ದೀಪಾವಳಿ ದಿನ ಮುಂಜಾನೆ ಈ ವಸ್ತುಗಳು ಕಂಡುಬಂದರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರು : ದೀಪಾವಳಿಯ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ದೀಪಾವಳಿ ದಿನ ಮುಂಜಾನೆ ಈ ವಸ್ತುಗಳು ಕಂಡುಬಂದರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳನ್ನು ನೋಡಿದರೆ ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕಿದಂತೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಒಂದು ಸಸ್ಯವು ಮನೆಯ ಹೊರಗೆ ಮೊಳಕೆಯೊಡೆಯುತ್ತಿದ್ದರೆ, ಅದನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮನೆಯ ಮುಂದೆ ಗಿಡ ಬೆಳೆಯುತ್ತಿದ್ದರೆ, ಬಡತನ ನಿರ್ಮೂಲವಾಗುತ್ತದೆ ಎಂದರ್ಥ.
ವಾಸ್ತು ತಜ್ಞರ ಪ್ರಕಾರ, ದೀಪಾವಳಿಯ ಬೆಳಿಗ್ಗೆ ಮನೆಯಿಂದ ಹೊರಡುವ ವೇಳೆ ತಕ್ಷಣ ಕುದುರೆಯ ಲಾಳ ಕಣ್ಣಿಗೆ ಬಿದ್ದರೆ ಅದು ಶುಭ ಸಂಕೇತವಾಗಿರುತ್ತದೆ. ಅಲ್ಲದೆ, ಅಲ್ಲಿಗೆ ವ್ಯಕ್ತಿಯ ಕಷ್ಟದ ದಿನಗಳು ದೂರ ಸರಿಯಲಿವೆ ಎಂದರ್ಥ.
ಮನೆಯ ಸುತ್ತಲೂ ಚಿಟ್ಟೆಗಳನ್ನು ನೋಡಿದರೆ, ನಿಮ್ಮ ಒತ್ತಡದ ಸಮಯವು ಕೊನೆಗೊಳ್ಳಲಿದೆ ಎನ್ನುವುದನ್ನು ಸೂಚಿಸುತ್ತದೆ. ಮಾನಸಿಕ ನೆಮ್ಮದಿ ಸಿಗಲಿದೆ.
ಮನೆಯ ಹೊರಗೆ ಬೆಳಗ್ಗೆ ಕೋತಿ ಕಾಣಿಸಿಕೊಂಡರೆ ಕೂಡಾ ಶುಭ ಚಿಹ್ನೆ. ಹೀಗಾದರೆ ಕುಬೇರ ದೇವನ ಕೃಪೆಯಿಂದ ಬಡತನ ಬಹುಬೇಗ ನಿವಾರಣೆಯಾಗಲಿದೆ ಎಂದರ್ಥ.
ದೀಪಾವಳಿಯ ಬೆಳಿಗ್ಗೆ, ವ್ಯಕ್ತಿಯು ನೀರು ತುಂಬುತ್ತಿರುವುದನ್ನು ನೋಡಿದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಮನೆಯಿಂದ ಹೊರಗೆ ಹೋಗುತ್ತಿರುವ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಬೆಳಿಗ್ಗೆ ತೆಂಗಿನಕಾಯಿಯನ್ನು ನೋಡಿದರೆ, ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿ ಕಂಡರೆ ಲಕ್ಷ್ಮೀ ದೇವಿ ಮತ್ತು ಕುಬೇರ ದೇವನ ಕೃಪೆಯಿಂದ ನಿಮ್ಮ ದಿನಗಳು ಶೀಘ್ರದಲ್ಲೇ ಬದಲಾಗಲಿವೆ.