Curry leaves Benefits: ಬುಡದಿಂದ ತಲೆವರೆಗೆ ಅದ್ಭುತ ಪ್ರಯೋಜನ ನೀಡುತ್ತೆ ಕರಿಬೇವು

Curry leaves can cure many diseases | ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳು ತುಂಬಾ ಪ್ರಯೋಜನಕಾರಿ 
 

Curry leaves Benefits: ಕರಿಬೇವಿನ ಎಲೆಗಳಲ್ಲಿ ಎಲ್ಲಾ ಪೋಷಕಾಂಶಗಳು ಕಂಡುಬರುತ್ತವೆ, ಇದು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ. ಮಾತ್ರವಲ್ಲ, ಈ ಮ್ಯಾಜಿಕ್ ಎಲೆಗಳನ್ನು ಬಳಸುವುದರಿಂದ ಕಾಂತಿಯುತ ತ್ವಚೆಯನ್ನೂ ಪಡೆಯಬಹುದು. ಕರಿಬೇವಿನ ಸೇವನೆಯು ಕಣ್ಣುಗಳಿಗೆ ಉತ್ತಮ ಎಂದು ಹೇಳಲಾಗುತ್ತದೆ. ಕರಿಬೇವಿನ ಎಲೆಗಳಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

1 /5

ಕರಿಬೇವಿನ ಸೊಪ್ಪನ್ನು ನೇರವಾಗಿಯೂ ತಿನ್ನಬಹುದು. ಕರಿಬೇವಿನ ಎಲೆಯಲ್ಲಿ ವಿಟಮಿನ್ ಬಿ1, ಬಿ3, ಬಿ9, ಸಿ. ಇದಲ್ಲದೆ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕವು ಇದರಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.  

2 /5

ಕರಿಬೇವಿನ ಎಲೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ಕೂದಲು ಕಪ್ಪಾಗಿ, ಉದ್ದವಾಗಿ ಮತ್ತು ದಪ್ಪಗಾಗಲು ಪ್ರಾರಂಭವಾಗುತ್ತದೆ. ಇಷ್ಟೇ ಅಲ್ಲ, ತಲೆಹೊಟ್ಟು ಸಮಸ್ಯೆಯೂ ನಿವಾರಣೆ ಆಗುತ್ತದೆ.

3 /5

ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರುತ್ತದೆ. 

4 /5

ಕರಿಬೇವಿನ ಎಲೆಯ ಚಹಾವನ್ನು ತಯಾರಿಸಿ ಬಳಸುವುದರಿಂದ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕಾಗಿ, ಮೊದಲು ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದರಲ್ಲಿ ನಿಂಬೆ ರಸ ಹಿಂಡಿ ಮತ್ತು ಸಕ್ಕರೆ ಮಿಶ್ರಣ ಮಾಡಿ. ಈ ರೀತಿ ಟೀ ಮಾಡಿ ಒಂದು ವಾರ ಕುಡಿಯಿರಿ. ಈ ಟೀ ನಿಮ್ಮ ಕೂದಲನ್ನು ಉದ್ದವಾಗಿ, ದಟ್ಟವಾಗಿ ಮಾಡುತ್ತದೆ. ಜೊತೆಗೆ, ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ.  

5 /5

ಮುಖಕ್ಕೆ ನೈಸರ್ಗಿಕ ಕಾಂತಿಯನ್ನು ತರಲು ಕರಿಬೇವಿನ ಎಲೆಗಳನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಕರಿಬೇವಿನ ಎಲೆಗಳು ಮುಖದ ಕಾಂತಿ ಮತ್ತು ಮೈಬಣ್ಣವನ್ನು ಹೆಚ್ಚಿಸುತ್ತವೆ. ನೀವು ಇದನ್ನು ಫೇಸ್ ಪ್ಯಾಕ್ ಆಗಿಯೂ ಬಳಸಬಹುದು ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.