Pro Kabaddi League: ಜಯದ ಖಾತೆ ತೆರೆದ ಪಾಟ್ನಾ ಪೈರೇಟ್ಸ್: ಪುಣೇರಿ ಪಲ್ಟನ್ ಗೆ ಗೆಲುವು

ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಡೆಲ್ಲಿ ತಂಡದ ಪರ ನಾಯ ನವೀನ್‌ ಕುಮಾರ್‌ 13 ಅಂಕಗಳನ್ನು ಗಳಿಸಿದರೂ ಈ ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ, ಪಟ್ನಾ ಪೈರೇಟ್ಸ್‌ ಪರ ಸಚಿನ್‌ ರಪರ ಸಚಿನ್‌ ರೈಡಿಂಗ್‌ನಲ್ಲಿ 9 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

Written by - VISHWANATH HARIHARA | Edited by - Bhavishya Shetty | Last Updated : Oct 22, 2022, 12:49 AM IST
    • ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿ
    • ಜಯದ ಖಾತೆ ತೆರೆದು ಸಂಭ್ರಮಿಸಿದ ಪಾಟ್ನಾ ಪೈರೇಟ್ಸ್‌
    • ಜಯದ ರೂವಾರಿ ಎನಿಸಿದ ರೋಹಿತ್‌ ಗುಲಿಯಾ
Pro Kabaddi League: ಜಯದ ಖಾತೆ ತೆರೆದ ಪಾಟ್ನಾ ಪೈರೇಟ್ಸ್: ಪುಣೇರಿ ಪಲ್ಟನ್ ಗೆ ಗೆಲುವು title=
Vivo Pro Kabaddi League

ಬೆಂಗಳೂರು: ಬಲಿಷ್ಠ ದಬಾಂಗ್‌ ಡೆಲ್ಲಿ ತಂಡವನ್ನು 37-33 ಅಂತರದಲ್ಲಿ ಸೋಲಿಸಿದ ಪಾಟ್ನಾ ಪೈರೇಟ್ಸ್‌ ತಂಡ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯಲ್ಲಿ ಜಯದ ಖಾತೆ ತೆರೆದು ಸಂಭ್ರಮಿಸಿದೆ. ದಿನ ಇತರ ಪಂದ್ಯಗಳಲ್ಲಿ ಯು ಮುಂಬಾ ಮತ್ತು ಪುಣೇರಿ ಪಲ್ಟನ್‌ ತಂಡಗಳು ಜಯ ಗಳಿಸಿ ಮುನ್ನಡೆದಿವೆ.

ಇದನ್ನೂ ಓದಿ: Team India : ಟೀಂಗೆ ಮರಳಲಿದ್ದಾನೆ ಈ ಸ್ಪೋಟಕ ಆಟಗಾರ, ಎದುರಾಳಿಗಳ ಎದೆಯಲ್ಲಿ ಶುರುವಾಗಿದೆ ನಡುಕ!

ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ 13 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಡೆಲ್ಲಿ ತಂಡದ ಪರ ನಾಯ ನವೀನ್‌ ಕುಮಾರ್‌ 13 ಅಂಕಗಳನ್ನು ಗಳಿಸಿದರೂ ಈ ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ, ಪಟ್ನಾ ಪೈರೇಟ್ಸ್‌ ಪರ ಸಚಿನ್‌ ರಪರ ಸಚಿನ್‌ ರೈಡಿಂಗ್‌ನಲ್ಲಿ 9 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ನಾಯಕ ನವೀನ್‌ ಎಕ್ಸ್‌ಪ್ರೆಸ್‌ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ ಪಾಟ್ನಾ ಪೈರೇಟ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 20-12  ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ನವೀನ್‌ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸಿದರೆ, ಮಂಜೀತ್‌ ಹಾಗೂ ಅಶು ಮಲಿಕ್‌ ಅನುಕ್ರಮವಾಗಿ 4 ಮತ್ತು 3 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಟ್ಯಾಕಲ್‌ನಲ್ಲಿ ಕಿಶನ್‌ 3 ಅಂಕ ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಪಾಟ್ನಾ ಪೈರೇಟ್ಸ್‌ಪರ ರೋಹಿತ್‌ ಗುಲಿಯಾ ಉತ್ತಮ ರೈಡಿಂಗ್‌ ಪ್ರದರ್ಶಿಸಿ ದಿಟ್ಟ ಹೋರಾಟ ನೀಡಿದರು. ನಾಯಕ ನೀರಜ್‌ ಕುಮಾರ್‌ 3 ಅಂಕಗಳನ್ನು ಗಳಿಸಿದರು. ಪಾಟ್ನಾ ಪೈರೇಟ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ದಬಾಂಗ್‌ ಡೆಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಪುಣೇರಿ ಪಲ್ಟನ್‌ಗೆ ಜಯ: 

ನಾಯಕ ಫಜಲ್‌ ಅತ್ರಚಲಿ ಅವರ ಅದ್ಭುತ ಟ್ಯಾಕಲ್‌ ಸಾಧನೆಯ ನೆರವಿನಿಂದ ಪುಣೇರಿ ಪಲ್ಟನ್‌ ತಂಡ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 27-25 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಫಜಲ್‌ ಅತ್ರಚಲಿ ಅಮೂಲ್ಯ 6 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ರೈಡಿಂಗ್‌ನಲ್ಲಿ ಅಸ್ಲಾಮ್‌ ಇನಾಮ್ದಾರ್‌ (5) ಹಾಗೂ ಮೋಹಿತ್‌ ಗೊಯತ್‌ (4) ಸಮಯೋಚಿತ ಪ್ರದರ್ಶನ ತೋರಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಟ್ಯಾಕಲ್‌ನಲ್ಲಿ ಸೋಮ್ಬೀರ್‌ ಸಿಂಗ್‌ 5 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಾಲ್‌ ವಾರಿಯರ್ಸ್‌ ಪರ ನಾಯಕ ಮಣಿಂದರ್‌ ಸಿಂಗ್‌ ರೈಡಿಂಗ್‌ನಲ್ಲಿ 6 ಹಾಗೂ ಗಿರೀಶ್‌ ಮಾರುತಿ ಟ್ಯಾಕಲ್‌ನಲ್ಲಿ 4 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಬೆಂಗಾಲ್‌ ವಾರಿಯರ್ಸ್‌ ಮುನ್ನಡೆ: ನಾಯಕ ಮಣಿಂದರ್‌ ಸಿಂಗ್‌ ಅವರ ರೈಡಿಂಗ್‌ ಹಾಗೂ ಗಿರೀಶ್‌ ಮಾರುತಿ ಅವರ ಟ್ಯಾಕಲ್‌ ನೆರವಿನಿಂದ ಬೆಂಗಾಲ್‌ ವಾರಿಯರ್ಸ್‌ ತಂಡ ಪುಣೇರಿ ಪಲ್ಟನ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ  15-11 ಅಂತರದಲ್ಲಿ ಮುನ್ನಡೆ ಕಂಡಿದೆ, ಪುಣೇರಿ ಪಲ್ಟನ್‌ ಪರ ಮೋಹಿತ್‌ ಗೊಯತ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿ ತಂಡದ ದಿಟ್ಟ ಹೋರಾಟಕ್ಕೆ ನೆರವಾದರು. ಹಿನ್ನಡೆ ಕಂಡಿದ್ದ ಬೆಂಗಾಲ್‌ ವಾರಿಯರ್ಸ್‌ಗೆ ಮನೋಜ್‌ ಗೌಡ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು, ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ್ದ ಬೆಂಗಾಲ್‌ ವಾರಿಯರ್ಸ್‌ಗೆ ಇಲ್ಲಿ ಜಯದ ಅಗತ್ಯವಿದೆ, ಅದೇ ರೀತಿಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದು ಗಮನಾರ್ಹ. ಪುಣೇರಿ ಪಲ್ಟನ್‌ ಪರ ಮೋಹಿತ್‌ ಗೊಯತ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಗಮನಾರ್ಹ ಪ್ರದರ್ಶನ ತೋರಿಲ್ಲ.

ಇದನ್ನೂ ಓದಿ: Viral Video: ಎಲ್ಲರ ಮುಂದೆಯೇ ಸೂರ್ಯಕುಮಾರ್ ಯಾದವ್‍ಗೆ ಗೇಲಿ ಮಾಡಿದ ರೋಹಿತ್ ಶರ್ಮಾ!

ಯು ಮುಂಬಾಕ್ಕೆ ರೋಚಕ ಜಯ: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ ಹಿರಿಯಾಣ ಸ್ಟೀಲರ್ಸ್‌ ವಿರುದ್ಧ 32-31 ಅಂತರದಲ್ಲಿ ಜಯ ಗಳಿಸಿ ತನ್ನ ಪ್ರಭುತ್ವ ಸಾಧಿಸಿತು. ಗುಮಾನ್ ಸಿಂಗ್‌ ರೈಡಿಂಗ್‌ನಲ್ಲಿ ಗಳಿಸಿದ 9 ಅಂಕ ಹಾಗೂ ನಾಯಕ ಸುರೀಂದರ್‌ ಸಿಂಗ್‌ ಟ್ಯಾಕಲ್‌ನಲ್ಲಿ ಗಳಿಸಿದ 6 ಅಂಕ ಪಂದ್ಯದ ಗತಿಯನ್ನೇ ಬದಲಾಯಿಸಿತು. ಉತ್ತಮ ಪೈಪೋಟಿ ನೀಡಿಸದರೂ ಹರಿಯಾಣ ಸ್ಟೀಲರ್ಸ್‌ ಕೇವಲ ಒಂದು ಅಂಕದಿಂದ ಪಂದ್ಯವನ್ನು ಕೈ ಚೆಲ್ಲಿತು. ಹಿರಿಯಾಣ ಸ್ಟೀಲರ್ಸ್‌ ಪರ ಸ್ಟಾರ್‌ ರೈಡರ್‌ ಕೇಲವ 4 ಅಂಕ ಗಳಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಜಯದೊಂದಿಗೆ ಯು ಮುಂಬಾ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯಿತು. ಸೋಲುಂಡ ಹರಿಯಾಣ ಸ್ಟೀಲರ್ಸ್‌ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. ಉತ್ತಮ ರೀತಿಯಲ್ಲಿ ಆಲ್ ರೌಂಡ್‌ ಪ್ರದರ್ಶನ ತೋರಿದ ಯು ಮುಂಬಾ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಪ್ರಥಮಾರ್ಧದಲ್ಲಿ 17-15 ಅಂತರದಲ್ಲಿ ಮುನ್ನಡೆ ಸಾಧಿಸಿತು. ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ್ದ ಹರಿಯಾಣ ಸ್ಟೀಲರ್ಸ್‌ ಗೆಲ್ಲುವ ಛಲದೊಂದಿಗೆ ಅಂಗಣಕ್ಕಿಳಿದಿತ್ತು. ಆರಂಭದಲ್ಲಿ ಬೃಹತ್‌ ಹಿನ್ನಡೆ ಕಂಡಿದ್ದರೂ ಸರ್ವಾಂಗೀಣ ಪದರ್ಶನ ತೋರಿ ಉತ್ತಮ ಪೈಪೋಟಿ ನೀಡಿ ಅಂತರವನ್ನು ಕಡಿಮೆ ಮಾಡಿಕೊಂಡಿತು, ಕೇವಲ ಆಲೌಟ್‌ ಆಗಿರುವುದೇ ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News