ನವದಹಲಿ: ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ಇಂದು ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ. ತಾಯಿ ದುರ್ಗಾದೇವಿಯನ್ನು ಪೂಜಿಸುವ ಶಾರದೀಯ ನವರಾತ್ರಿ ಉತ್ಸವವು ಸೆಪ್ಟೆಂಬರ್ 26ರಿಂದ 9 ದಿನಗಳವರೆಗೆ ಪ್ರಾರಂಭವಾಗುತ್ತದೆ. ಈ ವೇಳೆ ದುರ್ಗಾಪೂಜೆ, ಶುಭ ಮಹಾಲಯ ಮಹೋತ್ಸವ ನಡೆಯಲಿದ್ದು, ಅಕ್ಟೋಬರ್ 5ರಂದು ದಸರಾದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಪವಿತ್ರ 9 ದಿನಗಳು ಕೆಲವು ರಾಶಿಯ ಜನರಿಗೆ ಬಹಳ ಮಂಗಳಕರವೆಂದು ಸಾಬೀತುಪಡಿಸುತ್ತದೆ. ತಾಯಿ ದುರ್ಗಾದೇವಿಯ ಆಶೀರ್ವಾದದಿಂದ ಈ ರಾಶಿಯವರ ವೃತ್ತಿ, ವ್ಯವಹಾರದಲ್ಲಿ ದೊಡ್ಡ ಪ್ರಗತಿ ಪಡೆಯಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
ಇದನ್ನೂ ಓದಿ: ಶನಿ ಮಾರ್ಗಿ ಚಲನೆ 2022: ಅಕ್ಟೋಬರ್ ಬಳಿಕ ಈ ರಾಶಿಯವರಿಗೆ ಎಂದೂ ಕಂಡಿರದ ಲಾಭ ಸಿಗುತ್ತೆ...!
ನವರಾತ್ರಿಯಲ್ಲಿ ಈ ಜನರ ಅದೃಷ್ಟವು ಬೆಳಗಲಿದೆ
ವೃಷಭ ರಾಶಿ: ಶಾರದೀಯ ನವರಾತ್ರಿಯ 9 ದಿನಗಳು ವೃಷಭ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಇವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವೃತ್ತಿ ಜೀವನದಲ್ಲಿ ದೊಡ್ಡ ಪ್ರಗತಿ ಕಾಣಲಿದೆ. ಹೊಸ ಉದ್ಯೋಗಾವಕಾಶ, ಬಡ್ತಿ ದೊರೆಯಬಹುದು. ಆದಾಯ ಹೆಚ್ಚಿಸುವ ಬಲವಾದ ಅವಕಾಶಗಳಿವೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ಮಾರಾಟ ಹೆಚ್ಚಾಗುತ್ತದೆ, ಅಧಿಕ ಲಾಭವೂ ಸಿಗಲಿದೆ.
ವೃಶ್ಚಿಕ ರಾಶಿ: ಈ 9 ದಿನಗಳು ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಪ್ರಗತಿ, ಹಣ ಮತ್ತು ಸಂತೋಷ ನೀಡುತ್ತದೆ. ಆದಾಯ ಹೆಚ್ಚಲಿದ್ದು, ಅನಿರೀಕ್ಷಿತ ಹಣದ ಲಾಭವಾಗಬಹುದು. ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ: peony flowers: ಶೀಘ್ರ ಕಂಕಣ ಭಾಗ್ಯ ಕೂಡಿಬರಲು ಮನೆ ಈ ದಿಕ್ಕಿನಲ್ಲಿ ಈ ಹೂವಿನ ಗಿಡ ನೆಡಿ
ಕುಂಭ ರಾಶಿ: ಕುಂಭ ರಾಶಿಯವರಿಗೆ ದುರ್ಗಾದೇವಿಯ ಆಶೀರ್ವಾದದಿಂದ ಬಹಳಷ್ಟು ಸಂತೋಷ ಸಿಗುತ್ತದೆ. ಹೂಡಿಕೆ ಲಾಭದಾಯಕವಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿಜೀವನವನ್ನು ಸುಧಾರಿಸುವ ಪ್ರಯತ್ನಗಳಲ್ಲಿ ಯಶಸ್ಸು ಇರುತ್ತದೆ. ಹಳೆಯ ಸಮಸ್ಯೆಗಳು ದೂರವಾಗುತ್ತವೆ.
ಧನು ರಾಶಿ: ನವರಾತ್ರಿಯ 9 ದಿನಗಳು ಧನು ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಕೆಲಸದ ಸ್ಥಳದಲ್ಲಿ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವವು ಉತ್ತಮವಾಗಿರುತ್ತದೆ. ನೀವು ಪ್ರಗತಿಯನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.