಸ್ ತರಲಿಕ್ಕೆ ಆಗುತ್ತಾ ಎಂದು ಅವರು ಟ್ವೀಟ್ ಮಾಡಿದ್ದಾರೆ.
यौन उत्पीड़न पीड़िता के मौखिक या लिखित शिकायत को निर्णय मानकर इस्तीफ़ा माँग लेना या सज़ा दे देने का मतलब पुलिस एवं न्यायिक व्यवस्था की आवश्यकता ही नही है और यदि मामला झूठा साबित होता है तो क्या मिट्टी में मिली हुई पुरुष की इज़्ज़त वापस होगी ?#MeToo
— Dr. Udit Raj, MP (@Dr_Uditraj) October 11, 2018
ಈ ಹಿಂದೆ ಮೀಟೂ ಅಭಿಯಾನ ಸುಳ್ಳು ಪ್ರಚಾರ ಎಂದು ಅವರು ಖಂಡಿಸಿದ್ದರು.ದೇಶದಲ್ಲಿ ಈ ಚಳುವಳಿ ಪ್ರಮುಖವಾಗಿ ತನುಶ್ರೀ ದತ್ತಾ ಅವರು ನಾನಾ ಪಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡುವುದರ ಮೂಲಕ ಈ ಚಳುವಳಿ ಈಗ ವ್ಯಾಪಕವಾಗಿ ಹರಡಿದೆ.ಈ ಹಿನ್ನಲೆಯಲ್ಲಿ ಈಗ ಸಚಿವರು ಸುಳ್ಳು ಆರೋಪಗಳ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದಾರೆ.