Viral News: ಕುಡುಕನಿಗೆ ಕಚ್ಚಿದ ಕೂಡಲೇ ಸಾವನ್ನಪ್ಪಿದ ನಾಗರಹಾವು..!

ಪಾನಮತ್ತ ವ್ಯಕ್ತಿಯೊಬ್ಬನಿಗೆ ಎರಡು ಬಾರಿ ಕಚ್ಚಿದ ನಾಗರಹಾವು ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಖುಷಿನಗರದಲ್ಲಿ ನಡೆದಿದೆ.

Written by - Puttaraj K Alur | Last Updated : Oct 13, 2022, 12:55 PM IST
  • ಉತ್ತರ ಪ್ರದೇಶದ ಖುಷಿನಗರದಲ್ಲಿ ವಿಚಿತ್ರ ಘಟನೆ ನಡೆದಿದೆ
  • ಕುಡುಕ ವ್ಯಕ್ತಿಗೆ 2 ಬಾರಿ ಕಚ್ಚಿ ಸಾವನ್ನಪ್ಪಿದ ನಾಗರಹಾವು
  • ಪಾನಮತ್ತ ವ್ಯಕ್ತಿಯ ಮಾತು ಕೇಳಿ ಹೌಹಾರಿದ ವೈದ್ಯರು

Trending Photos

Viral News: ಕುಡುಕನಿಗೆ ಕಚ್ಚಿದ ಕೂಡಲೇ ಸಾವನ್ನಪ್ಪಿದ ನಾಗರಹಾವು..!   title=
ಕುಡುಕನಿಗೆ ಕಚ್ಚಿ ಸಾವನ್ನಪ್ಪಿದ ಹಾವು

ಲಕ್ನೋ: ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಾವು ಕಚ್ಚಿ ಮನುಷ್ಯ ಸಾಯುವುದು ಸಾಮಾನ್ಯ. ಆದರೆ ಇಲ್ಲಿ ಕುಡುಕ ವ್ಯಕ್ತಿಗೆ ಕಚ್ಚಿದ ಕೂಡಲೇ ಹಾವೇ ಸಾವನ್ನಪ್ಪಿದೆ. ಇದು ಅಚ್ಚರಿಯಾದರೂ ನಿಜವಾಗಿ ನಡೆದಿರೋ ಘಟನೆ.

ನಾಗರಹಾವು ಅತ್ಯಂತ ಅಪಾಯಕಾರಿ. ಈ ಹಾವು ಕಚ್ಚಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕುಡುಕನಿಗೆ ಕಚ್ಚಿದ ಕೆಲ ನಿಮಿಷಗಳಲ್ಲಯೇ ನಾಗರಹಾವು ಸಾವನ್ನಪ್ಪಿದೆ.  

ಇದನ್ನೂ ಓದಿ: ಅಂಗಡಿಗೆ ಪಾನಿ ಪುರಿ ಸವಿಯಲು ಬಂದ ಗಜರಾಜ ; Video ವೈರಲ್ 

ಉತ್ತರ ಪ್ರದೇಶದ ಕುಶೀನಗರ ಜಿಲ್ಲಾಸ್ಪತ್ರೆಯ ತುರ್ತು ವಿಭಾಗಕ್ಕೆ ಗಾಬರಿಯಿಂದ ಆಗಮಿಸಿದ ಪಾನಮತ್ತ ವ್ಯಕ್ತಿಯೊಬ್ಬ ತನಗೆ ನಾಗಹಾವು ಕಚ್ಚಿದೆ ಅಂತಾ ಹೇಳಿದ್ದಾನೆ. ಕೂಡಲೇ ತನಗೆ ಚಿಕಿತ್ಸೆ ನೀಡಿ ಅಂತಾ ಆಸ್ಪತ್ರೆಗೆ ಸಿಬ್ಬಂದಿಗೆ ತಿಳಿಸಿದ್ದಾನೆ. ಬಳಿಕ ಆ ವ್ಯಕ್ತಿ ಹೇಳಿದ ಮಾತುಗಳನ್ನು ಕೇಳಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯೇ ಶಾಕ್ ಆಗಿದ್ದಾರೆ.

ತನಗೆ 2 ಬಾರಿ ನಾಗರಹಾವು ಕಚ್ಚಿದೆ. ಆದರೆ ನನಗೆ ಕಚ್ಚಿದ ಆ ಹಾವು ಸಾವನ್ನಪ್ಪಿದೆ ಅಂತಾ ಕುಡುಕ ವ್ಯಕ್ತಿ ಹೇಳಿದ್ದಾನೆ. ಕುಡಿದ ಮತ್ತಿನಲ್ಲಿ ಏನೇನೋ ಹೇಳುತ್ತಾನೆ ಅಂದುಕೊಂಡ ವೈದ್ಯರು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಆಗ ಆ ಪಾನಮತ್ತ ವ್ಯಕ್ತಿ ನೀವು ನಾನು ಹೇಳುವ ಮಾತಗಳನ್ನು ನಂಬುವುದಿಲ್ಲವೆಂದು ನನಗೆ ಮೊತ್ತಲೇ ಗೊತ್ತಿತ್ತು. ಹೀಗಾಗಿ ನನಗೆ ಕಚ್ಚಿ ಸಾವನ್ನಪ್ಪಿದ ಹಾವನ್ನು ತಂದಿದ್ದೇನೆ ನೋಡಿ ಅಂತಾ ಕವರ್ ಬಿಚ್ಚಿ ತೋರಿಸಿದ್ದಾನೆ.

ಇದನ್ನೂ ಓದಿ: Viral Video: ಮುತ್ತು ಕೊಡಲು ಹೋದವನ ತುಟಿಗೆ ಕಚ್ಚಿದ ನಾಗರಹಾವು! ಭಯಾನಕ ವಿಡಿಯೋ ವೈರಲ್

ಸತ್ತು ಹೋದ ನಾಗರಹಾವನ್ನು ಕವರ್‍ನಲ್ಲಿ ಕಂಡ ವೈದ್ಯರು ಮತ್ತು ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ.  kashyap_memer​ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕುಡುಕ ವ್ಯಕ್ತಿ ಆಸ್ಪತ್ರೆಯ ಹಾಸಿಗೆಯ ಮೇಲೆ ವೈದ್ಯರೊಂದಿಗೆ ಮಾತನಾಡುತ್ತಿದ್ದಾನೆ. ತನ್ನ ಕಾಲಿಗೆ ಹಾವು ಕಚ್ಚಿದೆ, ಹೀಗಾಗಿ ನನಗೆ ಕೂಡಲೇ ಚಿಕಿತ್ಸೆ ನೀಡಿ ಕೇಳಿಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News