ಕೇವಲ 12 ಸಾವಿರ ರೂಪಾಯಿಗಳಲ್ಲಿ ಐಫೋನ್ ಖರೀದಿಸುವ ಅವಕಾಶ, ಏನಿದು ಆಫರ್ ತಿಳಿಯಿರಿ

iPhone under Rs 12K: ನೀವೂ ಸಹ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ ಒಳ್ಳೆಯ ಅವಕಾಶವಿದೆ. ಇಂದಿನಿಂದ ಆರಂಭವಾಗಿರುವ  ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ನೀವು 12,000 ರೂಪಾಯಿಗಿಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದು. ಇದು ಹೇಗೆ ಸಾಧ್ಯ, ಇದರಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಿದೆ ಎಂದು ತಿಳಿಯಲು ಮುಂದೆ ಓದಿ...

Written by - Yashaswini V | Last Updated : Sep 23, 2022, 08:36 AM IST
  • ಇ-ಕಾಮರ್ಸ್ ದೈತ್ಯರಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಐಫೋನ್‌ನಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ

    ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಗ್ರಾಹಕರು iPhone SE ಮತ್ತು iPhone SE 3 ಮೇಲೆ ಭರ್ಜರಿ ಡಿಸ್ಕೌಂಟ್
  • ಈಗ ಬಳಕೆದಾರರು 12,000 ರೂ.ಗೆ ಐಫೋನ್ ಅನ್ನು ಖರೀದಿಸಬಹುದಾಗಿದೆ.
ಕೇವಲ 12 ಸಾವಿರ ರೂಪಾಯಿಗಳಲ್ಲಿ ಐಫೋನ್ ಖರೀದಿಸುವ ಅವಕಾಶ, ಏನಿದು ಆಫರ್ ತಿಳಿಯಿರಿ  title=
Flipkart Big Billion Days Sale 2022

Flipkart Big Billion Days Sale 2022: ಫ್ಲಿಪ್‌ಕಾರ್ಟ್‌ನಲ್ಲಿ  ಇಂದಿನಿಂದ  ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2022 ಆರಂಭವಾಗಿದೆ. ನೀವೂ ಸಹ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಒಳ್ಳೆಯ ಸಮಯ. ಇ-ಕಾಮರ್ಸ್ ದೈತ್ಯರಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಐಫೋನ್‌ನಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಈಗ ಬಳಕೆದಾರರು 12,000 ರೂ.ಗೆ ಐಫೋನ್ ಅನ್ನು ಖರೀದಿಸಬಹುದಾಗಿದೆ.  

ಮಾರ್ಚ್ 2022 ರಲ್ಲಿ ಬಿಡುಗಡೆಯಾದ ಎರಡನೇ ತಲೆಮಾರಿನ iPhone SE ಅನ್ನು ವಿವಿಧ ಕೊಡುಗೆಗಳೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲು ಉತ್ತಮ ಅವಕಾಶವಿದೆ.    ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಗ್ರಾಹಕರು iPhone SE ಮತ್ತು iPhone SE 3 ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಲಿದ್ದಾರೆ. ಐಫೋನ್ ಅನ್ನು ಕಡಿಮೆ ಬೆಲೆಗೆ ಮನೆಗೆ ಕೊಂಡೊಯ್ಯಲು ಇರುವ ಕೊಡುಗೆಗಳ ಬಗ್ಗೆ ತಿಳಿಯೋಣ...

ಇದನ್ನೂ ಓದಿ- ಚೈನೀಸ್ ಸ್ಮಾರ್ಟ್‌ಫೋನ್‌ಗಳಿಗೆ ಟಕ್ಕರ್ ನೀಡಿದ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್, ಬೆಲೆಯೂ ಕಡಿಮೆ

12 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ iPhone SE 64GB ಲಭ್ಯ: 
ಫ್ಲಿಪ್‌ಕಾರ್ಟ್ 64ಜಿಬಿ ಮಾದರಿಯ iPhone SE ಬೆಲೆಯಲ್ಲಿ ಡಿಸ್ಕೌಂಟ್ ಘೋಷಿಸಿದೆ. ಇದರ ಬೆಲೆ 39,900 ರೂ. ಆಗಿದ್ದು, ಪ್ಲಾಟ್‌ಫಾರ್ಮ್ ರೂ 9,401 ರ ರಿಯಾಯಿತಿಯನ್ನು ನೀಡುತ್ತಿದೆ, ಇದು ಬೆಲೆಯನ್ನು ರೂ. 30,499 ಕ್ಕೆ ಇಳಿಸುತ್ತದೆ. ಗ್ರಾಹಕರು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುವ ಇತರ ಅನೇಕ ಕೊಡುಗೆಗಳ ಲಾಭವನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್ 19,000 ರೂಪಾಯಿಗಳ ಎಕ್ಸ್‌ಚೇಂಜ್ ಡಿಸ್ಕೌಂಟ್ ಅನ್ನು ಸಹ ನೀಡುತ್ತಿದೆ, ಇದು ಬೆಲೆಯನ್ನು 11,499 ಕ್ಕೆ ಇಳಿಸುತ್ತದೆ. ಆದಾಗ್ಯೂ, ವಿನಿಮಯ ರಿಯಾಯಿತಿಯು ಸ್ಮಾರ್ಟ್‌ಫೋನ್‌ನ ಸ್ಥಿತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ ಇತ್ತೀಚಿನದ್ದಾಗಿದ್ದರೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ- Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್!

iPhone SE 3 ನಲ್ಲಿಯೂ ಭರ್ಜರಿ ಡಿಸ್ಕೌಂಟ್:
49,900 ಬೆಲೆಯ iPhone SE 3 ನಲ್ಲಿ, ಬಳಕೆದಾರರು 6,000 ರೂಪಾಯಿಗಳ ರಿಯಾಯಿತಿ ಮತ್ತು 19,000 ರೂಪಾಯಿಗಳ ಎಕ್ಸ್‌ಚೇಂಜ್  ಆಫರ್ ಅನ್ನು ಪಡೆಯಬಹುದು. ಬಳಕೆದಾರರು ಎಲ್ಲಾ ರಿಯಾಯಿತಿಗಳನ್ನು ಒಳಗೊಂಡಂತೆ ರೂ. 24,900 ಕ್ಕೆ iPhone Se 3 ಅನ್ನು ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News