Aak Benefits: ಎಕ್ಕದ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಮಲಬದ್ಧತೆ, ಅತಿಸಾರ, ಕೀಲು ನೋವು, ಹಲ್ಲಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.
Aak Leaves Health Benefits: ಇದುವರೆಗೆ ನೀವು ಎಕ್ಕದ ಎಲೆಗಳನ್ನು ಅಥವಾ ಹೂವುಗಳನ್ನು ಪೂಜೆಯಲ್ಲಿ ಬಳಸುತ್ತಿರುವುದನ್ನು ನೀವು ನೋಡಿರಬಹುದು. ಆದರೆ ಇಂದು ನಾವು ಈ ಎಲೆಯ ಅದ್ಭುತ ಪ್ರಯೋಜನದ ಬಗ್ಗೆ ಹೇಳಲಿದ್ದೇವೆ. ಹೌದು, ಹಲವಾರು ವರ್ಷಗಳಿಂದ ಆಯುರ್ವೇದ ಚಿಕಿತ್ಸೆಯಾಗಿ ಈ ಎಕ್ಕದ ಎಳೆಗಳನ್ನು ಬಳಸಲಾಗುತ್ತೆ. ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ-Vastu Tips: ಮನೆಯಲ್ಲಿರುವ ಈ ಸಂಗತಿಗಳು ನಿಮ್ಮ ಜೇಬು ಖಾಲಿಗೊಳಿಸುತ್ತವೆ, ಇಂದೇ ಹೊರಹಾಕಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನ್ಸುಅರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಎಕ್ಕದ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ, ಅತಿಸಾರ, ಕೀಲು ನೋವು, ಹಲ್ಲಿನ ಸಮಸ್ಯೆಗಳು ಮತ್ತು ದೇಹದ ಸೆಳೆತಗಳಿಗೆ ಚಿಕಿತ್ಸೆ ನೀಡಲು ಈ ಗಿಡವನ್ನು ಬಳಸಲಾಗುತ್ತದೆ.
2. ಅಧ್ಯಯನದಲ್ಲಿ ತಿಳಿದುಬಂದ ಸಂಗತಿ - ಸಕ್ಕರೆ ಕಾಯಿಲೆಗೆ ಎಕ್ಕದ ಎಲೆಗಳಿಂದಲೂ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದೆಡೆ ಎಕ್ಕದ ಸಸ್ಯದ ಸಾರವು ಇನ್ಸುಲಿನ್-ಪ್ರೇರಿತ ಪ್ರತಿರೋಧವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.
3. ಇತರ ಸಸ್ಯಗಳು - ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಮಧುಮೇಹ ರೋಗಿಗಳು ತಮ್ಮ ಜೀವನಶೈಲಿಯಲ್ಲಿ ಬೆಂಡೆಕಾಯಿ, ಮೆಂತ್ಯ, ಜಾಮೂನ್, ದಾಲ್ಚಿನ್ನಿ, ಕೆಂಪು ಮೆಣಸಿನಕಾಯಿ, ತುಳಸಿ, ಶಿಲಾಜಿತ್ ಮತ್ತು ತಮಾಲ್ ಪತ್ರಗಳನ್ನು ಕೂಡ ಸೇರಿಸಿಕೊಳ್ಳಬಹುದು.
4. ಇತರ ರೋಗಗಳ ನಿವಾರಣೆಗೂ ಕೂಡ ಎಕ್ಕದ ಎಲೆ ಬಳಸಲಾಗುತ್ತದೆ - ಎಕ್ಕದ ಗಿಡದ ಬೇರನ್ನು ಕುಷ್ಠರೋಗ, ಎಸ್ಜಿಮಾ, ಅಲ್ಸರ್, ಅತಿಸಾರ ಮತ್ತು ಕೆಮ್ಮುಗಳಲ್ಲಿಯೂ ಕೋಅ ಬಳಸಲಾಗುತ್ತದೆ. ಇದೇ ವೇಳೆ ಯಾವುದೇ ರೀತಿಯ ಗಾಯವನ್ನು ಗುಣಪಡಿಸಲು ಕೂಡ ಎಕ್ಕದ ಎಲೆಗಳನ್ನು ಬಳಸಲಾಗುತ್ತದೆ.
5. ಡಯಾಬಿಟಿಸ್ ನಲ್ಲಿ ಎಕ್ಕದ ಎಲೆಗಳನ್ನು ಹೇಗೆ ಬಳಸಬೇಕು?ಎಕ್ಕದ ಎಲೆಗಳನ್ನು ಉಲ್ಟಾ ಮಾಡಿ ಮತ್ತು ಅದನ್ನು ಅಡಿಭಾಗಕ್ಕೆ ಹಚ್ಚಿ ನಂತರ ಸಾಕ್ಸ್ ಧರಿಸಿ. ರಾತ್ರಿಯಿಡೀ ಇಟ್ಟುಕೊಂಡ ನಂತರ, ಮಾರನೆಯ ದಿನ ಬೆಳಗ್ಗೆ ಪಾದಗಳನ್ನು ತೊಳೆಯಿರಿ. ಇದನ್ನು 1 ವಾರ ನಿರಂತರವಾಗಿ ಮಾಡಿ.
6. ಎಚ್ಚರಿಕೆ - ಗರ್ಭವತಿ ಮಹಿಳೆಯರು ಇದನ್ನು ಬಳಸಬಾರದು. ಅಷ್ಟೇ ಅಲ್ಲ ಎಕ್ಕಿ ಗಿಡದ ಹಾಲು ತುಂಬಾ ವಿಷಕಾರಿಯಗಿರುತ್ತದೆ. ಹೀಗಾಗಿ ಅದನ್ನು ಕಣ್ಣುಗಳ ಸಂಪರ್ಕಕ್ಕೆ ತೆಗೆದುಕೊಂಡು ಹೋಗಬೇಡಿ.