ನಾಳೆ ವರ್ಷದ ಕೊನೆಯ ಸೂರ್ಯ ಗ್ರಹಣ.! ಸೂತಕ ಕಾಲದಲ್ಲಿ ಏನು ಮಾಡಬೇಕು ? ಏನು ಮಾಡಬಾರದು ಗೊತ್ತಿರಲಿ

Surya Grahan 2022 Sutaka Kaala:ಇದು ವರ್ಷದ ಕೊನೆಯ ಸೂರ್ಯಗ್ರಹಣ. ಭಾರತದ ಕೆಲವು ಭಾಗಗಳಲ್ಲಿ ಈ ಗ್ರಹಣವನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಿತ್ತು.   

Written by - Ranjitha R K | Last Updated : Oct 24, 2022, 03:32 PM IST
  • ಈ ದೀಪಾವಳಿ ಹಬ್ಬವನ್ನು ಗ್ರಹಣದ ನೆರಳಿನಲ್ಲಿ ಆಚರಿಸಲಾಗುತ್ತಿದೆ.
  • ಅಕ್ಟೋಬರ್ 25 ರಂದು, ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ
  • ಸೂತಕ ಕಾಲ ಯಾವುದು ತಿಳಿದುಕೊಳ್ಳಿ
ನಾಳೆ ವರ್ಷದ ಕೊನೆಯ ಸೂರ್ಯ ಗ್ರಹಣ.! ಸೂತಕ ಕಾಲದಲ್ಲಿ ಏನು ಮಾಡಬೇಕು ? ಏನು ಮಾಡಬಾರದು ಗೊತ್ತಿರಲಿ  title=
Surya Grahan 2022 (file photo)

Surya Grahan 2022 Sutaka Kaala: ಈ ದೀಪಾವಳಿ ಹಬ್ಬವನ್ನು ಗ್ರಹಣದ ನೆರಳಿನಲ್ಲಿ ಆಚರಿಸಲಾಗುತ್ತಿದೆ. ಅಕ್ಟೋಬರ್ 25 ರಂದು, ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣದ ಸೂತಕವು 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂರ್ಯಗ್ರಹಣ ಯಾವಾಗಲೂ ಅಮವಾಸ್ಯೆಯ ತಿಥಿಯಂದು ಸಂಭವಿಸುತ್ತದೆ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಇದು ವರ್ಷದ ಕೊನೆಯ ಸೂರ್ಯಗ್ರಹಣ. ಭಾರತದ ಕೆಲವು ಭಾಗಗಳಲ್ಲಿ ಈ ಗ್ರಹಣವನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಿತ್ತು. 

ಇದನ್ನೂ ಓದಿ : Naraka Chaturdashi 2022: ನರಕ ಚತುರ್ದಶಿ ದಿನ ಈ ತಪ್ಪುಗಳಾದರೆ ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ !

ಈ ಸಮಯದಿಂದ ಗ್ರಹಣ ಆರಂಭ : 
ಧಾರ್ಮಿಕ ದೃಷ್ಟಿಕೋನದಿಂದ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಈ ಗ್ರಹಣವು ವಿಶೇಷ ಸಂದರ್ಭದಲ್ಲಿ ಸಂಭವಿಸಿದರೆ, ಅದರ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗುತ್ತದೆ. ಅಕ್ಟೋಬರ್ 25 ರಂದು, ಈ ಸೂರ್ಯಗ್ರಹಣವು ಐಸ್ಲ್ಯಾಂಡ್‌ನಿಂದ ಮಧ್ಯಾಹ್ನ 2:29 ಕ್ಕೆ ಪ್ರಾರಂಭವಾಗಿ ಅರಬ್ಬಿ ಸಮುದ್ರದಲ್ಲಿ  ಸಂಜೆ 6.20 ಕ್ಕೆ ಕೊನೆಗೊಳ್ಳುತ್ತದೆ. ಭಾರತದಲ್ಲಿ, ಈ ಗ್ರಹಣವು ಸುಮಾರು 4:29 ರಿಂದ ಪ್ರಾರಂಭವಾಗಿ, ಸಂಜೆ 6.09 ರವರೆಗೆ ಇರುತ್ತದೆ. 

ಸೂತಕದ ಅವಧಿ  : 
ಧಾರ್ಮಿಕ ಗ್ರಂಥಗಳ ಪ್ರಕಾರ, ಸೂರ್ಯಗ್ರಹಣದ ಸೂತಕ ಅವಧಿಯು 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಭಾರತದಲ್ಲಿ, ಈ ಸೂರ್ಯಗ್ರಹಣವು ಅಕ್ಟೋಬರ್ 25 ರಂದು ಸುಮಾರು 4 ಗಂಟೆಗೆ ಗೋಚರಿಸುತ್ತದೆ. ಆದ್ದರಿಂದ 12 ಗಂಟೆಗಳ ಮೊದಲು ಅಂದರೆ ಅಕ್ಟೋಬರ್ 25 ರಂದು ಬೆಳಿಗ್ಗೆ 4 ರಿಂದ ಸೂತಕ ಅವಧಿ ಇರುತ್ತದೆ. 

ಇದನ್ನೂ ಓದಿ : ದೀಪಾವಳಿ ದಿನ ಲಕ್ಷ್ಮೀ ಯಂತ್ರವನ್ನು ಈ ರೀತಿ ಪೂಜಿಸಿದರೆ ಮನೆಯಲ್ಲಿ ತುಂಬಿ ತುಳುಕುವುದು ಅಷ್ಟೈಶ್ವರ್ಯ

ಗ್ರಹ ಣ ಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು ? : 
 -ಗ್ರಹಣದ ಸೂತಕ ಕಾಲದಲ್ಲಿ ದಾನ ಮತ್ತು ಜಪ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ, ಪವಿತ್ರ ನದಿಗಳು ಮತ್ತು ಸರೋವರಗಳಲ್ಲಿ ಸ್ನಾನ ಮಾಡಿ ಮಂತ್ರಗಳನ್ನು ಜಪಿಸಲಾಗುತ್ತದೆ. ಈ ಸಮಯದಲ್ಲಿ ಮಂತ್ರ ಸಿದ್ಧಿಯನ್ನು ಸಹ ಮಾಡಲಾಗುತ್ತದೆ. 
-ಗ್ರಹಣದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಆದಷ್ಟು ದೇವರನ್ನು ಸ್ಮರಿಸಿ ಮಂತ್ರ ಇತ್ಯಾದಿಗಳನ್ನು ಪಠಿಸಿ. 
-ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ. ಈ ಸಮಯದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಬೇಕು. ಒಂದೇ ಸ್ಥಳದಲ್ಲಿ ಕುಳಿತು ದೇವರ ನಾಮಸ್ಮರಣೆ ಮಾಡಿ. 
-ನಿಮ್ಮ ರಾಶಿಗೆ ಅನುಗುಣವಾಗಿ ದಾನ ಮಾಡಿ. 
-ಈ ಸಮಯದಲ್ಲಿ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು.  ಮನೆಯಿಂದ ಹೊರ ಬರಬಾರದು, ದೇವರ ಧ್ಯಾನ ಮಾಡಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News