NRI News: ಯುನೈಟೆಡ್ ಸ್ಟೇಟ್ಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ ಎಂದು ನವದೆಹಲಿಯಲ್ಲಿರುವ ಕಾನ್ಸುಲರ್ ವ್ಯವಹಾರಗಳ ಯುಎಸ್ ರಾಯಭಾರ ಸಚಿವ ಡಾನ್ ಹೆಫ್ಲಿನ್ ಬುಧವಾರ ಹೇಳಿದ್ದಾರೆ, ಈ ಬೇಸಿಗೆಯಲ್ಲಿ 82,000 ವಿದ್ಯಾರ್ಥಿ ವೀಸಾಗಳನ್ನು ವಿತರಿಸುವ ದೇಶದ ಇತ್ತೀಚಿನ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ-NRIಗಳು ಆಧಾರ್ ಕಾರ್ಡ್ ಪಡೆಯಲು ಅರ್ಹರೇ? ಇಲ್ಲಿದೆ ಮಹತ್ವದ ಮಾಹಿತಿ
ಕಳೆದ ವಾರ, ಭಾರತದಲ್ಲಿನ US ರಾಜತಾಂತ್ರಿಕ ನಿಯೋಗಗಳು ಮೇ ಮತ್ತು ಜೂನ್ 2022 ರ ನಡುವೆ ದಾಖಲೆಯ 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿವೆ - ಇದು ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-NEET PG 2022 Counselling: MCC ಅಭ್ಯರ್ಥಿಗಳಿಗೆ ರಾಷ್ಟ್ರೀಯತೆ ಬದಲಾಯಿಸಲು ಗಡುವು ನೀಡಿದ ಸಮಿತಿ
"ನಾವು ಈ ಬೇಸಿಗೆಯಲ್ಲಿ ಒಟ್ಟು 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದೇವೆ, ಇದು ನಮಗೆ ದಾಖಲೆಯಾಗಿದೆ. ಕಳೆದ ವರ್ಷ ನಾವು 62000 ವಿದ್ಯಾರ್ಥಿ ವಿಸಾಗಳನ್ನು ನೀಡುವ ದಾಖಲೆಯನ್ನು ಮಾಡಿದ್ದೇವೆ ಮತ್ತು ಆಸಕ್ತಿದಾಯಕ ಸಂಗತಿ ಎಂದರೆ ಈ ವರ್ಷ ಇತರ ದೇಶಗಳಲ್ಲಿನ ಕೋವಿಡ್ ಸಂಬಂಧಿತ ಸಮಸ್ಯೆಗಳಿದ್ದರೂ ಕೂಡ ವಿದ್ಯಾರ್ಥಿಗಳನ್ನು US ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ " ಎಂದು ಹೆಫ್ಲಿನ್ ಎಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.