ಸಮಂತಾಗೆ ವಿಚ್ಛೇದನ ನೀಡುತ್ತಿದ್ದಂತೆಯೇ ನಾಗಾರ್ಜುನ ಕುಟುಂಬದ ಸೊಸೆಯಾಗಲು ರೆಡಿಯಾದ ಖ್ಯಾತ ನಟಿ!

ಸೂಪರ್‌ಸ್ಟಾರ್ ನಾಗ ಚೈತನ್ಯ  ಇತ್ತೀಚಿನ ದಿನಗಳಲ್ಲಿ ತಮ್ಮ ಲವ್ ಲೈಫ್ ಗೆ ಸಂಬಂಧಪಟ್ಟಂತೆ ಸುದ್ದಿಯಲ್ಲಿದ್ದಾರೆ. ಸಮಂತಾಗೆ ವಿಚ್ಛೇದನ ನೀಡಿದ ನಂತರ ನಾಗ ಚೈತನ್ಯ ಅವರು ನಟಿ ಶೋಭಿತಾ ಧೂಳಿಪಾಲ ಅವರ ಪ್ರೇಮ ಜಾಡಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೋಭಿತಾ ಧೂಳಿಪಾಲ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳದ್ದು. ಆದರೆ, ಇವರಿಬ್ಬರ ಸಂಬಂಧದ ಬಗ್ಗೆ ಇಬ್ಬರೂ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ. 

ಬೆಂಗಳೂರು : ಸೂಪರ್‌ಸ್ಟಾರ್ ನಾಗ ಚೈತನ್ಯ  ಇತ್ತೀಚಿನ ದಿನಗಳಲ್ಲಿ ತಮ್ಮ ಲವ್ ಲೈಫ್ ಗೆ ಸಂಬಂಧಪಟ್ಟಂತೆ ಸುದ್ದಿಯಲ್ಲಿದ್ದಾರೆ. ಸಮಂತಾಗೆ ವಿಚ್ಛೇದನ ನೀಡಿದ ನಂತರ ನಾಗ ಚೈತನ್ಯ ಅವರು ನಟಿ ಶೋಭಿತಾ ಧೂಳಿಪಾಲ ಅವರ ಪ್ರೇಮ ಜಾಡಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೋಭಿತಾ ಧೂಳಿಪಾಲ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳದ್ದು. ಆದರೆ, ಇವರಿಬ್ಬರ ಸಂಬಂಧದ ಬಗ್ಗೆ ಇಬ್ಬರೂ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ. 

ನಾಗಾ ಮತ್ತು ಸಮಂತಾ ಪರಸ್ಪರ ಬೇರ್ಪಟ್ಟ ನಂತರ ತಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದಾರೆ. ಈ ದಿನಗಳಲ್ಲಿ ಸಮಂತಾ ತನ್ನ ವೃತ್ತಿಜೀವನದತ್ತ ಗಮನಹರಿಸುತ್ತಿದ್ದರೆ, ನಾಗ ಚೈತನ್ಯ ಮತ್ತೊಮ್ಮೆ ತನ್ನ ಪ್ರೀತಿ ಪ್ರೇಮ ಎಂದು ಉತ್ಸಾಹದಲ್ಲಿದ್ದಾರೆ. ವಿಚ್ಛೇದನದ ಕೆಲವೇ ತಿಂಗಳುಗಳ ನಂತರ, ದಕ್ಷಿಣದ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಅವರ ಹೆಸರನ್ನು ಲಿಂಕ್ ಮಾಡಲಾಗುತ್ತಿದೆ. ಇದೀಗ ಶೋಭಿತಾ ಇತ್ತೀಚೆಗಷ್ಟೇ ತಮ್ಮ ಲೇಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಶೋಭಿತಾ ಧೂಳಿಪಾಲ ಅವರು ತಮ್ಮ ಟ್ರೇಲರ್ ಲಾಂಚ್ ಲುಕ್‌ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

2 /8

ಇತ್ತೀಚೆಗಷ್ಟೇ ಪೊನ್ನಿಯನ್ ಸೆಲ್ವನ್' ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ಜೊತೆಗೆ ನಟಿ ಶೋಭಿತಾ ಧೂಳಿಪಾಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೋಭಿತಾ ಧೂಳಿಪಾಳ ಅವರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಬಹಳ ಅದ್ಭುತವಾದ ಲುಕ್‌ನಲ್ಲಿ ಆಗಮಿಸಿದ್ದರು.

3 /8

ಶೋಭಿತಾ ಧೂಳಿಪಾಲ ಅವರು ತಮ್ಮ ಟ್ರೇಲರ್ ಲಾಂಚ್ ಲುಕ್‌ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

4 /8

ಈ ಲುಕ್‌ನಲ್ಲಿ ಶೋಭಿತಾ ಧೂಳಿಪಾಲ ಗೋಲ್ಡನ್ ಏಂಜೆಲ್‌ನಂತೆ ಕಾಣುತ್ತಿರುವುದನ್ನು ಕಾಣಬಹುದು. ನಟಿ ಆಫ್ ಶೋಲ್ಡರ್ ಬ್ಲೌಸ್ ಧರಿಸಿದ್ದಾರೆ. ಇದರೊಂದಿಗೆ ಭಾರೀ ಆಭರಣಗಳೊಂದಿಗೆ ಮಿಂಚುತ್ತಿದ್ದಾರೆ.  

5 /8

ಶೋಭಿತಾ  ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಭಾಗವಾಗಿರುವ ಪ್ರಸಿದ್ಧ ನಟಿ. ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಅವರಿಗೆ 35 ವರ್ಷವಾಗಿದ್ದರೆ, ಶೋಭಿತಾ ಅವರಿಗಿಂತ ಐದು ವರ್ಷ ಚಿಕ್ಕವರು.   

6 /8

ಇತ್ತೀಚಿನ ದಿನಗಳಲ್ಲಿ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ.   

7 /8

ನಾಗಾ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕೆಲವು ಸಮಯದ ಹಿಂದೆ, ಇಬ್ಬರೂ ಈ ಮನೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

8 /8

ವರದಿಗಳ ಪ್ರಕಾರ, ನಾಗ ಚೈತನ್ಯ ಶೋಭಿತಾಗೆ ತಮ್ಮ ಐಷಾರಾಮಿ ಮನೆ ತೋರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ, ಇಬ್ಬರೂ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಮನೆಗೆ ಭೇಟಿ ನೀಡಿದ ನಂತರ ನಾಗ ಮತ್ತು ಶೋಭಿತಾ ಕೂಡ ಕಾರಿನಲ್ಲಿ ಒಟ್ಟಿಗೆ ಹೋಗುತ್ತಿರುವುದು ಕಂಡು ಬಂದಿದೆ.