Akhand Samrajya Raj Yoga : ಜ್ಯೋತಿಷ್ಯದಲ್ಲಿ, ಶುಭ ಯೋಗ, ದೋಷ ಮತ್ತು ಜಾತಕದಲ್ಲಿ ಗ್ರಹಗಳ ಸ್ಥಾನ ವಿಶೇಷ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ಅವುಗಳ ಸ್ಥಾನದಿಂದ ಜಾತಕದಲ್ಲಿ ಯೋಗಗಳು ಕೂಡಿ ಬರುತ್ತವೆ. ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯ ನಂತರ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಇದರೊಂದಿಗೆ ಕಾಲಕಾಲಕ್ಕೆ ಹಿಮ್ಮುಖ ಚಲನೆ, ನೇರ ನಡೆಯಾಗಿಯೂ ಬದಲಾಗುತ್ತಿರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಶನಿ ಗ್ರಹ ಕೂಡಾ ತನ್ನ ಮಾರ್ಗ ಬದಲಿಸಲಿದ್ದಾನೆ. ಅಂದರೆ ಅಲ್ಲಿಯವರೆಗೆ ಹಿಮ್ಮುಖವಾಗಿ ಚಲಿಸುತ್ತಿದ್ದ ಶನಿ ನೇರ ನಡೆ ಆರಂಭಿಸಲಿದ್ದಾನೆ. ಇದರೊಂದಿಗೆ 'ಅಖಂಡ ಸಾಮ್ರಾಜ್ಯ ರಾಜಯೋಗ' ರೂಪುಗೊಳ್ಳುತ್ತಿದೆ. ಈ ಯೋಗವು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರು ಮಾತ್ರ ಈ ಯೋಗದಿಂದ ವಿಶೇಷ ಲಾಭ ಪಡೆದುಕೊಳ್ಳುತ್ತಾರೆ.
ಮೇಷ ರಾಶಿ :
ಶನಿ ದೇವನು ನೇರ ನಡೆ ಆರಂಭಿಸುವಾಗ ರೂಪುಗೊಳ್ಳುವ ಅಖಂಡ ರಾಜಯೋಗವು ಮೇಷ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಈ ಸಮಯದಲ್ಲಿ, ಮೇಷ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಉತ್ತಮ ಲಾಭ ಗಳಿಸಬಹುದು. ಉದ್ಯೋಗವನ್ನು ಹುಡುಕುತ್ತಿದ್ದವರ ನಿರೀಕ್ಷೆ ಕೊನೆಯಾಗಬಹುದು. ಈ ಸಮಯದಲ್ಲಿ ವ್ಯವಹಾರದಲ್ಲಿ ಉತ್ತಮ ಹಣವನ್ನು ಪಡೆಯುವ ಸಾಧ್ಯತೆಗಳಿವೆ. ಈ ರಾಜಯೋಗದ ಸಮಯದಲ್ಲಿ ನೀಲಿ ರತ್ನವನ್ನು ಧರಿಸಿದರೆ ಯಶಸ್ಸು ಇನ್ನಷ್ಟು ಹೆಚ್ಚಲಿದೆ.
ಇದನ್ನೂ ಓದಿ : ಈ 5 ರಾಶಿಯವರು ಸಖತ್ ರೊಮ್ಯಾಂಟಿಕ್: ಕಂಡ ತಕ್ಷಣ ಇವರ ಮೇಲೆ ಆಗುತ್ತೆ ಲವ್!
ಮೀನ ರಾಶಿ :
ಅಖಂಡ ಸಾಮ್ರಾಜ್ಯದ ರಾಜಯೋಗವು ಮೀನ ರಾಶಿಯವರಿಗೆ ಕೂಡಾ ತುಂಬಾ ಮಂಗಳಕರವಾಗಿರುತ್ತದೆ. ನಿಮ್ಮ ರಾಶಿಯಿಂದ ಶನಿದೇವನು 11ನೇ ಸ್ಥಾನದಲ್ಲಿರಲಿದ್ದಾನೆ. ಶನಿಯು ನೇರ ನಡೆ ಆರಂಭಿಸುವುದರಿಂದ ಮೀನ ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರ ಆದಾಯ ಹೆಚ್ಚಾಗಲಿದೆ. ಇದಲ್ಲದೆ, ಹೊಸ ಆದಾಯದ ಮೂಲಗಳು ಸಹ ತೆರೆದುಕೊಳ್ಳುತ್ತವೆ. ಹೂಡಿಕೆ ಮಾಡಲು ಈ ಸಮಯವು ತುಂಬಾ ಅನುಕೂಲಕರವಾಗಿದೆ. ಹೊಸ ವ್ಯಾಪಾರ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ಲಾಭ ಸಿಗಲಿದೆ.
ಧನು ರಾಶಿ :
ಅಖಂಡ ಸಾಮ್ರಾಜ್ಯ ರಾಜಯೋಗ' ಧನು ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ಅವಧಿಯಲ್ಲಿ, ಧನು ರಾಶಿಯವರಿಗೆ ಹಠಾತ್ ಧನಲಾಭಾವಾಗಬಹುದು. ಯಾರಿಗಾದರೂ ಸಾಲ ನೀಡಿದ್ದರೆ, ಆ ಹಣ ಮರಳಿ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಲಕ್ಷ್ಮೀ ದೇವಿಯ ಆಶೀರ್ವಾದ ಈ ರಾಶಿಯವರ ಮೇಲೆ ಇರಲಿದೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಜನರು ಈ ಅವಧಿಯಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಈ ಸಮಯದಲ್ಲಿ, ನೀಲಮಣಿ ರತ್ನವನ್ನು ಧರಿಸಬಹುದು.
ಇದನ್ನೂ ಓದಿ : Astro Tips: ಈ ಅಂಗಗಳ ಸೆಳೆತ ನಿಮ್ಮ ಜೀವನದಲ್ಲಿ ಮುಂಬರುವ ಘಟನೆಗಳ ಸಂಕೇತ.!
(Disclaimer: ಈ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.