ವ್ಯಕ್ತಿಯು ಜನಿಸಿದ ಗ್ರಹ-ನಕ್ಷತ್ರಗಳ ಪ್ರಕಾರ, ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸಲಾಗುತ್ತದೆ. ಕೆಲವು ರಾಶಿಯಲ್ಲಿ ಜನಿಸಿದವರು ವಿಪರಿತ ಸೋಮಾರಿಗಳಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ.
ಬೆಂಗಳೂರು : ಸೋಮಾರಿತನವು ವ್ಯಕ್ತಿಯ ಕೆಟ್ಟ ಶತ್ರು. ಮನುಷ್ಯನಾದವನಿಗೆ ವಿಶ್ರಾಂತಿ ಬೇಕು. ಆದರೆ ವಿಶ್ರಾಂತಿಯೇ ಒಂದು ರೀತಿಯ ಚಟವಾಗಿ ಹೋಗಬಾರದು. ಮಿತಿ ಮೀರಿದ ವಿಶ್ರಾಂತಿ ಪಡೆಯುವವರು ಸೋಮಾರಿತನದ ವರ್ಗಕ್ಕೆ ಸೇರುತ್ತಾರೆ. ವ್ಯಕ್ತಿಯು ಜನಿಸಿದ ಗ್ರಹ-ನಕ್ಷತ್ರಗಳ ಪ್ರಕಾರ, ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸಲಾಗುತ್ತದೆ. ಕೆಲವು ರಾಶಿಯಲ್ಲಿ ಜನಿಸಿದವರು ವಿಪರಿತ ಸೋಮಾರಿಗಳಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧನು ರಾಶಿಯವರು ತಿರುಗಾಡುವ ವಿಚಾರದಲ್ಲಿ ಬಹಳ ಸೋಮಾರಿಗಳಾಗಿರುತ್ತಾರೆ. ಪದೇ ಪದೇ ಎದ್ದು ನಡೆಯುವುದು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಸಡಾ ಕುಳಿತುಕೊಂಡು ಆರಾಮ ಮಾಡುವುದೆಂದರೆ ಇವರಿಗೆ ಬಹಳ ಇಷ್ಟ. ಧನು ರಾಶಿಯವರು ಎಷ್ಟು ಸೋಮಾರಿಗಳೆಂದರೆ ತಿನ್ನಲು ಎದ್ದೇಳುವುದು ಕೂಡಾ ಅವರಿಗೆ ಇಷ್ಟವಾಗುವುದಿಲ್ಲ.
ಮೀನ ರಾಶಿಯವರು ಸಂಪೂರ್ಣವಾಗಿ ಸೋಮಾರಿಗಳಾಗಿರುವುದಿಲ್ಲ. ಅವರ ಸೋಮಾರಿತನವು ಸಮಯ ಮತ್ತು ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅವರ ಮೂಡ್ ಸರಿಯಾಗಿದ್ದರೆ ಎಲ್ಲಾ ಕೆಲಸಗಳನ್ನೂ ಖುಷಿಯಿಂದ ಮಾಡುತ್ತಾರೆ. ಆದರೆ ಮೂಡ್ ಸರಿಯಿಲ್ಲದಿದ್ದರೆ ಸ್ವಲ್ಪ ಓಡಾಟವನ್ನು ಕೂಡಾ ಅವರು ಸಹಿಸುವುದಿಲ್ಲ.
ಕುಂಭ ರಾಶಿಯವರು ಯಾವುದೇ ಕೆಲಸವನ್ನು ಮತ್ತೆ ಮತ್ತೆ ಮಾಡಲು ಇಷ್ಟಪಡುವುದಿಲ್ಲ. ಈ ರಾಶಿಯವರು ಹೆಚ್ಚು ಕಷ್ಟಕರವಾದ ವೃತ್ತಿಯನ್ನು ಆರಿಸಿಕೊಳ್ಳುವುದರಿಂದ ದೂರ ಉಳಿಯುತ್ತಾರೆ. ಇವರಿಗೆ ಏನೇ ಕೆಲಸ ಆಗಬೇಕಾದರೂ ಬಹಲ್ ಸುಲಭವಾಗಿ ಆಗಬೇಕು. ಸುಲಭವಾದ ಕೆಲಸಗಳನ್ನು ಮಾಡಲು ಮಾತ್ರ ಅವರು ಇಷ್ಟಪಡುತ್ತಾರೆ. ಆದರೂ ಈ ರಾಶಿಯವರಿಗೆ ಏನಾದರೂ ಜವಾಬ್ದಾರಿ ಕೊಟ್ಟರೆ ಅದರಿಂದ ಹಿಂದೆ ಸರಿಯುವುದಿಲ್ಲ.
ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯಲು ಇಷ್ಟಪಡುತ್ತಾರೆ. ಶೀಘ್ರದಲ್ಲೇ ಜನಪ್ರಿಯರಾಗಲು ಬಯಸುತ್ತಾರೆ. ನೃತ್ಯ ಮತ್ತು ಹಾಡುಗಳಂತಹ ಸೃಜನಶೀಲ ಕೆಲಸಗಳಲ್ಲಿ ಅವರಿಗೆ ಆಸಕ್ತಿ ಹೆಚ್ಚು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಕಠಿಣ ಪರಿಶ್ರಮದಿಂದ ದೂರ ಓಡುತ್ತಾರೆ. ಸಿಂಹ ರಾಶಿಯವರು ಒತ್ತಡಕ್ಕೆ ಒಳಗಾಗುತ್ತಾರೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)