ದೀಪಾವಳಿ ಹಬ್ಬ ಹಿನ್ನೆಲೆ KSRTCಯಿಂದ 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ

ದೀಪಾವಳಿ ಹಬ್ಬ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ  KSRTC 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಮೆಜೆಸ್ಟಿಕ್ ಸೇರಿ ನಗರದ ವಿವಿಧ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ  

Written by - Ranjitha R K | Last Updated : Oct 17, 2022, 03:27 PM IST
  • ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ
  • 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದ ಕೆಎಸ್ ಆರ್ ಟಿಸಿ
  • ಅಕ್ಟೋಬರ್ 21 ಮತ್ತು 23ರಂದು ಹೆಚ್ಚುವರಿ 1500 ಬಸ್
ದೀಪಾವಳಿ ಹಬ್ಬ ಹಿನ್ನೆಲೆ KSRTCಯಿಂದ 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ title=
KSRTC Diwali offer

ಬೆಂಗಳೂರು : ದೀಪಾವಳಿ ಹಬ್ಬ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ  KSRTC 1500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಮೆಜೆಸ್ಟಿಕ್ ಸೇರಿ ನಗರದ ವಿವಿಧ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ,ಆಂಧ್ರಪ್ರದೇಶ, ತೆಲಂಗಾಣದ ಬಸ್ ಗಳು ಲಭ್ಯವಿರಲಿದೆ. 

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 21 ಮತ್ತು 23ರಂದು ಹೆಚ್ಚುವರಿ 1500 ಬಸ್ ಗಳನ್ನು ಕೆಎಸ್ ಆರ್ ಟಿಸಿ ವ್ಯವಸ್ಥೆ ಮಾಡಿದೆ. ಮೆಜೆಸ್ಟಿಕ್, ಮೈಸೂರು ರಸ್ತೆ, ಸ್ಯಾಟಲೈಟ್, ಶಾಂತಿನಗರ, ಗೊರಗುಂಟೆಪಾಳ್ಯದಿಂದ ಈ ಬಸ್ ಗಳು ಲಭ್ಯವಿರಲಿದೆ. 

ಇದನ್ನೂ ಓದಿ  : Yathindra Siddaramaiah : ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಫೀಕ್ಸ್!

ಇನ್ನು ಊರಿಗೆ ತೆರಳಿದವರು ವಾಪಾಸ್ ಆಗಲು ಅನುಕೂಲವಾಗುವಂತೆ ಅಕ್ಟೋಬರ್ 26 ರಿಂದ 30ರ ವರೆಗೆ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಲಾಗಿದೆ. ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಾತ್ರವಲ್ಲ ಅಂತಾರಾಜ್ಯ ಪ್ರಯಾಣಿಕರಿಗೆ ವಾಪಸ್ ಬರಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ ಪ್ರಾಯಾಣಿಕರಿಗೆ 5% ರಿಯಾಯಿತಿ ನೀಡಲಾಗುವುದು. ಬರುವ ಮತ್ತು ಹೋಗುವ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ 10% ರಿಯಾಯಿತಿ  ನೀಡಲಿದೆ. ಬುಕ್ಕಿಂಗ್ ಮೇಲೆ ರಿಯಾಯಿತಿಮತ್ತು ಬಸ್ ಸೌಲಭ್ಯಗಳ ಹೆಚ್ಚಿನ ವಿವರಗಳನ್ನು  ಪ್ರಯಾಣಿಕರು www.ksrtc.Karnataka.govt.in ವೆಬ್  ಮೂಲಕ ಪಡೆದುಕೊಳ್ಳಬಹುದು.  ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ನಿಗಮ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ  : ಆಧುನಿಕ ಭಗೀರಥ ಖ್ಯಾತಿಯ ಕೆರೆ ಕಾಮೇಗೌಡ ನಿಧನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News