ಐಸಿಐಸಿಐ ಬ್ಯಾಂಕ್ ಸಿಇಓ ಸ್ಥಾನಕ್ಕೆ ಚಂದಾ ಕೊಚ್ಚಾರ್ ರಾಜೀನಾಮೆ

ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂದೀಪ್ ಭಕ್ಷಿ ಅವರನ್ನು ನೇಮಕ ಮಾಡಿದೆ.

Last Updated : Oct 4, 2018, 07:14 PM IST
ಐಸಿಐಸಿಐ ಬ್ಯಾಂಕ್ ಸಿಇಓ ಸ್ಥಾನಕ್ಕೆ ಚಂದಾ ಕೊಚ್ಚಾರ್ ರಾಜೀನಾಮೆ title=

ನವದೆಹಲಿ: ಪ್ರತಿಷ್ಟಿತ ಐಸಿಐಸಿಐ ಬ್ಯಾಂಕ್ ಸಿಇಓ ಸ್ಥಾನಕ್ಕೆ ಚಂದಾ ಕೊಚ್ಚಾರ್ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಂದೀಪ್ ಭಕ್ಷಿ ಅವರನ್ನು ನೇಮಕ ಮಾಡಿದೆ.

ಐಸಿಐಸಿಐ ನ ಪ್ರುಡೆನ್ಷಿಯಲ್ ಲೈಫ್ ಇನ್ಶುರೆನ್ಸ್ ನ ಎಂಡಿ ಮತ್ತು ಸಿಇಒ ಆಗಿ  ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ. 

ಅವಧಿಗೂ ಮುನ್ನ ಬ್ಯಾಂಕ್ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಂದ ಕೊಚ್ಚಾರ್ ವೀಡಿಯೋಕಾನ್ ಸಂಸ್ಥೆ ಸಾಲ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ. ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಸಮೂಹ ಕಂಪನಿಗೆ 2012ರಲ್ಲಿ 3,250 ಕೋಟಿ ರುಪಾಯಿ ಸಾಲ ನೀಡಿತ್ತು. ಆದರೆ ಈವರೆಗೆ ಸಾಲದ ಶೇ. 80ರಷ್ಟು ಹಣವೂ ಮರು ಪಾವತಿಯಾಗಿಲ್ಲ ಎನ್ನಲಾಗಿದೆ. 
 

Trending News