59 ವರ್ಷಗಳ ನಂತರ 5 ರಾಜಯೋಗಗಳ ಅದ್ಭುತ ಸಂಯೋಜನೆ, ಈ ರಾಶಿಯವರಿಗೆ ಭಾರೀ ಧನ ಲಾಭ

ಈ ಬಾರಿ ಸೆ.24ರಂದು ಏಕಕಾಲಕ್ಕೆ 5 ಶಕ್ತಿಶಾಲಿ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಅದ್ಭುತ ಸಂಯೋಗವು 59 ವರ್ಷಗಳ ನಂತರ ಸಂಭವಿಸಲಿದೆ.

ಬೆಂಗಳೂರು : ಜ್ಯೋತಿಷ್ಯದಲ್ಲಿ, ರಾಶಿಚಕ್ರದಲ್ಲಿನ ಬದಲಾವಣೆ, ಚಲನೆಯಲ್ಲಿನ ಬದಲಾವಣೆ ಮತ್ತು ಪ್ರತಿ ಗ್ರಹದ ಸ್ಥಾನದ ಬದಲಾವಣೆಯ ಆಧಾರದ ಮೇಲೆಯೇ ಎಲ್ಲಾ ರೀತಿಯ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಗ್ರಹಗಳ ಸಂಚಾರ ಮತ್ತು ಗ್ರಹಗಳ ಸ್ಥಾನಗಳಲ್ಲಿನ ಬದಲಾವಣೆಗಳು ಎಲ್ಲಾ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಈ ಬಾರಿ ಸೆ.24ರಂದು ಏಕಕಾಲಕ್ಕೆ 5 ಶಕ್ತಿಶಾಲಿ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಅದ್ಭುತ ಸಂಯೋಗವು 59 ವರ್ಷಗಳ ನಂತರ ಸಂಭವಿಸಲಿದೆ. ಈ ದಿನ ಶನಿ, ಬುಧ ಮತ್ತು ಗುರು ಹಿಮ್ಮುಖ ಚಲನೆಯಲ್ಲಿರುತ್ತಾರೆ. ಇದಲ್ಲದೆ, ಸೂರ್ಯ ಮತ್ತು ಬುಧರು ಒಟ್ಟಾಗಿ ಬುಧಾದಿತ್ಯ ಯೋಗ ರೂಪಿಸಲಿದ್ದಾರೆ. ಶುಕ್ರ ಸಂಕ್ರಮಣದಿಂದಾಗಿ ನೀಚ ಭಂಗ ರಾಜಯೋಗ ಸೃಷ್ಟಿಯಾಗುತ್ತಿದೆ. ಈ ರೀತಿಯಾಗಿ, ಸೆಪ್ಟೆಂಬರ್ 24, 2022 ರಂದು, ಎರಡು ರೀತಿಯ ನೀಚ ಭಂಗ ರಾಜಯೋಗ, ಬುಧಾದಿತ್ಯ ರಾಜಯೋಗ, ಭದ್ರ ರಾಜಯೋಗ, ಮತ್ತು ಹಂಸ ರಾಜಯೋಗವು ರೂಪುಗೊಳ್ಳುತ್ತಿದೆ. ಈ 5 ರಾಜಯೋಗಗಳು 5 ರಾಶಿಗಳ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೃಷಭ: ಈ ರಾಜಯೋಗಗಳು ವೃಷಭ ರಾಶಿಯವರಿಗೆ ಲಾಭವನ್ನು ತರುತ್ತವೆ. ವ್ಯಾಪಾರದಲ್ಲಿ ಸಾಕಷ್ಟು ಲಾಭವಾಗಲಿದೆ. ಶನಿಗೆ ಸಂಬಂಧಿಸಿದ ವಸ್ತುಗಳ ವ್ಯಾಪಾರಿಗಳಿಗೆ, ಈ ಸಮಯವು ವರದಾನವಾಗಿರಲಿದೆ. ಷೇರುಗಳು,  ಲಾಟರಿಗಳಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಹಠಾತ್ ಹಣದ ಲಾಭವಾಗಬಹುದು

2 /5

ಮಿಥುನ: ವೃತ್ತಿ, ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ  ಪ್ರಯೋಜನವಾಗಲಿದೆ. ರಾಜಕಾರಣಿಗಳು ದೊಡ್ಡ ಹುದ್ದೆಗಳನ್ನು ಪಡೆಯಬಹುದು. ಬಯಸಿದ ಸ್ಥಳಕ್ಕೆ ವರ್ಗಾವಣೆ ಪಡೆದುಕೊಳ್ಳಬಹುದು.  ಪ್ರತಿಯೊಂದು ಕೆಲಸದಲ್ಲೂ ಅದೃಷ್ಟದ ಬೆಂಬಲ ಸಿಗುವುದರಿಂದ ಯಶಸ್ಸು ಸಿಗಲಿದೆ.   

3 /5

ಕನ್ಯಾ: ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಬಹುದು. ಹಠಾತ್ ಆರ್ಥಿಕ ಲಾಭವಾಗಬಹುದು. ಹೊಸ ಉದ್ಯೋಗ ಆಫರ್ ಬರಬಹುದು. ಮಾಧ್ಯಮ, ಚಲನಚಿತ್ರ ಪ್ರಪಂಚದೊಂದಿಗೆ ಸಂಬಂಧ ಹೊಂದಿರುವ ಜನರು ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. 

4 /5

ಧನು: ಈ ಸಮಯ ವ್ಯಾಪಾರಕ್ಕೆ ಉತ್ತಮವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುವ ಅವಕಾಶ ಸಿಗಬಹುದು. ಇದು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಹಣಕಾಸಿನ ಲಾಭ ಹೆಚ್ಚೇ ಇರಲಿದೆ.   

5 /5

ಮೀನ: ಈ ಸಮಯವು ಎಲ್ಲಾ ವಿಷಯದಲ್ಲೂ ತುಂಬಾ ಒಳ್ಳೆಯದು. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಬಡ್ತಿ ಸಿಗುವ ಸಂಭವ ಹೆಚ್ಚಿದೆ. ವೇತನ ಹೆಚ್ಚಾಗುವ ಬಲವಾದ ಅವಕಾಶಗಳಿವೆ. ವ್ಯಾಪಾರ ವೃದ್ಧಿಯಾಗಲಿದೆ. ಲಾಭ ಹೆಚ್ಚಾಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.  ( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)