Green Tea In Diabetes: ಮಧುಮೇಹಿಗಳು ಗ್ರೀನ್ ಟೀ ಕುಡಿಯಬಹುದೇ? ಸಂಶೋಧನೆ ಏನು ಹೇಳುತ್ತೆ?

Green Tea In Diabetes: ಇತ್ತೀಚೆಗೆ ಗ್ರೀನ್ ಟೀ ಬಗ್ಗೆ ಸಂಶೋಧನೆಯೊಂದು ನಡೆದಿದ್ದು ಅದರಲ್ಲಿ ಹಲವು ವಿಷಯಗಳು ಮುನ್ನೆಲೆಗೆ ಬಂದಿವೆ. ಮಧುಮೇಹ ಸಮಸ್ಯೆ ಇರುವವರು ಗ್ರೀನ್ ಟೀ ಕುಡಿಯಬಹುದೇ? ಗ್ರೀನ್ ಟೀ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳೇನು? ಈ ಕುರಿತಂತೆ ಸಂಶೋಧನೆ ಏನು ಹೇಳುತ್ತದೆ ಎಂದು ತಿಳಿಯೋಣ...

Written by - Yashaswini V | Last Updated : Oct 18, 2022, 10:55 AM IST
  • ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಗ್ರೀನ್ ಟೀ ವರದಾನವಿದ್ದಂತೆ.
  • ಇತ್ತೀಚೆಗೆ ಗ್ರೀನ್ ಟೀ ಬಗ್ಗೆ ಸಂಶೋಧನೆಯೊಂದು ನಡೆದಿದ್ದು ಅದರಲ್ಲಿ ಹಲವು ಅಚ್ಚರಿಯ ವಿಷಯಗಳು ಮುನ್ನೆಲೆಗೆ ಬಂದಿವೆ.
  • ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎಂದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ.
Green Tea In Diabetes: ಮಧುಮೇಹಿಗಳು ಗ್ರೀನ್ ಟೀ ಕುಡಿಯಬಹುದೇ? ಸಂಶೋಧನೆ ಏನು ಹೇಳುತ್ತೆ?  title=
Green Tea In Diabetes

Green Tea In Diabetes: ಇತ್ತೀಚಿನ ದಿನಗಳಲ್ಲಿ, ಮಧುಮೇಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿ ಮನೆಯಲ್ಲೂ ಒಬ್ಬ ಶುಗರ್ ಪೇಷಂಟ್ ಸಿಗುತ್ತಾರೆ. ಮಧುಮೇಹವು ಹೆಚ್ಚಾಗಿ ತಪ್ಪು ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುತ್ತದೆ. ಮಧುಮೇಹದಲ್ಲಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗದಂತೆ ನಿಗಾವಹಿಸುವುದು ಬಹಳ ಮುಖ್ಯ. ಹಾಗಾಗಿಯೇ, ತಜ್ಞರು ಮಧುಮೇಹಿಗಳಿಗೆ ಸಿಹಿ ತಿನಿಸುಗಳಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ. ಜೊತೆಗೆ ಆರೋಗ್ಯಕರ ಆಹಾರಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಅಂತಹ ಆಹಾರ ಪದಾರ್ಥಗಳಲ್ಲಿ ಗ್ರೀನ್ ಟೀ ಸಹ ಒಂದು. ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ, ಮಧುಮೇಹಿಗಳು ಗ್ರೀನ್ ಟೀ ಕುಡಿಯಬಹುದೇ? ಎಂಬ ಬಗ್ಗೆ ಹಲವರಿಗೆ ಅನುಮಾನಗಳಿವೆ. ಈ ಕುರಿತಂತೆ ಸಂಶೋಧನೆ ಏನು ಹೇಳುತ್ತದೆ ಎಂದು ತಿಳಿಯೋಣ...

ವಾಸ್ತವವಾಗಿ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಗ್ರೀನ್ ಟೀ ವರದಾನವಿದ್ದಂತೆ. ಇತ್ತೀಚೆಗೆ ಗ್ರೀನ್ ಟೀ ಬಗ್ಗೆ ಸಂಶೋಧನೆಯೊಂದು ನಡೆದಿದ್ದು ಅದರಲ್ಲಿ ಹಲವು ಅಚ್ಚರಿಯ ವಿಷಯಗಳು ಮುನ್ನೆಲೆಗೆ ಬಂದಿವೆ. ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎಂದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ.  ಪಾಲಿಫಿನಾಲ್ಗಳು ಮತ್ತು ಉತ್ಕರ್ಷಣ ನಿರೋಧಕಗಳು ಹಸಿರು ಚಹಾದಲ್ಲಿ ಕಂಡುಬರುತ್ತವ. ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ  ಎಂದು ಸಂಶೋಧಕರು ಹೇಳುತ್ತಾರೆ. ಹಾಗಿದ್ದರೆ, ಗ್ರೀನ್ ಟೀ ಮಧುಮೇಹಿಗಳಿಗೆ ಹೇಗೆ ಪ್ರಯೋಜನಕಾರಿ ಆಗಿದೆ. ಇದರ ಇತರ ಲಾಭಗಳೇನು ಎಂದು ತಿಳಿಯಿರಿ.

ಇದನ್ನೂ ಓದಿ- Weight Loss: ತೂಕ ಇಳಿಸುವಾಗ ಮರೆತೂ ಕೂಡ ಈ 2 ಪದಾರ್ಥಗಳನ್ನು ತಿನ್ನಬೇಡಿ

ಮಧುಮೇಹಿಗಳಿಗೆ ಗ್ರೀನ್ ಟೀ ಸೇವನೆಯಿಂದ ಸಿಗುವ ಆರೋಗ್ಯ ಲಾಭಗಳೇನು?
ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಸುಮಾರು 10 ಲಕ್ಷ ಜನರ ಮೇಲೆ ನಡೆಸಲಾದ ಈ ಸಂಶೋಧನೆಯಲ್ಲಿ, ಪ್ರತಿದಿನ 2 ಕಪ್ ಗ್ರೀನ್ ಟೀ ಕುಡಿಯುವವರಲ್ಲಿ ಶೇ. 4ರಷ್ಟು ಮಧುಮೇಹದ ಅಪಾಯ ಕಡಿಮೆ ಆಗಿರುವುದು ಕಂಡು ಬಂದಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಆದಾಗ್ಯೂ, ಈ ಸಂಶೋಧನೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹದ ಅಪಾಯ ಏಕೆ ಕಡಿಮೆ ಆಗುತ್ತದೆ ಎಂಬುದನ್ನು ಕಂಡುಹಿಡಿಯಲಾಗಿಲ್ಲ.  

ಇದನ್ನೂ ಓದಿ- Dates Benefits : ದೀರ್ಘಾಯುಷ್ಯಕ್ಕಾಗಿ ಸೇವಿಸಿ ಖರ್ಜೂರ, ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ!

ಗ್ರೀನ್ ಟೀ ಕುಡಿಯುವ ಇತರ ಪ್ರಯೋಜನಗಳು:
ತೂಕ ಹೆಚ್ಚಾಗುವುದರಿಂದ ತೊಂದರೆಗೊಳಗಾಗಿರುವವರು ಗ್ರೀನ್ ಟೀ ಸೇವಿಸಬಹುದು. ಇದಲ್ಲದೆ, ಹಸಿರು ಚಹಾವನ್ನು ಸೇವಿಸುವುದರಿಂದ ಪಾರ್ಕಿನ್ಸನ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಬಹಳಷ್ಟು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ, ಇದು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಸಹ ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News