Belly Fat Reduce Tips: ಒಂದೇ ವಾರದಲ್ಲಿ ಆರೋಗ್ಯಕರವಾಗಿ ಸೊಂಟವನ್ನು ತೆಳ್ಳಗಾಗಿಸಲು ಪರಂಗಿಯನ್ನು ಈ ರೀತಿ ಸೇವಿಸಿ

Belly Fat Reduce Tips: ತೂಕ ಹೆಚ್ಚಾಗುವುದರಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಇಂದಿನಿಂದಲೇ ಪರಂಗಿಹಣ್ಣನ್ನು ತಿನ್ನಲು ಆರಂಭಿಸಿ. ನೀವು ತೂಕ ನಷ್ಟದ ಜೊತೆಗೆ ಬೆಲ್ಲಿ ಫ್ಯಾಟ್ ಕರಗಿಸಲು ಬಯಸಿದರೆ ಪರಂಗಿ ಹಣ್ಣು ನಿಮಗೆ ಸಹಕಾರಿ ಆಗಲಿದ್ದು ಅದನ್ನು ಹೇಗೆ ಸೇವಿಸಬೇಕು ಎಂದು ತಿಳಿಯಲು ಈ ಲೇಖನವನ್ನು ಓದಿ...

Written by - Yashaswini V | Last Updated : Oct 28, 2022, 07:17 AM IST
  • ಪರಂಗಿ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಆದ್ದರಿಂದ, ಇದು ನಿಮ್ಮ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿ ಆಗಿದೆ.
  • ಅಷ್ಟೇ ಅಲ್ಲದೆ, ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಕಂಡುಬರುತ್ತದೆ.
  • ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Belly Fat Reduce Tips: ಒಂದೇ ವಾರದಲ್ಲಿ ಆರೋಗ್ಯಕರವಾಗಿ ಸೊಂಟವನ್ನು ತೆಳ್ಳಗಾಗಿಸಲು ಪರಂಗಿಯನ್ನು ಈ ರೀತಿ ಸೇವಿಸಿ   title=
Belly Fat Reduce Tips

Belly Fat Reduce Tips: ತೂಕ ಹೆಚ್ಚಾಗುವುದರಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಇಂದಿನಿಂದಲೇ ನಿಮ್ಮ ಡಯಟ್ನಲ್ಲಿ ಪರಂಗಿ ಹಣ್ಣನ್ನು ಸೇರಿಸಿ. ಇದು ನಿಮ್ಮ  ಹೊಟ್ಟೆಯನ್ನು ಸ್ವಚ್ಛವಾಗಿರಿಸುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಅನೇಕ ಪೋಷಕಾಂಶಗಳನ್ನು ಪೂರೈಸುತ್ತದೆ. ಪರಂಗಿ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಆದ್ದರಿಂದ, ಇದು ನಿಮ್ಮ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿ ಆಗಿದೆ. ಅಷ್ಟೇ ಅಲ್ಲದೆ, ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಕಂಡುಬರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ನೀವು ಹೊಟ್ಟೆಯ ಕೊಬ್ಬಿನಿಂದ ತೊಂದರೆಗೀಡಾಗಿದ್ದರೆ ಪರಂಗಿಹಣ್ಣು ಹೇಗೆ ಸಹಾಯಕವಾಗಲಿದೆ. ತೂಕ ನಷ್ಟ ಹಾಗೂ ಬೆಲ್ಲಿ ಫ್ಯಾಟ್ ಕರಗಿಸಲು ಪರಂಗಿ ಹಣ್ಣನ್ನು ಯಾವ ರೀತಿ ಸೇವಿಸಬೇಕು ಎಂದು ತಿಳಿಯಿರಿ. 

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪರಂಗಿ ಹಣ್ಣನ್ನು ಈ ರೀತಿ ಸೇವಿಸಿ:
ಮೊಸರಿನೊಂದಿಗೆ ಪರಂಗಿ ಹಣ್ಣು:

ನೀವು ಬೆಲ್ಲಿ ಫ್ಯಾಟ್ ನಿಂದ ತೊಂದರೆಗೊಳಗಾಗಿದ್ದರೆ, ನಿಮ್ಮ ಬೆಳಗಿನ ಉಪಾಹಾರದಲ್ಲಿ ಮೊಸರಿನೊಂದಿಗೆ ಪರಂಗಿ ಹಣ್ಣನ್ನು ಸೇವಿಸಿ.  ಇದರಲ್ಲಿ ನೀವು ಇನ್ನೂ ಕೆಲವು ಹಣ್ಣುಗಳನ್ನು ಸೇರಿಸಬಹುದು. ಇದರಲ್ಲಿ ನೆನೆಸಿದ ಡ್ರೈ ಫ್ರೂಟ್ಸ್ ಕೂಡ ಹಾಕಬಹುದು. ಇದನ್ನು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಅತಿಯಾಗಿ ತಿನ್ನುವುದರಿಂದ ಪಾರಾಗುತ್ತೀರಿ.

ಇದನ್ನೂ ಓದಿ- Diabetes: ಈ ಕಾರಣಗಳು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು!

ಹಾಲು ಮತ್ತು ಪರಂಗಿ:
ಒಂದೊಮ್ಮೆ ಸ್ವಲ್ಪ ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವವರಾದರೆ, ನೀವು ಬೇರೆ ಯಾವುದೇ ಖಾದ್ಯವನ್ನು ತಿನ್ನುವ ಅಗತ್ಯವಿಲ್ಲ. ಬದಲಿಗೆ ಒಂದು ಲೋಟ ಕೆನೆ ಹಾಲು ಮತ್ತು ಪರಂಗಿ ಹಣ್ಣನ್ನು ಸೇವಿಸಬಹುದು. ಇದರೊಂದಿಗೆ ನೀವು ಪ್ರೋಟೀನ್ ಪ್ರಮಾಣವನ್ನು ಸಹ ಪಡೆಯುತ್ತೀರಿ ಮತ್ತು ನಿಮ್ಮ ಹೊಟ್ಟೆಯು ಹಲವು ಗಂಟೆಗಳ ಕಾಲ ತುಂಬಿರುತ್ತದೆ. ಹಾಗಾಗಿ, ನೀವು ನಿಮ್ಮ ಸೊಂಟವನ್ನು ಸ್ಲಿಮ್ ಮಾಡಲು ಬಯಸಿದರೆ, ನೀವು ಬೆಳಗಿನ ಉಪಾಹಾರದಲ್ಲಿ ಹಾಲು ಮತ್ತು ಪಪ್ಪಾಯಿಯನ್ನು ಸೇವಿಸಬಹುದು.

ಇದನ್ನೂ ಓದಿ- Liver Health: ಯಕೃತ್ತಿಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು ಈ ಆಹಾರಗಳು

ಪಪ್ಪಾಯಿ ಚಾಟ್:
ನೀವು ಸಾದಾ ಪಪ್ಪಾಯಿಯನ್ನು ತಿನ್ನಲು ಇಷ್ಟಪಡದಿದ್ದರೆ, ನೀವು ಪಪ್ಪಾಯಿ ಚಾಟ್ ಅನ್ನು ತಯಾರಿಸಿ ತಿನ್ನಬಹುದು. ಇದಕ್ಕಾಗಿ, ಪಪ್ಪಾಯಿಯನ್ನು ಹೋಳುಗಳಾಗಿ ಕತ್ತರಿಸಿ ಅದರ ಮೇಲೆ ಕಪ್ಪು ಉಪ್ಪು, ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ ಸೇವಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News